ADVERTISEMENT

ಜಿತೇಂದ್ರ ಕುಮಾರ್‌ಗೆ ಜೀವಣ್ಣ ಪದ್ಮಾವತಮ್ಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:52 IST
Last Updated 2 ಜುಲೈ 2025, 15:52 IST
S Jithendra Kumar
S Jithendra Kumar   

ಬೆಂಗಳೂರು: ಸಾಹಿತಿ ಮತ್ತು ಕರ್ನಾಟಕ ಜೈನ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಎಸ್‌. ಜಿತೇಂದ್ರ ಕುಮಾರ್‌ ಅವರಿಗೆ 2024ನೇ ಸಾಲಿನ ‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ’ ದೊರೆತಿದೆ. ₹25,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಪುರಸ್ಕಾರ ಒಳಗೊಂಡಿದೆ.

ಜೈನಧರ್ಮ ಮತ್ತು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಗಣನೀಯ ಕೊಡುಗೆ ಹಾಗೂ ಸಮಾಜಸೇವೆಯನ್ನು ಪರಿಗಣಿಸಿ ಜಿತೇಂದ್ರ ಕುಮಾರ್‌ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನ ತಿಳಿಸಿದೆ.

ವೈ.ಎನ್‌. ಗುಂಡುರಾವ್‌ ಮತ್ತು ಸ್ವ್ಯಾನ್‌ ಕೃಷ್ಣಮೂರ್ತಿ ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರು. ಜುಲೈ 6ರಂದು ಎನ್.ಆರ್. ಕಾಲೊನಿಯಲ್ಲಿರುವ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್‌ ಎಸ್‌. ದೇಸಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.