ADVERTISEMENT

13 ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್‌: ರಾಣೆಬೆನ್ನೂರು ಬಾಕಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 10:57 IST
Last Updated 14 ನವೆಂಬರ್ 2019, 10:57 IST
   

ಬೆಂಗಳೂರು: 16 ಜನಅನರ್ಹ ಶಾಸಕರು ಗುರುವಾರ ಬಿಜೆಪಿಗೆ ಸೇರಿದ ಬೆನ್ನಲೇ ಉಪಚುನಾವಣೆಯಲ್ಲಿ ಸ್ಪರ್ಧಿಸಲು 13 ಜನರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಇಲ್ಲಿನಮಲ್ಲೇಶ್ವರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಕ್ಷಮದಲ್ಲಿ ಅನರ್ಹ ಶಾಸಕರು ಬಿಜೆಪಿ ಬಾವುಟ ಸ್ವೀಕರಿಸಿ ಪಕ್ಷಕ್ಕೆ ಸೇರ್ಪಡೆಯಾದರು.

ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು 13 ಜನ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್‌ ನೀಡಿದೆ.ಶಿವಾಜಿನಗರ ಕ್ಷೇತ್ರದಿಂದ ಎಂ. ಶರವಣ ಅವರಿಗೆ ಟಿಕೆಟ್‌ ನೀಡಲಾಗಿದ್ದು ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರೋಶನ್‌ ಬೇಗ್‌ ಅವರಿಗೆ ನಿರಾಶೆಯಾಗಿದೆ.ರಾಣೆಬೆನ್ನೂರು ಕ್ಷೇತ್ರದ ಅಭ್ಯರ್ಥಿಟಿಕೆಟ್‌ ಘೋಷಣೆ ಬಾಕಿ ಇದೆ.

ADVERTISEMENT

ಬಿಜೆಪಿ ಟಿಕೆಟ್‌ ನೀಡಿರುವ ಪಟ್ಟಿ

ಗೋಕಾಕ– ರಮೇಶ ಜಾರಕಿಹೊಳಿ, ಹುಣಸೂರು– ಎಚ್.ವಿಶ್ವನಾಥ್, ಅಥಣಿ– ಮಹೇಶ್ ಕುಮಠಳ್ಳಿ, ಕಾಗವಾಡ– ಶ್ರೀಮಂತ ಗೌಡ ಪಾಟೀಲ, ಯಲ್ಲಾಪುರ– ಶಿವರಾಮ್ ಹೆಬ್ಬಾರ್, ಹಿರೇಕೆರೂರು– ಬಿ.ಸಿ.ಪಾಟೀಲ, ಹೊಸಪೇಟೆ– ಆನಂದ್ ಸಿಂಗ್, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ, ಕೆ.ಆರ್‌.ಪುರ– ಭೈರತಿ ಬಸವರಾಜ್, ಯಶವಂತಪುರ– ಎಸ್‌.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್‌– ಗೋಪಾಲಯ್ಯ, ಕೆ.ಆರ್‌.ಪೇಟೆ– ನಾರಾಯಣಗೌಡ,ಹೊಸಪೇಟೆ– ಎಂ.ಟಿ.ಬಿ.ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.