ADVERTISEMENT

ಕರ್ನಾಟಕ ಬ್ರಾಹ್ಮಣ ಮಹಾಸಭಾ ವೆಂಕಟನಾರಾಯಣ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:19 IST
Last Updated 24 ಫೆಬ್ರುವರಿ 2019, 20:19 IST
ವೆಂಕಟನಾರಾಯಣ್‌
ವೆಂಕಟನಾರಾಯಣ್‌   

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಕೆ.ಎನ್‌. ವೆಂಕಟನಾರಾಯಣ್ ಅವರು ಪುನರಾಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಐದು ಕೇಂದ್ರಗಳಲ್ಲಿ ಫೆ. 17ರಂದು ಮತದಾನ ನಡೆದಿತ್ತು.

ಬೆಂಗಳೂರಿನ ಕೇಂದ್ರದಲ್ಲಿ ಭಾನುವಾರ ಮತದಾನ ಜರುಗಿತು. ಸಂಜೆ ಮತ ಎಣಿಕೆ ಮಾಡಲಾಯಿತು. ವೆಂಕಟನಾರಾಯಣ 5,173 ಮತ ಪಡೆದರೆ, ಪ್ರತಿಸ್ಪರ್ಧಿ ಬಿ.ವಿ. ಮಂಜುನಾಥ 1,725 ಮತ ಗಳಿಸಿದರು. ವೆಂಕಟನಾರಾಯಣ ಅಧಿಕಾರಾವಧಿ ಮೂರು ವರ್ಷಗಳು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.