ADVERTISEMENT

ಕೈಗಾ: ಮೊದಲ ಘಟಕದಿಂದ ವಿಶ್ವದಾಖಲೆ

941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ

ಸದಾಶಿವ ಎಂ.ಎಸ್‌.
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST
ಕೈಗಾ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ಮೊದಲ ಘಟಕ
ಕೈಗಾ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ಮೊದಲ ಘಟಕ   

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು, ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ಸೋಮವಾರ ಬೆಳಿಗ್ಗೆ 9.20ಕ್ಕೆ ವಿಶ್ವ ದಾಖಲೆ ಬರೆಯಲಿದೆ. ಭಾನುವಾರಕ್ಕೆ 940 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು,ಇಂಗ್ಲೆಂಡ್‌ನ ಹೇಶಮ್ಅಣು ವಿದ್ಯುತ್ ಉತ್ಪಾದನಾ ಘಟಕದ ದಾಖಲೆಯನ್ನು ಸರಿಗಟ್ಟಿತು.

ಇಲ್ಲಿ 2016ರ ಮೇ 13ರಂದು ಬೆಳಿಗ್ಗೆ 9.20ಕ್ಕೆ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿತ್ತು.ಈ ಘಟಕದಲ್ಲಿಭಾರ ಜಲ ರಿಯಾಕ್ಟರ್ ಕಾರ್ಯ ನಿರ್ವಹಿಸುತ್ತಿದೆ. ಈ ಮಾದರಿಯಲ್ಲಿ ನಿರಂತರ ವಿದ್ಯುತ್ ಉತ್ಪಾದಿಸುತ್ತಿರುವ ವಿಶ್ವದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಅ.24ರಂದು (894 ದಿನ) ಪಾತ್ರವಾಗಿತ್ತು.

ಇದಕ್ಕೂ ಮೊದಲು ಈ ವರ್ಷ ಜೂನ್ 18ರಂದು, 766ನೇ ದಿನ ಯಾವುದೇ ಅಡಚಣೆಯಿಲ್ಲದೇಕಾರ್ಯ ನಿರ್ವಹಿಸಿದದೇಶದ ಮೊದಲ ಅಣು ವಿದ್ಯುತ್ ಉತ್ಪಾದನಾ ಘಟಕ ಎಂಬ ಶ್ರೇಯವನ್ನೂ ತನ್ನದಾಗಿಸಿಕೊಂಡಿತ್ತು.

ADVERTISEMENT

220 ಮೆಗಾವಾಟ್ ಸಾಮರ್ಥ್ಯದಈ ಘಟಕವು, ಸೋಮವಾರ ಬೆಳಿಗ್ಗೆ 9 ಗಂಟೆ 19 ನಿಮಿಷದವರೆಗೆ 49.38 ಕೋಟಿ ಯೂನಿಟ್ ಉತ್ಪಾದನೆ ಮಾಡಲಿದೆ. ಘಟಕದ ಕಾರ್ಯನಿರ್ವಹಣೆಯನ್ನು ಆಧರಿಸಿ ಮತ್ತೊಂದಷ್ಟು ದಿನ ವಿದ್ಯುತ್ ಉತ್ಪಾದನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಯಾಕ್ಟರ್‌ನ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಭಾರತೀಯ ಪರಮಾಣು ಪ್ರಾಧಿಕಾರದ ಅಧಿಕಾರಿಗಳು, ಘಟಕವನ್ನು ಡಿ.31ರವರೆಗೆ ಚಾಲನೆಯಲ್ಲಿಡಲು ಅನುಮತಿ ನೀಡಿದ್ದರು. ಅದರಂತೆ ವಿದ್ಯುತ್ ಉತ್ಪಾದನೆ ಮುಂದುವರಿಸಲಾಗಿದ್ದು,ಅಣು ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾ‍ಪಿಸಲು ಸಜ್ಜಾಗಿದೆ.

‘ಮನೋಸ್ಥೈರ್ಯ ವೃದ್ಧಿ’

‘ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ಕಾರ್ಯ ನಿರ್ವಹಿಸುತ್ತಿರುವ ಘಟಕ ಇದಾಗಿದೆ. ನಮ್ಮ ದೇಶದ ಅಣು ವಿದ್ಯುತ್ಯೋಜನೆಗಳು ಅತ್ಯಂತ ಸುರಕ್ಷಿತವಾಗಿವೆ ಎಂದುವಿಶ್ವಕ್ಕೇ ಸಾರುವ ಸಮಯವಿದು ಎಂದು ನಾನು ಭಾವಿಸುತ್ತೇನೆ. ಇಂದು ದೇಶಕ್ಕೆ ತುಂಬಾ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕಿದ್ದು,ಕೈಗಾದ ಮೊದಲ ಘಟಕದದಾಖಲೆಯುವಿಜ್ಞಾನಿಗಳ ಮನೋಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಗಿದೆ’ ಎಂದು ವಿದ್ಯುತ್ ಉತ್ಪಾದನಾ ಘಟಕದ ನಿರ್ದೇಶಕ ಜೆ.ಆರ್.ದೇಶಪಾಂಡೆ ‘ಪ್ರಜಾವಾಣಿ’ ಜತೆ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.