ADVERTISEMENT

ಕೆಇಎ: ಆಡಳಿತಾಧಿಕಾರಿ ಇಲ್ಲದೆ ಆಡಳಿತ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 18:32 IST
Last Updated 17 ಫೆಬ್ರುವರಿ 2020, 18:32 IST
   

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸುಗಮ ಆಡಳಿತಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಆಡಳಿತಾಧಿಕಾರಿಯೇ ಇಲ್ಲದೆ ಎರಡು ತಿಂಗಳು ಕಳೆದಿದ್ದು, ಮುಂಬರುವ ಸಿಇಟಿ ಸಹಿತ ಹಲವಾರು ಪರೀಕ್ಷೆಗಳ ಮೇಲೆ ಪ್ರಭಾವ ಬೀರುವ ಆತಂಕ ಎದುರಾಗಿದೆ.

ಕೆಇಎನಲ್ಲಿ ಆಡಳಿತಾಧಿಕಾರಿಯೇ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರಿಯಾಗಿದ್ದು, ಪ್ರತಿಯೊಂದು ಕಡತವೂ ಅವರ ಸುಪರ್ದಿಯಲ್ಲೇ ಮುಂದೆ ಸಾಗಬೇಕಾಗುತ್ತದೆ. ನವೆಂಬರ್‌ನಲ್ಲಿ ಎಂ.ಶಿಲ್ಪಾ ಅವರು ವರ್ಗಾವಣೆಗೊಂಡ ಬಳಿಕ ಅಲ್ಲಿಗೆ ಆಡಳಿತಾಧಿಕಾರಿಯೇ ಇಲ್ಲ. ಸದ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೇ ಹೆಚ್ಚುವರಿ ಹೊಣೆ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶೇಷವೆಂದರೆ ಕೆಇಎನಿಂದ ಮಾಹಿತಿ ಸೋರಿಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮರುದಿನವೇ ಶಿಲ್ಪಾ ಅವರ ವರ್ಗಾವಣೆಯಾಗಿತ್ತು.

ADVERTISEMENT

‘ಕೆಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸಬೇಕೆಂದು ಕೋರಿ ಈಗಾಗಲೇ ಸರ್ಕಾರಕ್ಕೆ ಕಡತ ರವಾನಿಸಲಾಗಿದೆ. ಶೀಘ್ರ ನೇಮಕವಾಗುವಂತೆ ನೋಡಿಕೊಂಡು ತೊಂದರೆ ತಪ್ಪಿಸಲು ಪ್ರಯತ್ನಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.