
ಪ್ರಜಾವಾಣಿ ವಾರ್ತೆ
ವಿಧಾನಪರಿಷತ್
ಸುವರ್ಣ ವಿಧಾನಸೌಧ (ಬೆಳಗಾವಿ): ಸದನದ ಕಲಾಪಗಳಲ್ಲಿ ಅನ್ವಯವಾಗುವುದು ಭಾವನೆಯಲ್ಲ, ನಿಯಮವಷ್ಟೆ ಎನ್ನುವ ಚರ್ಚೆ ಮಂಗಳವಾರ ವಿಧಾನಪರಿಷತ್‌ನಲ್ಲಿ ನಡೆಯಿತು.
ಶೂನ್ಯ ವೇಳೆಯಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಬದಲಾವಣೆ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ, ಎರಡು ಪುಟಗಳ ಪ್ರಸ್ತಾವವನ್ನು ಸದನದ ಮುಂದಿಟ್ಟರು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಸ್ಥಾನದಲ್ಲಿದ್ದ ಎಂ.ಕೆ.ಪ್ರಾಣೇಶ್, ‘ನಿಯಮದ ಪ್ರಕಾರ 150 ಪದಗಳನ್ನಷ್ಟೇ ಶೂನ್ಯವೇಳೆಯಲ್ಲಿ ಓದಬೇಕು. ಎರಡು ಪುಟಗಳಿಗೆ ಅವಕಾಶ ಇಲ್ಲ’ ಎಂದರು.
ಅದಕ್ಕೆ ಹಟ್ಟಿಹೊಳಿ, ‘ನಿಮ್ಮ ಭಾವನೆಯನ್ನು ಮುಂದಿನ ಬಾರಿ ಗೌರವಿಸುತ್ತೇನೆ’ ಎಂದರು. ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಭಾರತಿ ಶೆಟ್ಟಿ ಮತ್ತಿತರರು ಅದು ‘ಸಭಾಪತಿಯವರ ಭಾವನೆ ಅಲ್ಲ, ಸದನದ ನಿಯಮ’ ಎಂದು ಕಾಲೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.