ಹಣ
ಬೆಂಗಳೂರು: ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ದರವನ್ನು ನಿಗದಿ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಕಾರ್ಮಿಕರ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಯಾವುದೇ ರೀತಿಯ ಅಡೆತಡೆಗಳು ಇಲ್ಲದ ಕಾರಣ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕನಿಷ್ಠ ವೇತನ ಪರಿಷ್ಕರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
ಅನುಸೂಚಿ–2 ರ ಅಡಿಯಲ್ಲಿ ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ ಕೆಲಸದಲ್ಲಿ ತೊಡಗಿರುವ ವಲಯ–1ರಲ್ಲಿ ದಿನಕ್ಕೆ ₹989, ತಿಂಗಳಿಗೆ ₹25,714, ವಲಯ–2 ದಿನಕ್ಕೆ ₹899, ತಿಂಗಳಿಗೆ ₹23,376.43, ವಲಯ–3ರಲ್ಲಿ ದಿನಕ್ಕೆ ₹817.36, ತಿಂಗಳಿಗೆ ₹21,251.30.
ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ (ಉಷ್ಣ ವಿದ್ಯುತ್ ಸ್ಥಾವರ) ಕೆಲಸ ಮಾಡುವ ಅತಿ ಕುಶಲ ಕಾರ್ಮಿಕರು ದಿನಕ್ಕೆ ₹1,316.36, ತಿಂಗಳಿಗೆ ₹34,225.42, ಕುಶಲ ಕಾರ್ಮಿಕರು ದಿನಕ್ಕೆ ₹1196, ತಿಂಗಳಿಗೆ ₹31,114.02, ಅರೆ ಕುಶಲ ಕಾರ್ಮಿಕರು ₹1,087, ತಿಂಗಳಿಗೆ ₹28,285.47, ಅಕುಶಲ ಕಾರ್ಮಿಕರು ₹989, ತಿಂಗಳಿಗೆ ₹25,714.07. ಜಲ ಮತ್ತು ಸೌರ ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ಮಾಡುವ ಅತಿ ಕುಶಲ ಕಾರ್ಮಿಕರಿಗೆ ದಿನಕ್ಕೆ ₹1,196.69, ತಿಂಗಳಿಗೆ ₹31,114.02, ಕುಶಲ ಕಾರ್ಮಿಕರಿಗೆ ದಿನಕ್ಕೆ ₹1,087, ತಿಂಗಳಿಗೆ ₹28,285, ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ ₹989, ತಿಂಗಳಿಗೆ ₹25,714, ಅಕುಶಲ ಕಾರ್ಮಿಕರಿಗೆ ದಿನಕ್ಕೆ ₹899, ತಿಂಗಳಿಗೆ ₹23,376.
ಇದೇ ರೀತಿ ಅನುಸೂಚಿ–3 ಮತ್ತು ಅನುಸೂಚಿ–4 ರ ವ್ಯಾಪ್ತಿಗೆ ಬರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ದರವನ್ನು ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆ ಇದ್ದರೆ 2 ತಿಂಗಳಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, 4 ನೇ ಮಹಡಿ, ವಿಕಾಸಸೌಧ, ಬೆಂಗಳೂರು–1 ಇಲ್ಲಿಗೆ ಸಲ್ಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.