ADVERTISEMENT

ಕಂಬಳದ ‘ಉಸೇನ್‌ ಬೋಲ್ಟ್‌’ ಹೊಸ ದಾಖಲೆ

ಕಂಬಳ: ದಾಖಲೆ ಉತ್ತಮ ಪಡಿಸಿದ ಶ್ರೀನಿವಾಸ ಗೌಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 18:18 IST
Last Updated 28 ಮಾರ್ಚ್ 2021, 18:18 IST
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ   

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಮೈರ ‘ಸತ್ಯ– ಧರ್ಮ’ ಜೋಡುಕರೆ ಕಂಬಳ ದಲ್ಲಿ8.78 ಸೆಕೆಂಡ್‌ ನಲ್ಲಿ 100 ಮೀ. ಅಂತರವನ್ನು ಕ್ರಮಿಸಿ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ತನ್ನದೇ ಹೆಸರಿನಲ್ಲಿದ್ದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ.

ಕಳೆದ ವಾರ ವೇಣೂರು– ಪೆರ್ಮುಡದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.96 ಸೆಕೆಂಡ್‌ನಲ್ಲಿ 100 ಮೀ. ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.

ಹಗ್ಗ ಹಿರಿಯ ವಿಭಾಗದ ಫೈನಲ್‌ನಲ್ಲಿ ಮಿಜಾರು ಪ್ರಸಾದ್‌ ನಿಲಯ ಶಕ್ತಿಪ್ರಸಾದ್‌ ಶೆಟ್ಟಿ ‘ಎ’ ಕೋಣಗಳನ್ನು ಶ್ರೀನಿವಾಸ್‌ ಗೌಡ ಓಡಿಸಿದರು.

ADVERTISEMENT

‘ಕಂಬಳಗಳಲ್ಲಿಈ ಹಿಂದೆ 125 ಮೀಟರ್‌ಗೆ ಸೆನ್ಸಾರ್‌ ಅಳವಡಿಸಿ, ಸಮಯ ದಾಖಲಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮೈರ ಕಂಬಳದಲ್ಲಿ ಸೆನ್ಸಾರ್‌ ಅನ್ನು 100 ಮೀಟರ್‌ಗೆ ಅಳವಡಿಸಲಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.