ADVERTISEMENT

ಜಪಾನ್‌ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 20:20 IST
Last Updated 9 ಫೆಬ್ರುವರಿ 2020, 20:20 IST
ಭಾರತೀಯ ಉಡುಗೆ ತೊಟ್ಟು ನೃತ್ಯ ಪ್ರದರ್ಶನ ನೀಡಿದ ಜಪಾನಿನ ಪುಟಾಣಿಗಳು – ಪ್ರಜಾವಾಣಿ ಚಿತ್ರ
ಭಾರತೀಯ ಉಡುಗೆ ತೊಟ್ಟು ನೃತ್ಯ ಪ್ರದರ್ಶನ ನೀಡಿದ ಜಪಾನಿನ ಪುಟಾಣಿಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜಪಾನಿನ ಪುಟಾಣಿಗಳು, ಜಪಾನಿ ಕತೆಗಳ ಪಾತ್ರಗಳಲ್ಲಿ ಕಾಣಿಸಿಕೊಂಡ ಮಕ್ಕಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಉದ್ಯಮಿಗಳು, ಮಹಿಳೆಯರು, ಗಮನ ಸೆಳೆದ ಬಾಲಿವುಡ್‌ ನೃತ್ಯ..

ನಗರದ ಐಐಎಸ್‌ಸಿಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಭಾನುವಾರ ಜರುಗಿದ ‘ಜಪಾನ್‌ ಹಬ್ಬ’ದಲ್ಲಿ ಕಂಡ ದೃಶ್ಯಗಳಿವು. ಜಪಾನ್‌ ಸಂಸ್ಕೃತಿ ಬಿಂಬಿಸುವ ಕರಕುಶಲ ವಸ್ತುಗಳು ಮತ್ತು ವಿಭಿನ್ನ ವಿನ್ಯಾಸದ ಉಡುಗೆಗಳಿದ್ದ 36 ಮಳಿಗೆಗಳನ್ನು ಉತ್ಸವದಲ್ಲಿ ಹಾಕಲಾಗಿತ್ತು. ಈ ಪೈಕಿ, ಶೇ 75ರಷ್ಟು ಜಪಾನಿಯರ ಮಳಿಗೆಗಳೇ ಇದ್ದವು. ಸುಮಾರು 3,500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

‘ಭಾರತ ಮತ್ತು ಜಪಾನ್‌ ನಡುವಿನ ಸಂಪರ್ಕ ಸೇತುವೆಯಾಗಿ 16 ವರ್ಷಗಳಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಜಪಾನ್‌ ಸಂಸ್ಕೃತಿ ಬಗ್ಗೆ ಭಾರತೀಯರಿಗೆ ಪರಿಚಯಿಸುವುದು, ಉಭಯ ದೇಶಗಳ ವಿಭಿನ್ನ ಸಂಸ್ಕೃತಿಯನ್ನು ಅನಾವರಣಗೊಳಸುವುದು ಈ ಉತ್ಸವದ ಉದ್ದೇಶ’ ಎಂದು ಜಪಾನ್‌ ಹಬ್ಬ ಸಂಘಟನಾ ಸಮಿತಿಯ ಮುಖ್ಯಸ್ಥೆ ಎ. ಶ್ರೀವಿದ್ಯಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.