ADVERTISEMENT

ಘಾಟ್‌ ರಸ್ತೆಗಳ ಅಭಿವೃದ್ಧಿಗೆ ₹ 2,069 ಕೋಟಿ: ಸಿ.ಸಿ.ಪಾಟೀಲ

‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ ಕೋಟ್ಯಾನ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:01 IST
Last Updated 13 ಡಿಸೆಂಬರ್ 2021, 22:01 IST
ಸಿ.ಸಿ. ಪಾಟೀಲ
ಸಿ.ಸಿ. ಪಾಟೀಲ   

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದ ಪ್ರಮುಖ 18 ಘಾಟ್‌ ರಸ್ತೆಗಳ ಸುರಕ್ಷತೆಗಾಗಿ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ವಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಅಡಿ ಬರುವ ಘಾಟ್ ರಸ್ತೆಗಳ ಅಭಿವೃದ್ಧಿಗೆ ಸುಮಾರು ₹2,069 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಅತಿ ಹೆಚ್ಚು ಭೂಕುಸಿತಕ್ಕೆ ಒಳಗಾಗುತ್ತಿರುವ ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ಗಳಲ್ಲಿ ಕಾರ್ಯಾದೇಶ ನೀಡಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಲಾಗುವುದು ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಪ್ರಮುಖ ಘಾಟ್‌ ರಸ್ತೆಗಳ ದುಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ ವರದಿಯನ್ನು ಕೋಟ್ಯಾನ್‌ ಉಲ್ಲೇಖಿಸಿದರು.

ADVERTISEMENT

ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಉಂಟಾಗುತ್ತಿರುವ ಸ್ಥಳಗಳಲ್ಲಿ ‘ಮೈಕ್ರೋ ಫಿಲ್ಲಿಂಗ್‌ ಅಂಡ್‌ ಸಾಯಿಲ್‌ ನೈಲಿಂಗ್‌’ ತಂತ್ರಜ್ಞಾನ ಬಳಸಿ ರಸ್ತೆ ಅಭವೃದ್ಧಿಗೆ ₹ 36.52 ಕೋಟಿ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಕಾರ್ಯಾದೇಶ ನೀಡಿ ಕಾಮಾಗಾರಿ ನೀಡಲಾಗುವುದು. ಚಾರ್ಮಡಿ ಘಾಟ್‌ನಲ್ಲಿ 6 ಕಣಿವೆ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದು, ‘ಮೈಕ್ರೋ ಫಿಲ್ಲಿಂಗ್‌ ಅಂಡ್‌ ಸಾಯಿಲ್‌ ನೈಲಿಂಗ್‌’ ತಂತ್ರಜ್ಞಾನ ಬಳಸಿ ₹ 19.36 ಕೋಟಿ ವೆಚ್ಚದಲ್ಲಿ ಒಟ್ಟು 13 ಕಿ.ಮೀ ರಸ್ತೆಯನ್ನು ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.