ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು: ಬಸವರಾಜ ಪಾಟೀಲ ಸೇರಿ ಮೂವರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 9:22 IST
Last Updated 19 ಏಪ್ರಿಲ್ 2023, 9:22 IST
ಬಸವರಾಜ ಸಾದರ, ಬಸವರಾಜ ಪಾಟೀಲ, ಸೌಮ್ಯಾ ಪುತ್ರನ್
ಬಸವರಾಜ ಸಾದರ, ಬಸವರಾಜ ಪಾಟೀಲ, ಸೌಮ್ಯಾ ಪುತ್ರನ್   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ‘ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ’ ಹಾಗೂ ‘ಡಾ ಎಚ್‌. ವಿಶ್ವನಾಥ್‌ ಮತ್ತು ಎಂ.ಎಸ್‌. ಇಂದಿರಾ ದತ್ತಿ’ ಪ್ರಶಸ್ತಿಯನ್ನು ಘೋಷಿಸಿದ್ದು, ಬಸವರಾಜ ಪಾಟೀಲ ಸೇಡಂ ಸೇರಿ ಮೂವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದ ಸಾಧನೆಗೆ 2020ನೇ ಸಾಲಿನ ‘ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ’ ಪ್ರಶಸ್ತಿಗೆ ಸೇಡಂ ಅವರನ್ನು ಆಯ್ಕೆ ಮಾಡಲಾಗಿದೆ. 2021ನೇ ಸಾಲಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಬೆಂಗಳೂರಿನ ‘ಸಂಧ್ಯಾ ದೀಪ ಸಂಸ್ಥೆ’ ಹಾಗೂ 2022ನೇ ಸಾಲಿಗೆ ವಚನ ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡದ ಬಸವರಾಜ ಸಾದರ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿರುವ ಡಾಎಚ್‌. ವಿಶ್ವನಾಥ್‌ ಮತ್ತು ಎಂ.ಎಸ್‌. ಇಂದಿರಾ ದತ್ತಿ’ ಪ್ರಶಸ್ತಿಗೆ ‘ಬೆಳ್ಳಿ ಸೀಮೆಯ ರೈಲ್ವೆ ಸ್ಟೇಷನ್‌’ ಕಾದಂಬರಿಯ ಲೇಖಕಿ, ಉಡುಪಿಯ ಸೌಮ್ಯಾ ಪುತ್ರನ್‌ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆಗಳನ್ನು ನಡೆಸಿದೆ ಎಂದು ಕಸಾಪ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.