ADVERTISEMENT

ವಿಜಯೇಂದ್ರ ಬದಲಾವಣೆಗೆ ಭಿನ್ನರಿಂದ ಮತ್ತೆ ಒತ್ತಡ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:54 IST
Last Updated 3 ಜುಲೈ 2025, 15:54 IST
ನಿತಿನ್‌ ಗಡ್ಕರಿ ಅವರಿಗೆ ಕುಮಾರ ಬಂಗಾರಪ್ಪ ಹೂಗುಚ್ಛ ನೀಡಿದರು. 
ನಿತಿನ್‌ ಗಡ್ಕರಿ ಅವರಿಗೆ ಕುಮಾರ ಬಂಗಾರಪ್ಪ ಹೂಗುಚ್ಛ ನೀಡಿದರು.    

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ಸಮಾನ ಮನಸ್ಕರ ಗುಂಪು ವರಿಷ್ಠರ ಮೇಲೆ ಮತ್ತೆ ಒತ್ತಡ ಹೇರಿದೆ. 

ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ನವದೆಹಲಿಗೆ ಧಾವಿಸಿದ ಸಮಾನ ಮನಸ್ಕರ ಗುಂಪಿನ ನಾಯಕ ಕುಮಾರ್‌ ಬಂಗಾರಪ್ಪ ಅವರು ಪಕ್ಷದ ಉನ್ನತ ನಾಯಕರ ಭೇಟಿಗೆ ಪ್ರಯತ್ನಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಿಗಲಿಲ್ಲ. ಬಳಿಕ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. 

ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಮ್ಮ ಮಾತುಗಳು ಹಾಗೂ ಅಭಿಪ್ರಾಯಗಳನ್ನು ವರಿಷ್ಠರಿಗೆ ತಲುಪಿಸಲಾಗಿದೆ. ಅವರು ವಸ್ತುಸ್ಥಿತಿ ಅರಿತಿದ್ದಾರೆ. ರಾಜ್ಯದಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ವರಿಷ್ಠರ ತೀರ್ಮಾನಕ್ಕೆ ಬದ್ಧ’ ಎಂದರು. 

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅನೇಕ ತಪ್ಪುಗಳನ್ನು ಮಾಡಿದೆ. ಆದರೆ, ಜನಾಭಿಪ್ರಾಯ ಹಾಗೂ ಜನಾಂದೋಲನ ಮೂಡಿಸಲು ರಾಜ್ಯ ಘಟಕದಿಂದ ಸಹಕಾರ ಸಿಗಲಿಲ್ಲ. ಹಾಗಾಗಿ, ನಾವು ನ್ಯಾಯಾಲಯದ ಮೊರೆ ಹೋದೆವು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.