ADVERTISEMENT

ಹಿಜಾಬ್: ಉತ್ತರಪ್ರದೇಶವನ್ನಾಗಿಸುವ ಕುಟಿಲ ತಂತ್ರ– ನಾರಾಯಣ ಗೌಡ

ಹಿಜಾಬ್‌– ಶಾಲು ಗಲಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 19:23 IST
Last Updated 8 ಫೆಬ್ರುವರಿ 2022, 19:23 IST
ನಾರಾಯಣ ಗೌಡ
ನಾರಾಯಣ ಗೌಡ   

ಬೆಂಗಳೂರು: ‘ರಾಜ್ಯದ ಶಾಲಾ ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿಸುವ ಕುಟಿಲ ತಂತ್ರ ಹೊಂದಿದ್ದು, ರಾಜ್ಯದ ಜನ ವಿಫಲಗೊಳಿಸಬೇಕು’ ಎಂದುಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

‘ಉಡುಪಿಯ ಒಂದು ಕಾಲೇಜಿನಲ್ಲಿ ಆರಂಭಗೊಂಡ ಸಮಸ್ಯೆ ರಾಜ್ಯಕ್ಕೆ ವ್ಯಾಪಿಸಲು ಕಾರಣವೇನು? ಶಾಂತಿ ಕದಡಲು ಸಂಚು ರೂಪಿಸಿದ ಸಂಘಟನೆಗಳು ಯಾವುವು? ಅವುಗಳಿಗೆ ಸರ್ಕಾರದ ಬೆಂಬಲವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ವಿವಾದವನ್ನು ಆರಂಭದಲ್ಲೇ ಸರ್ಕಾರ ಸೌಹಾರ್ದದಿಂದ ಬಗೆಹರಿಸಬಹುದಿತ್ತು. ಆದರೆ, ಮಂತ್ರಿಗಳು, ಸಂಸದರು, ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಅಕ್ಷಮ್ಯ’ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.