ADVERTISEMENT

2 ಸಾವಿರ ಸರ್ವೆಯರ್‌ಗಳ ನೇಮಕ: ಅಶೋಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:19 IST
Last Updated 13 ಡಿಸೆಂಬರ್ 2021, 22:19 IST

ಬೆಳಗಾವಿ (ಸುವರ್ಣ ವಿಧಾನಸೌಧ): ಎರಡು ಸಾವಿರ ಸರ್ವೆಯರ್‌ಗಳ ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ’ಈಗಾಗಲೇ 600 ಸರ್ವೆಯರ್‌ಗಳ ನೇಮಕ ಮಾಡಲಾಗಿದೆ. ಸರ್ವೆಯರ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ವೆ ಸರ್ವೆ ಸಮಸ್ಯೆ ಇರುವುದಿಲ್ಲ. ಸರ್ವೆ, ಪೋಡಿ ಸಮಸ್ಯೆ ಬಗೆಹರಿಸಲು ಹೊಸ ಮಸೂದೆ ತರಲಾಗುವುದು‘ ಎಂದರು.

ಗ್ರಾಮ ಲೆಕ್ಕಿಗರ ನೇಮಕ: ಬಿಜೆ‍ಪಿಯ ಕುಮಾರ ಬಂಗಾರಪ್ಪ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ’ಕೋವಿಡ್‌ ಲಾಕ್‌ ಡೌನ್‌ ಹಾಗೂ ಪರಿಷತ್‌ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ಗ್ರಾಮ ಲೆಕ್ಕಿಗರ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ನೇಮಕ ಪ್ರಕ್ರಿಯೆ ನಡೆಸುವರು. ಕೆಪಿಎಸ್‌ಸಿಗೆ ವಹಿಸಿದರೆ ನೇಮಕ ಪ್ರಕ್ರಿಯೆ ವಿಳಂಬವಾಗುತ್ತದೆ‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.