ADVERTISEMENT

ಐಪಿಎಸ್ ವರ್ಗಾವಣೆ: ಸಿಸಿಬಿಗೆ ರಮಣ್‌ ಗುಪ್ತ

ಐಪಿಎಸ್ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 20:22 IST
Last Updated 31 ಡಿಸೆಂಬರ್ 2021, 20:22 IST
   

ಬೆಂಗಳೂರು: ಹೊಸ ವರ್ಷದ ಮುನ್ನಾ ದಿನವೇ ಬಹಳಷ್ಟು ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ, ಹಲವರನ್ನು ವರ್ಗಾಯಿಸಲಾಗಿದೆ. ಕೆ.ವಿ.ಶರತ್ ಚಂದ್ರ ಅವರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ
ಮಾಡಲಾಗಿದೆ.

ಎಸ್‌.ಮುರುಗನ್‌– ಎಡಿಜಿಪಿ, ಪೊಲೀಸ್‌ ಸಂವಹನ, ಲಾಜಿಸ್ಟಿಕ್ಸ್‌ ಮತ್ತು ಆಧುನೀಕರಣ, ಎಂ.ನಂಜುಂಡಸ್ವಾಮಿ– ಎಡಿಜಿಪಿ, ಗೃಹ ರಕ್ಷಕದಳ, ಸೌಮೇಂದು ಮುಖರ್ಜಿ– ಐಜಿಪಿ, ಗುಪ್ತದಳ, ಬೆಂಗಳೂರು, ಎಸ್‌.ರವಿ– ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪಡೆ, ವಿಪುಲ್‌ ಕುಮಾರ್‌– ಐಜಿಪಿ, ಆಂತರಿಕ ಭದ್ರತೆ ವಿಭಾಗ, ಡಾ.ಎ.ಸುಬ್ರಮಣ್ಯೇಶ್ವರರಾವ್‌– ಐಜಿಪಿ, ಐಜಿ ಎಸಿಪಿ ಬೆಂಗಳೂರು ಪೂರ್ವ, ಲಾಬೂರಾಮ್– ಪೊಲೀಸ್ ಆಯುಕ್ತ, ಹುಬ್ಬಳ್ಳಿ–ಧಾರವಾಡ, ಸಂದೀಪ್‌ ಪಾಟೀಲ್– ಹೆಚ್ಚುವರಿ ಆಯುಕ್ತ, ಬೆಂಗಳೂರು ಪಶ್ಚಿಮ ವಿಭಾಗ, ಡಾ.ಪಿ.ಎಸ್‌.ಹರ್ಷ– ಐಜಿಪಿ, ಆಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ವಿಕಾಶ್‌ ಕುಮಾರ್‌– ಐಜಿಪಿ, ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ (ಬಡ್ತಿ
ಪಡೆದವರು).

ರಮಣ್‌ ಗುಪ್ತ– ಜಂಟಿ ಆಯುಕ್ತ, ಬೆಂಗಳೂರು ಅಪರಾಧ ವಿಭಾಗ(ಸಿಸಿಬಿ), ಡಾ.ಕೆ.ತ್ಯಾಗರಾಜನ್– ಡಿಐಜಿ, ಪೊಲೀಸ್‌ ನೇಮಕಾತಿ ವಿಭಾಗ, ಡಾ.ಎಂ.ಬಿ.ಬೋರಲಿಂಗಯ್ಯ– ಪೊಲೀಸ್ ಆಯುಕ್ತ, ಬೆಳಗಾವಿ ನಗರ, ರಂಜಿತ್ ಕುಮಾರ್ ಬಂಡಾರು– ಎಸ್ಪಿ, ಭಯೋತ್ಪಾದಕ ನಿಗ್ರಹ ಕೇಂದ್ರ, ಅಂಶುಕುಮಾರ್‌– ಎಸ್ಪಿ, ಕರಾವಳಿ ಭದ್ರತೆ, ಉಡುಪಿ, ಸಾಹಿಲ್ ಬಾಗ್ಲಾ– ಡಿಸಿಪಿ,
ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ–ಧಾರವಾಡ, ದೀಪನ್‌ ಎಂ.ಎನ್– ಎಸಿಪಿ, ಮಂಗಳೂರು ದಕ್ಷಿಣ ಉಪವಿಭಾಗ.

ADVERTISEMENT

ಎಂ.ವಿ. ಚಂದ್ರಕಾಂತ್– ಎಸ್ಪಿ, ಅರಣ್ಯವಿಭಾಗ, ಕೊಡಗು, ಮಧುರವೀಣಾ– ಎಸ್ಪಿ, ಸಿಐಡಿ, ಚನ್ನಬಸವಣ್ಣ ಲಂಗೋಟಿ– ಎಸ್ಪಿ, ಗುಪ್ತದಳ, ಬೆಳಗಾವಿ, ಜಯಪ್ರಕಾಶ್– ಎಸ್ಪಿ, ಎಸಿಬಿ, ದಾವಣಗೆರೆ, ಕೆ.ಪಿ.ಅಂಜಲಿ– ಎಸ್ಪಿ, ಲೋಕಾಯುಕ್ತ, ಬೆಂಗಳೂರು, ಎಂ.ನಾರಾಯಣ– ಎಸ್ಪಿ, ಗುಪ್ತದಳ, ಬೆಂಗಳೂರು, ಎಂ.ಮುತರಾಜು–ಎಸ್ಪಿ, ಗುಪ್ತದಳ, ಮೈಸೂರು, ಶೇಖರ್‌ ಎಚ್‌– ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು, ರವೀಂದ್ರ ಕಾಶಿನಾಥ್ ಗಡಾದಿ– ಎಸ್ಪಿ, ಹೆಸ್ಕಾಂ, ಅನಿತಾ ಭೀಮಪ್ಪ ಹದ್ದಣ್ಣನವರ್– ಎಸ್ಪಿ, ಕರ್ನಾಟಕ ಲೋಕಾಯುಕ್ತ, ವಿಜಯಪುರ, ಎ.ಕುಮಾರಸ್ವಾಮಿ– ಎಸ್ಪಿ, ಲೋಕಾಯುಕ್ತ,
ಮಂಗಳೂರು, ಸಾರಾ ಫಾತಿಮಾ– ಎಸ್ಪಿ, ಸಿಐಡಿ, ಬೆಂಗಳೂರು, ರಶ್ಮಿ ಪರಡ್ಡಿ– ಎಸ್ಪಿ, ಚೆಸ್ಕಾಂ, ಎಂ.ಎ. ಅಯ್ಯಪ್ಪ–ಎಸ್ಪಿ, ವಿಚಕ್ಷಣ ವಿಭಾಗ,
ಕೆಪಿಸಿಎಲ್‌.

ಮಲ್ಲಿಕಾರ್ಜುನ ಬಾಲದಂಡಿ– ಎಸ್ಪಿ, ಗುಪ್ತದಳ, ಬೆಂಗಳೂರು, ಅಮರನಾಥ ರೆಡ್ಡಿ– ಎಸ್ಪಿ, ಎಸಿಬಿ, ಪವನ್‌ ನೆಜ್ಜೂರು– ಎಸ್ಪಿ, ಲೋಕಾಯುಕ್ತ, ಬೆಂಗಳೂರು, ಶ್ರೀಹರಿ ಬಾಬು– ಎಸ್ಪಿ, ಎಸಿಬಿ, ಬೆಂಗಳೂರು, ಎಂ.ಎಸ್‌.ಗೀತಾ– ಎಸ್ಪಿ, ಲೋಕಾಯುಕ್ತ, ಬೆಳಗಾವಿ, ರಾಜೀವ್‌ ಎಂ– ಎಸ್ಪಿ, ಲೋಕಾಯುಕ್ತ, ಡಾ.ಶೋಭಾ ರಾಣಿ– ಎಸ್ಪಿ, ಬೆಸ್ಕಾಂ, ಸೌಮ್ಯಲತಾ– ಎಸ್ಪಿ, ಬಿಎಂಟಿಎಫ್‌, ಬಿ.ಟಿ.ಕವಿತಾ– ಎಸ್ಪಿ, ಡಿಸಿಆರ್‌ಇ, ಮೈಸೂರು, ಉಮಾ ಪ್ರಶಾಂತ್– ಎಸ್ಪಿ, ಎಸಿಬಿ,
ಬೆಂಗಳೂರು.

ಐಐಎಸ್–ಐಎಫ್‌ಎಸ್ ಬಡ್ತಿ: ವರ್ಷದ ಕೊನೆಯ ದಿನ ಪ್ರತಿವರ್ಷ ನೀಡುವಂತೆ ಎಲ್ಲ ಶ್ರೇಣಿಯ ಐಎಎಸ್‌ ಹಾಗೂ ಐಎಫ್ಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.