ADVERTISEMENT

Live ಪರಿಷತ್‌ ಫಲಿತಾಂಶ: ಮೈಸೂರು–ಚಾಮರಾಜನಗರ: ಜೆಡಿಎಸ್‌ನ ಮಂಜೇಗೌಡಗೆ ಗೆಲುವು

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ಇದೇ 10 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಬೊಮ್ಮಾಯಿ ಸರ್ಕಾರದಲ್ಲಿ ವಿಧಾನಪರಿಷತ್ತಿನ ಏಕೈಕ ಸಚಿವರಾಗಿರುವ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 16:20 IST
Last Updated 14 ಡಿಸೆಂಬರ್ 2021, 16:20 IST

ಪರಿಷತ್ ಫಲಿತಾಂಶ: ಯಾರ ವಿರುದ್ಧವೂ ಅವಸರದ ಕ್ರಮ ಇಲ್ಲ ಎಂದ ಸಿಎಂ ಬೊಮ್ಮಾಯಿ

ಪರಿಷತ್ ಫಲಿತಾಂಶ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿ.ಕೆ.ಶಿವಕುಮಾರ್

 ‘ವಿಧಾನಪರಿಷತ್ ಚುನಾವಣೆಯು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಗೆಲುವು ಸಾಧಿಸಿದ್ದಾರೆ.

ಮೈಸೂರು ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ- ಜೆಡಿಎಸ್ ಅಭ್ಯರ್ಥಿ ಮಂಜೇಗೌಡರ ಗೆಲುವಿನ ಸುಳಿವು ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರಕ್ಕೆ ಬಂದ ಶಾಸಕ ಸಾ.ರಾ.ಮಹೇಶ್...

ಮೈಸೂರು–ಚಾಮರಾಜನಗರ: ಗೆಲುವಿನತ್ತ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆ ಪ್ರಗತಿಯಲ್ಲಿದ್ದು,  ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಅವರು ಒತ್ತಡದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ.

ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ರಘು 1,919 ಮತಗಳೊಂದಿಗೆ ಮುನ್ನಡೆ ಹೊಂದಿದ್ದರು. ಮಂಜೇಗೌಡ 1,780 ಮತ ಪಡೆದಿದ್ದರು. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳು ಮಂಜೇಗೌಡರಿಗೆ ಹೆಚ್ಚು ಲಭಿಸಿವೆ. ಸದ್ಯ 42 ಮತಗಳಿಂದ ಮುಂದಿದ್ದಾರೆ. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರೇ ಖುದ್ದಾಗಿ ಮತ ಎಣಿಕೆಯಲ್ಲಿ ತೊಡಗಿದ್ದು, ಇತರ ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಇನ್ನೂ ಅಧಿಕೃತವಾಗಿ ಫಲಿತಾಂಶ ಘೋಷಿಸಿಲ್ಲ.

ADVERTISEMENT

ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಗೆಲುವಿಗಾಗಿ 2,195 ಮತಗಳ ಕೋಟಾ ನಿಗದಿಪಡಿಸಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರು 2,865  ಮತ ಪಡೆದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. 
 
ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರಗೆ ಗೆಲುವು

ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ಕುಮಾರ್‌ ಗೆಲುವು

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಲ್‌.ಅನಿಲ್‌ಕುಮಾರ್ 441 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅನಿಲ್‌ಕುಮಾರ್‌ 2,340 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ.ಕೆ.ಎನ್‌.ವೇಣುಗೋಪಾಲ್‌ 1,899 ಮತ ಗಳಿಸಿದರು. ಜೆಡಿಎಸ್‌ ಅಭ್ಯರ್ಥಿ ವಿ.ಇ.ರಾಮಚಂದ್ರ 1,438 ಮತ ಪಡೆದರು. ಪಕ್ಷೇತರ ಅಭ್ಯರ್ಥಿ ಎಂ.ಪಿ.ಅನಿಲ್‌ಕುಮಾರ್‌ 10 ಮತ ಗಳಿಸಿ ಠೇವಣಿ ಕಳೆದುಕೊಂಡರು.
ಅವಳಿ ಜಿಲ್ಲೆಯ ಒಟ್ಟು 5,600 ಮತದಾರರ ಪೈಕಿ 5,587 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 5,410 ಮತಗಳು ಸಿಂಧುವಾದವು. 177 ಮತಗಳು ತಿರಸ್ಕೃತಗೊಂಡವು. ಜಿಲ್ಲಾ ಕೇಂದ್ರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.

ಮೈಸೂರು–ಚಾಮರಾಜನಗರ: ಮುಗಿಯದ ಮತ ಎಣಿಕೆ–ರಘು, ಮಂಜೇಗೌಡ ನಡುವೆ ತೀವ್ರ ಪೈಪೋಟಿ

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಹಾಗೂ ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ರಘು 1,919 ಮತಗಳೊಂದಿಗೆ ಮುನ್ನಡೆ ಹೊಂದಿದ್ದರು. ಮಂಜೇಗೌಡ 1,780 ಮತ ಪಡೆದಿದ್ದರು. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳು ಮಂಜೇಗೌಡರಿಗೆ ಹೆಚ್ಚು ಸಿಗುತ್ತಿವೆ. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರೇ ಖುದ್ದಾಗಿ ಮತ ಎಣಿಕೆಯಲ್ಲಿ ತೊಡಗಿದ್ದು, ಇತರ ಸಿಬ್ಬಂದಿ ಸಹಕರಿಸುತ್ತಿದ್ದಾರೆ. 
ಕ್ಷೇತ್ರದಿಂದ ಇಬ್ಬರು

ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಗೆಲುವಿಗಾಗಿ 2,195 ಮತಗಳ ಕೋಟಾ ನಿಗದಿಪಡಿಸಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರು 2,865  ಮತ ಪಡೆದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. 
 
ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ವಿಧಾನ ಪರಿಷತ್ ಫಲಿತಾಂಶ: ಇಲ್ಲಿದೆ ಪಕ್ಷಗಳ ಬಲಾಬಲ

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಗೆಲುವು. ಅಧಿಕೃತ ಘೋಷಣೆ ಬಾಕಿ

ಬೆಳಗಾವಿಯಲ್ಲಿ ಎರಡನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಗೆಲುವು. ಅಧಿಕೃತ ಘೋಷಣೆ ಬಾಕಿ.

ಬಿಜೆಪಿಯ ಮಹಾಂತೇಶ ಕವಟಗಿಮಠ ಅವರಿಗೆ ಸೋಲು.

ಪರಿಷತ್‌ ಚುನಾವಣೆಯಲ್ಲಿ 1 ಸ್ಥಾನ ಗೆದ್ದ ಜೆಡಿಎಸ್‌: ವಿಧಾನಸಭೆಯಲ್ಲಿ ಶಕ್ತಿ ತೋರಿಸುತ್ತೇವೆ ಎಂದ ಎಚ್‌ಡಿಕೆ

 ರಾಯಚೂರು ವಿಧಾನ ಪರಿಷತ್‌ ಚುನಾವಣೆ:  ಅಭ್ಯರ್ಥಿಗಳು ಪಡೆದ ಮತಗಳ ವಿವರ

ಶರಣಗೌಡ ಬಯ್ಯಾಪುರ; 3,369

ವಿಶ್ವನಾಥ ಬನಹಟ್ಟಿ;2,942

ಕುಮಾರ ತಿರುಪತಿ;17

ನಾಗೇಂದ್ರ ಆರ್ಯ;07

ತಿರಸ್ಕೃತ ಮತಗಳು;153

ಬೆಳಗಾವಿ: ಎರಡನೇ ಪ್ರಾಶಸ್ತ್ಯ ಮತಗಳಿಗಾಗಿ ಹಣಾಹಣಿ

ಬೆಳಗಾವಿಯಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳಿಗಾಗಿ ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಡುವೆ ಹಣಾಹಣಿ ಮುಂದುವರಿದಿದೆ. ಇವರಲ್ಲಿ ಪಕ್ಷೇತರ ಲಖನ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೈಸೂರು: ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆ ಮುಕ್ತಾಯ

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: 
ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆ ಮುಕ್ತಾಯ

* 2,865 –ಕಾಂಗ್ರೆಸ್‌ (ಡಾ.ಡಿ.ತಿಮ್ಮಯ್ಯ)
* 1,919 ಬಿಜೆಪಿ (ಆರ್‌.ರಘು)
* 1,780 ಜೆಡಿಎಸ್‌ (ಸಿ.ಎನ್‌.ಮಂಜೇಗೌಡ)

ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆ ಹಾಗೂ ಅತಿ ಕಡಿಮೆ ಮತ ಪಡೆದಿರುವ ಅಭ್ಯರ್ಥಿಯ ಎಲಿಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವು

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗಬೇಕಿದೆ.

ಮತಗಳ ಎಣಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಗೆಲುವಿಗೆ 2261 ಮತಗಳು ಬೇಕಿದ್ದು, ರಾಜೇಂದ್ರ 2554 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಮತಪತ್ರಗಳಲ್ಲಿ ರಾಜೇಂದ್ರ ಅವರಿಗೆ ಬಂದಿರುವ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಿದ ನಂತರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ವಿಜಯೋತ್ಸವ: ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆ ನಡೆಯುತ್ತಿರುವ ಡಿಪ್ಲೊಮಾ ಕಾಲೇಜಿನ ಎದುರು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಗೆಲುವಿನ ಸಂಭ್ರಮ...

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಮುನ್ನಡೆ ಸಾಧಿಸಿದ್ದಾರೆ.

ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಗೆಲುವಿಗಾಗಿ 2,186 ಮತಗಳ ಕೋಟಾ ನಿಗದಿಪಡಿಸಲಾಗಿದೆ. ಡಾ.ತಿಮ್ಮಯ್ಯ ಅವರು 2,800  ಮತ ಪಡೆದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಆದರೆ, ಅಧಿಕೃತವಾಗಿ ಘೋಷಣೆಯಾಗಿಲ್ಲ. ಕ್ಷೇತ್ರದಿಂದ ಮೇಲ್ಮನೆಯ ಇನ್ನೊಂದು ಸ್ಥಾನಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಸದ್ಯ ರಘು ಮುನ್ನಡೆ ಹೊಂದಿದ್ದಾರೆ. ಅವರು 1,800 ಮೊದಲ ಪ್ರಾಶಸ್ತ್ಯದ ಮತ ಪಡೆದಿದ್ದಾರೆ. ಒಟ್ಟು 182 ಮತಗಳು ತಿರಸ್ಕೃತಗೊಂಡಿವೆ. 
 
ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಬೀದರ್: ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್‌ ಪಾಟೀಲ ಗೆಲುವು

ಬೀದರ್: ವಿಧಾನ ಪರಿಷತ್ತಿನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 
ಭೀಮರಾವ್‌ ಬಸವರಾಜ ಪಾಟೀಲ ಹುಮನಾಬಾದ್ ಅವರು 227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಭೀಮರಾವ್ ಪಾಟೀಲ 1,789 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ 1,562 ಮತಗಳನ್ನು ಪಡೆದರು. ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಗೋವಿಂದರಾವ್ ಸೋಮವಂಶಿ ಅವರಿಗೆ 15 ಮತಗಳು ಬಂದವು.  

ಒಟ್ಟು 3,456 ಮತದಾರರ ಪೈಕಿ 3,366 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದರು. 84 ಮತಗಳು ತಿರಸ್ಕೃತಗೊಂಡವು. ಇಲ್ಲಿಯ ಬಿವಿಬಿ ಕಾಲೇಜಿನಲ್ಲಿ ಒಟ್ಟು 12 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಕಡಿಮೆ ಮತಗಳು ಬಂದಿರುವುದು ಮನವರಿಕೆಯಾಗುತ್ತಿದ್ದಂತೆಯೇ ಪ್ರಕಾಶ ಖಂಡ್ರೆ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ‘ಮತದಾರರ ತೀರ್ಪಿಗೆ ತಲೆಬಾಗುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಬಿಜೆಪಿಯ ದುರವರ್ತನೆ, ದುರಾಡಳಿತ ಹಾಗೂ ದಬ್ಬಾಳಿಕೆಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ಮುಂಬರುವ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಗೆಲುವಿನ ಸಂಕೇತವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮತ್ತೆ ಗೆದ್ದ ಕಾಂಗ್ರೆಸ್

ರಾಮನಗರ: ಬೆಂಗಳೂರು ಗ್ರಾಮಾಂತರ- ರಾಮನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ  ಮರು ಆಯ್ಕೆಯಾಗಿದ್ದಾರೆ.

ರವಿ ಅವರು 722   ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ರಮೇಶ ಗೌಡ ಅವರನ್ನು ಪರಾಭವಗೊಳಿಸಿದರು. ಒಟ್ಟು 3912 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ 56 ಮತಗಳು ತಿರಸ್ಕೃತಗೊಂಡವು. ರವಿ ಒಟ್ಟು 2262 ಮತಗಳನ್ನು ಪಡೆದರೆ, ರಮೇಶ್ 1540 ಮತ ಪಡೆದು ನಿರಾಸೆ ಅನುಭವಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾರಾಯಣಸ್ವಾಮಿ 54 ಮತ ಪಡೆಯಲಷ್ಟೇ ಶಕ್ತವಾದರು.

ಕಲಬುರಗಿ: 149 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಗೆಲುವು

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನಪರಿಷತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು 149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿ.ಜಿ. ಪಾಟೀಲ ಅವರು 3452 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಅವರು 3303 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ 16 ಮತಗಳನ್ನು ಪಡೆದು ಠೇವಣಿ ‌ಕಳೆದುಕೊಂಡರು.

298 ಮತಗಳು ತಿರಸ್ಕೃತಗೊಂಡವು.
ಚಲಾವಣೆಯಾದ 7069ಮತಗಳಲ್ಲಿ 6771 ಮತಗಳು ಮಾತ್ರ ಸಿಂಧುವಾಗಿದ್ದವು.

ಈ ಕ್ಷೇತ್ರದಿಂದ ಮರು ಆಯ್ಕೆಯಾದ ಮೊದಲ ವ್ಯಕ್ತಿ ಬಿ.ಜಿ. ಪಾಟೀಲ ಅವರಾಗಿದ್ದಾರೆ. 

ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಿವಾನಂದ ಪಾಟೀಲ ಮರತೂರ ಉತ್ತಮ‌ ಪೈಪೋಟಿ ನೀಡಿದರು.

ಶಾಸಕರ ಗೈರು: ಬಿ.ಜಿ. ಪಾಟೀಲ ಅವರು ಗೆಲುವು ಸಂಭ್ರಮಿಸುವ ಸಂದರ್ಭದಲ್ಲಿ ಜಿಲ್ಲೆಯ ಸಂಸದ, ಶಾಸಕರು, ಪ್ರಮುಖ ಬಿಜೆಪಿ ನಾಯಕರು ಗೈರಾಗಿದ್ದರು.

ಬಿಜೆಪಿ ಅಭ್ಯರ್ಥಿ ಡಿ.ಎಸ್‌.ಅರುಣ್ ಜಯಭೇರಿ

ಚಲಾವಣೆಯಾದ ಮತ-4156
ಅಂಗೀಕೃತ ಮತ - 4047
ತಿರಸ್ಕೃತ ಮತ - 109

1. ಡಿ.ಎಸ್‌.ಅರುಣ್ ಅವರು ಪಡೆದ ಮತ 2192

2. ಆರ್.ಪ್ರಸನ್ನಕುಮಾರ್ ಅವರು ಪಡೆದ ಮತ 1848

3. ಶಿವಕುಮಾರ್ ಅವರು ಪಡೆದ ಮತ 03

4. ರವಿ ಅವರು ಪಡೆದ ಮತ 04

ಕಾಂಗ್ರೆಸ್ ಅಭ್ಯರ್ಥಿ‌ ಡಾ.ಡಿ.ತಿಮ್ಮಯ್ಯ  ಗೆಲುವಿನ ಸಂಭ್ರಮ...

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ- ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ‌ ಡಾ.ಡಿ.ತಿಮ್ಮಯ್ಯ  ಗೆಲುವಿನ ಸಂಭ್ರಮ.

2,800  ಮೊದಲ ಪ್ರಾಶಸ್ತ್ಯ ಮತಗಳು ಬಂದಿದ್ದು, ಸಿದ್ದರಾಮಯ್ಯ ಅವರ ಕಾರ್ಯತಂತ್ರ ನನ್ನ ಗೆಲುವಿಗೆ ಕಾರಣ  ಎಂದ ಡಾ.ತಿಮ್ಮಯ್ಯ.

ಮತ ವಿಭಜನೆ ಆಗಿದೆ: ಮಹಾಂತೇಶ ಕವಟಗಿಮಠ

ಬೆಳಗಾವಿ: ಈ ಚುನಾವಣೆಯಲ್ಲಿ ಬಿಜೆಪಿಯು ಸಂಘಟಿತ ಪ್ರಯತ್ನ ಮಾಡಿದೆ. ಹೀಗಾಗಿ ವಿಫಲ ಆಗಿದೆ ಎನ್ನುವುದಿಲ್ಲ‌ ಎಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹೇಳಿದರು.

 ನಾನು ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಲಾಗಿಲ್ಲ. ನಮ್ಮ ಮತಗಳು ವಿಭಜನೆ ಆಗಿವೆ. ಅಧಿಕೃತ ಅಭ್ಯರ್ಥಿ ಇದ್ದಾಗ ಇನ್ನೊಬ್ಬ ಅಭ್ಯರ್ಥಿ ಹಾಕುವ ಅಗತ್ಯವಿರಲಿಲ್ಲ. ಆದರೆ, ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಪ್ರಗತಿಯಲ್ಲಿರುವುದರಿಂದ ಈಗಲೂ ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಈ ನಡುವೆ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ ಎಂದು ಭಾವಿಸಿ ಅಭಿಮಾನಿಗಳು ಸಂಭ್ರಮ ಆಚರಿಸುತ್ತಿದ್ದಾರೆ.‌

ಜಿಲ್ಲಾ ಚುನಾವಣಾ ಅಧಿಕಾರಿಯು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಇನ್ನೂ ಪ್ರಕ್ರಿಯೆ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಗೆಲುವು

ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಮತಗಳ ಅಂತರ ಇನ್ನಷ್ಟೇ ಗೊತ್ತಾಗಲಿದೆ.

ಮತಕೇಂದ್ರದ ಎದುರು ಬಿಜೆಪಿ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಗೆಲುವು ಇದು- ಸಲಿಂ ಅಹಮದ್

ಧಾರವಾಡ: 'ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಗೆಲುವು ಇದು. ಈ ಫಲಿತಾಂಶ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯಗಳಿಗೆ ನೀಡಿದ ಉತ್ತರ' ಎಂದು ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸಲಿಮ್ ಅಹಮದ್ ಹೇಳಿದರು.

'ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಗ್ರಾಮೀಣ ಭಾಗದ ಏಳಿಗೆಯನ್ನು, ಬಜೆಪಿಯ ಭ್ರಷ್ಟಾಚಾರ ಹಾಗೂ ದುರಾಡಳಿತ ಕಸಿದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಆಶ್ವಾಸನೆ ಹಾಗೂ ಅಹಂಕಾರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಬೆಲೆ ಏರಿಕೆ ಸೇರಿ ಸರ್ಕಾರದ ಜನವಿರೋಧಿ ನೀತಿಗಳಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರು ಶೇ 40ರಷ್ಟು ಕಮೀಷನ್ ಆರೋಪ ದುದೈವದ ಸಂಗತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾದ ಪ್ರಧಾನಿ ಏನು ಮಾಡಲಿಲ್ಲ' ಎಂದರು.

'ನಾನು ಜನರ ಧ್ವನಿಯಾಗಿ ಕೆಲಸ ಮಾಡುವೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಶಕ್ತಿ ಕೊಡಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸೋತ ಕ್ಷೇತ್ರಗಲ್ಲಿ ನಾವು ಎಡವಿದ್ದು ಎಲ್ಲಿ ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗುವುದು' ಎಂದು ಸಲಿಮ್ ಅಹಮದ್ ಹೇಳಿದರು.

ರಾಯಚೂರು: ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ

ರಾಯಚೂರು: ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ 400 ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರು ಸೋಲು ಅನುಭವಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಕ್ಷೇತ್ರದ ಮತದಾರರು ನನಗೆ 2,945 ಮತಗಳನ್ನು ನೀಡಿರುವುದಕ್ಕೆ ಚಿರಋಣಿ. ಈ ಸೋಲಿಗೆ ಯಾರೂ ಕಾರಣರಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ’ ಎಂದರು.

ಸಿಹಿ ಹಂಚಿ ಸಂಭ್ರಮ: ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಅವರಿಗೆ ಶಾಸಕರಾದ ಬಸನಗೌಡ ದದ್ದಲ ಹಾಗೂ ಡಿ.ಎಸ್‌.ಹುಲಗೇರಿ ಅವರು ಸಿಹಿ ತಿನ್ನಿಸಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಜಯ

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಜಯ. ಅಧಿಕೃತ ಘೋಷಣೆ ಬಾಕಿ. ಚನ್ನರಾಜ ಅವರು ಶಾಸಕಿ‌ ಲಕ್ಷ್ಮಿ ಹೆಬ್ಬಾಳಕರ ಅವರ ಕಿರಿಯ ಸಹೋದರ.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಈಗಷ್ಟೇ ಮುಗಿದ ಅಸಿಂಧು ಮತ ಬೇರ್ಪಡಿಸುವ ಪ್ರಕ್ರಿಯೆ 

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಅಸಿಂಧು ಮತಗಳನ್ನು ಬದಿಗಿರಿಸುವ ಪ್ರಕ್ರಿಯೆ ಮುಗಿದಿದ್ದು, ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಅಧಿಕೃತವಾಗಿ ಆರಂಭವಾಗಲಿದೆ.

ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 500 ಮತಗಳು ತಿರಸ್ಕೃತಗೊಂಡಿವೆ. ಅಸಿಂಧು ಮತಗಳನ್ನು ಬೇರ್ಪಡಿಸುವ ವೇಳೆ ಕಾಂಗ್ರೆಸ್‌ಗೆ ಮೊದಲ ಪ್ರಾಶಸ್ತ್ಯ ಮತಗಳು ಹೆಚ್ಚು ಇರುವುದು ಗೊತ್ತಾಗಿದೆ. ನಂತರ ಸ್ಥಾನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷ ಇವೆ.     

ಕಾಂಗ್ರೆಸ್‌ ಪಕ್ಷದ ಡಾ.ಡಿ.ತಿಮ್ಮಯ್ಯ, ಬಿಜೆಪಿಯ ಆರ್‌.ರಘು (ಕೌಟಿಲ್ಯ), ಜೆಡಿಎಸ್‌ ಪಕ್ಷದ ಸಿ.ಎನ್‌.ಮಂಜೇಗೌಡ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂವರೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕನ್ನಡ ಚಳವಳಿ ‍ಪಕ್ಷದ ವಾಟಾಳ್‌ ನಾಗರಾಜ್‌ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಧಾರವಾಡ: ಅಂತಿಮ ಸುತ್ತಿನ ಮತ ಎಣಿಕೆ ನಂತರ ಅಭ್ಯರ್ಥಿಗಳು  ಪಡೆದ ಮತಗಳ ವಿವರ:

ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ

ಅಂತಿಮ ಸುತ್ತಿನ ಮತ ಎಣಿಕೆ ನಂತರ ಅಭ್ಯರ್ಥಿಗಳು  ಪಡೆದ ಮತಗಳ ವಿವರ:

 ಪ್ರದೀಪ ಶೆಟ್ಟರ  - 2497
 
ಸಲೀಂ ಅಹ್ಮದ್  -  3334

ಟಿ.ಶಿವಕುಮಾರ- 03

 ಫಕೀರಡ್ಡಿ ಅತ್ತಿಗೇರಿ-  1

ಈರಪ್ಪ ಗುಬ್ಬೆರ -  04

ಬಸವರಾಜ ಕೊಟಗಿ - 05

ಮಲ್ಲಿಕಾರ್ಜುನ ಹಾವೇರಿ- 1217

ಮಹೇಶ ಜೋಷಿ -09

ಮಂಜುನಾಥ ಅಡಮನಿ - 05

ವಿರೂಪಾಕ್ಷಗೌಡ ಪಾಟೀಲ- 5

ಒಟ್ಟು ಸಿಂಧು ಮತ: 7080

ಒಟ್ಟು ಅಸಿಂಧು ಮತ- 370

ಒಟ್ಟು ಏಣಿಕೆಯಾದ ಮತ - 7450

ಬೆಳಗಾವಿ: ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿಗೆ ಮುನ್ನಡೆ

ಬೆಳಗಾವಿ: ವಿಧಾನಪರಿಷತ್ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ‌ಆರಂಭವಾಗಿದ್ದು, ಮಧ್ಯಾಹ್ನ 12.50ರ ವೇಳೆಗೆ ಲಭ್ಯ ಮಾಹಿತಿ ಪ್ರಕಾರ‌ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯು ಆರಂಭಿಕ ಆಘಾತ ಅನುಭವಿಸಿದೆ.

ಬಿಜೆಪಿಯ ಮಹಾಂತೇಶ ಕವಟಗಿಮಠ 156, ಕಾಂಗ್ರೆಸ್‌ನ ಚನ್ನರಾಜ 440 ಹಾಗೂ ಪಕ್ಷೇತರ ಅಭ್ಯರ್ಥಿ
ಲಖನ್ ಜಾರಕಿಹೊಳಿ 402 ಮತಗಳನ್ನು ಗಳಿಸಿದ್ದಾರೆ. ಲಖನ್ 2ನೇ ಸ್ಥಾನದಲ್ಲಿದ್ದಾರೆ.

ಕಾಂಗ್ರೆಸ್‌ನ ಸಲಿಮ್ ಅಹಮದ್, ಬಿಜೆಪಿಯ ಪ್ರದೀಪ ಶೆಟ್ಟರ್‌ಗೆ ಜಯ

ಧಾರವಾಡ: ವಿಧಾನ ಪರಿಷತ್ ಚುನಾವಣೆ
ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಗೆಲುವು ಸಾಧಿಸಿದ
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು
 

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಜಯಭೇರಿ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಜಯಭೇರಿ ಭಾರಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರು 400ಕ್ಕೂ ಹೆಚ್ಚು ಮತಗಳ ಅಂತರದಿಂದ ಮಣಿಸಿದ್ದಾರೆ.

ದಾವಣಗೆರೆ ಶಿವಮೊಗ್ಗ ಜಿಲ್ಲೆಯ ಕ್ಷೇತ್ರ ವ್ಯಾಪ್ತಿ ಒಳಗೊಂಡ ಕ್ಷೇತ್ರದಲ್ಲಿ 4164 ಮತಗಳಿದ್ದವು. ಅವರಲ್ಲಿ ಶೇ 99.86ರಷ್ಟು ಮತಗಳು ಚಲಾವಣೆಯಾಗಿದ್ದವು. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಅರುಣ್ 2208 ಮತಗಳನ್ನು ಪಡೆದಿದ್ದಾರೆ. ಪ್ರಸನ್ನ ಕುಮಾರ್ 1820 ಮತಗಳನ್ನು ಪಡೆದಿದ್ದಾರೆ. 106ಕ್ಕೂ ಹೆಚ್ವು ಮತಗಳು ತಿರಸ್ಕೃತವಾಗಿವೆ.

ಧಾರವಾಡ: 4ನೇ ಸುತ್ತಿನ ಮತ ಎಣಿಕೆ ನಂತರ ಅಭ್ಯರ್ಥಿಗಳು  ಪಡೆದ ಮತಗಳ ವಿವರ:

ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ

4ನೇ ಸುತ್ತಿನ ಮತ ಎಣಿಕೆ ನಂತರ ಅಭ್ಯರ್ಥಿಗಳು  ಪಡೆದ ಮತಗಳ ವಿವರ:

 ಪ್ರದೀಪ ಶೆಟ್ಟರ  - 1885
 
ಸಲೀಂ ಅಹ್ಮದ್  -  2512

ಟಿ.ಶಿವಕುಮಾರ- 02

 ಫಕೀರಡ್ಡಿ ಅತ್ತಿಗೇರಿ-  1

ಈರಪ್ಪ ಗುಬ್ಬೆರ -  03

ಬಸವರಾಜ ಕೊಟಗಿ - 01

ಮಲ್ಲಿಕಾರ್ಜುನ ಹಾವೇರಿ- 897

ಮಹೇಶ ಜೋಷಿ -04

ಮಂಜುನಾಥ ಅಡಮನಿ - 04

ವಿರೂಪಾಕ್ಷಗೌಡ ಪಾಟೀಲ- 2

ಒಟ್ಟು ಸಿಂಧು ಮತ: 5311

ಒಟ್ಟು ಅಸಿಂಧು ಮತ- 289

ಒಟ್ಟು ಎಣಿಕೆಯಾದ ಮತ - 5600

ಎಣಿಕೆಗೆ ಬಾಕಿ ಇರುವ ಮತ- 1852

ಕಲಬುರಗಿ: ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಮುನ್ನಡೆ

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು 185 ಮತಗಳ ಮುನ್ನಡೆ ಸಾಧಿಸಿದ್ದಾರೆ. 2500 ಮತಗಳ ಎಣಿಕೆ ಮುಕ್ತಾಯವಾಗಿದೆ‌. ಒಟ್ಟು 7070 ಮತಗಳ ಎಣಿಕೆ ನಡೆಯಬೇಕಿದೆ.

ಇದೇ ಮೊದಲ ಬಾರಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ‌ ಮರತೂರ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ರಾಯಚೂರು: ಗೆಲುವಿನತ್ತ ಕಾಂಗ್ರೆಸ್‌

ರಾಯಚೂರು: ಕೊಪ್ಪಳ ಜಿಲ್ಲಾ ವ್ಯಾಪ್ತಿ ಹೊಂದಿರುವ ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆ ಮತಗಳ ಎಣಿಕೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಯು 450 ಮತಗಳಿಂದ ಮುನ್ನಡೆ ಕಾಯ್ದಿಕೊಂಡಿದ್ದಾರೆ.

ಮತ ಎಣಿಕೆ ಕೇಂದ್ರದೊಳಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು, ಗೆಲುವು ನಿಶ್ಚಿತವಾಗುತ್ತಿದ್ದಂತೆ ತಮ್ಮ ಬೆಂಬಲಿಗರೊಂದಿಗೆ ಗೆಲುವಿನ ಚಿಹ್ನೆತೋರಿಸಿದರು.
ಬೆಳಗಾವಿ ಜಿಲ್ಲೆಯವರಾದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರು ಸಾಕಷ್ಟು ಮತಗಳನ್ನು ಪಡೆದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಿಂದಕ್ಕೆ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.

ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ ಕಾಂಗ್ರೆಸ್ ಬಿಜೆಪಿ ತಲಾ ಒಬ್ಬ ಅಭ್ಯರ್ಥಿ ಗೆಲುವು
* ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3693  ಮತ
* ಕಾಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2077  ಮತ
* ಎಸ್ ಡಿ ಪಿ ಐ ಅಭ್ಯರ್ಥಿ ಶಾಫಿ 203 ಮತ
* ತಿರಸ್ಕೃತ ಮತಗಳು 39

ಕಲಬುರಗಿ: ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಮುನ್ನಡೆ

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು 185 ಮತಗಳ ಮುನ್ನಡೆ ಸಾಧಿಸಿದ್ದಾರೆ. 2500 ಮತಗಳ ಎಣಿಕೆ ಮುಕ್ತಾಯವಾಗಿದೆ‌. ಒಟ್ಟು 7070 ಮತಗಳ ಎಣಿಕೆ ನಡೆಯಬೇಕಿದೆ.

ಇದೇ ಮೊದಲ ಬಾರಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ‌ ಮರತೂರ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಬಳ್ಳಾರಿ: 745 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ

ಬಳ್ಳಾರಿ ಪರಿಷತ್ ಚುನಾವಣೆ ಫಲಿತಾಂಶ
ಬಿಜೆಪಿ- 2659
ಕಾಂಗ್ರೆಸ್- 1659
ತಿರಸ್ಕೃತ- 87
 

ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು

ಚಿತ್ರದುರ್ಗ: ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಸೋಮಶೇಖರ ವಿರುದ್ಧ 358 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯ ನವೀನ್ 2,629,  ಕಾಂಗ್ರೆಸ್ ನ ಬಿ.ಸೋಮಶೇಖರ 2,271, ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ 16 ಮತಗಳನ್ನು ಗಳಿಸಿದ್ದಾರೆ. 144 ಮತಗಳು ತಿರಸ್ಕೃತಗೊಂಡಿವೆ. 5,060 ಮತಗಳು ಚಲಾವಣೆ ಆಗಿದ್ದವು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಮಾತನಾಡಿ, ಚಲಾವಣೆ ಅಗಿರುವ ಮತಗಳ ಪೈಕಿ ಗೆಲುವು ಸಾಧಿಸುವ ವ್ಯಕ್ತಿ 2,459 ಮತಗಳನ್ನು ಪಡೆಯಬೇಕಿತ್ತು. ಮೊದಲ ಪ್ರಶಾಸ್ತ್ಯದ ಮತಗಳಲ್ಲಿ ನವೀನ್ ಅವರು 2,629 ಮತಗಳನ್ನು ಪಡೆದಿದ್ದ ಪರಿಣಾಮ ಗೆಲುವು ಸಾಧಿಸಿದರು. ಚುನಾವಣೆ ಆಯೋಗ ಅಧಿಕೃತ ಘೋಷಣೆ ಮಾಡಲಿದೆ' ಎಂದು ಹೇಳಿದರು.

'ಇದು ಹಣಬಲ ಮತ್ತು ಜನಬಲದ ನಡುವೆ ನಡೆದ ಚುನಾವಣೆ. ಕ್ಷೇತ್ರದ ಹೊರಗಿನ ಅಭ್ಯರ್ಥಿ ಬದಲು ಮನೆ ಮಗನಿಗೆ ಮತದಾರರು ಮಣೆ ಹಾಕಿದ್ದಾರೆ. ಇದೊಂದು ಹೋರಾಟದ ಚುನಾವಣೆ ಅಗಿತ್ತು. ಎರಡು ಜಿಲ್ಲೆಯ ಶಾಸಕರು ಮತ್ತು ಸಂಸದರು ಸಹಕಾರ ನೀಡಿದರು. ಹೀಗಾಗಿ, ಗೆಲುವು ಸುಲಭವಾಯಿತು' ಎಂದು ಕೆ.ಎಸ್.ನವೀನ್ ಹರ್ಷ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಸುನೀಲ್ ಗೌಡ, ಬಿಜೆಪಿಯ ಪಿ.ಎಚ್.ಪೂಜಾರ ಗೆಲುವು

ವಿಜಯಪುರ: ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ 3178 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಅವರು 2203 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದುಕೊಂಡಿದ್ದು ಜಯಗಳಿಸಿದ್ದಾರೆ. 

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರಿಗೆ 1460 ಪ್ರಥಮ ಪ್ರಾಶಸ್ತ್ಯದ  ಮತಗಳು ಲಭಿಸಿವೆ.
ಅಧಿಕೃತ ಘೋಷಣೆ ಬಾಕಿ ಇದೆ.

ಬಿಜೆಪಿಯ ಪ್ರಾಣೇಶ್ ಅವರು 1188 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಚಿಕ್ಕಮಗಳೂರು: ಬಿಜೆಪಿಯ ಪ್ರಾಣೇಶ್ ಅವರು 1188 ಮತಗಳನ್ನು ಪಡೆದು ಗೆಲುವಿನ ನಗರ ಬೀರಿದ್ದಾರೆ.

ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ನ ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನು ಪಡೆದಿದ್ದಾರೆ.

ಧಾರವಾಡ: 2ನೇ ಸುತ್ತಿನಲ್ಲಿ 2800 ಮತಗಳ ಎಣಿಕೆ

2ನೇ ಸುತ್ತಿನಲ್ಲಿ ಕಾಂಗ್ರೆಸ್ ನ ಸಲೀಂ ಅಹ್ಮದ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸಲಿಮ್ ಅಹ್ಮದ್ (ಕಾಂಗ್ರೆಸ್)- 1217
ಪ್ರದೀಪ ಶೆಟ್ಟರ್(ಬಿಜೆಪಿ)- 931
ಮಲ್ಲಿಕಾರ್ಜುನ ಹಾವೇರಿ (ಪಕ್ಷೇತರ)- 394

ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಮುನ್ನಡೆ

ವಿಜಯಪುರ: ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ 98 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಸುನೀಲಗೌಡ ಪಾಟೀಲ್ ಗೆ  735  ಪ್ರಥಮ ಪ್ರಾಶಸ್ತ್ಯ ದ ಮತಗಳು ಲಭಿಸಿವೆ.

ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಅವರಿಗೆ  637 ಪ್ರಥಮ ಪ್ರಾಶಸ್ತ್ಯದ ಮತಗಳು ಲಭಿಸಿವೆ. 

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿಗೆ 173  ಮತಗಳು ಲಭಿಸಿವೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮುನ್ನಡೆ.

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮುನ್ನಡೆ.
 ಮೊದಲ ಸುತ್ತಿನ ಎಣಿಕೆ ವಿವರ.
- ಕಾಂಗ್ರೆಸ್ 2269
- ಬಿಜೆಪಿ 1908
- ಜೆಡಿಎಸ್ 1401

ಬೆಂಗಳೂರು ನಗರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಚ್‌.ಎಸ್. ಗೋಪಿನಾಥ್‌ಗೆ ಗೆಲುವು

ಗೋಪಿನಾಥ್ ರೆಡ್ಡಿ ಪಡೆದ ಮತಗಳು: 1227

ಕೆಜಿಎಫ್ ಬಾಬು: 830

ತಿರಸ್ಕೃತ ಮತಗಳು: ೧೩ 

ಒಟ್ಟೂ ಪರಿಗಣಿಸಲ್ಪಟ್ಟ ಮತಗಳು: 2057

ಉತ್ತರ ಕನ್ನಡ: ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು

ಕಾರವಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಜಯ ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಸೋಲನುಭವಿಸಿದರು.

ಧಾರವಾಡ: ಕಾಂಗ್ರೆಸ್ ನ ಸಲೀಂ ಅಹ್ಮದ್ ಮುನ್ನಡೆ

ಮೊದಲ ಸುತ್ತಿನಲ್ಲಿ 1400 ಮತಗಳ ಎಣಿಕೆ.

ಮೊದಲ ಸುತ್ತಿನಲ್ಲಿ 
ಕಾಂಗ್ರೆಸ್-638
ಬಿಜೆಪಿ-470 ಪ್ರಥಮ ಪ್ರಾಶಸ್ತ್ಯ ಮತಗಳು.

ಮೊದಲ ಸುತ್ತಲಿನ ಕಾಂಗ್ರೆಸ್ ನ ಸಲೀಂ ಅಹ್ಮದ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

209 ಪ್ರಥಮ ಪ್ರಾಶಸ್ತ್ಯ ಪಡೆದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿ.

ಚಿತ್ರದುರ್ಗ: 344 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು– ಅಧಿಕೃತ ಘೋಷಣೆ ಮಾತ್ರ ಬಾಕಿ

ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ 2,262 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ 2,282 ಮತಗಳನ್ನು ಪಡೆದಿದ್ದಾರೆ.

344 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮುನ್ನಡೆ

ಮೊದಲ ಸುತ್ತಿನ ಎಣಿಕೆ ಕಾರ್ಯ ಸಾಗಿದ್ದು, 700 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ 120 ಮತಗಳ ಮುನ್ನಡೆ ಕಾಯ್ದುಕೊಂಡಿದೆ.

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

ಶಿವಮೊಗ್ಗ:  ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್  2208 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್ 1820 ಮತ ಪಡೆದಿದ್ದಾರೆ.
 

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಬಸವರಾಜ್ ಪಾಟೀಲ ಹುಮ್ನಾಬಾದ್‌ಗೆ ಜಯ

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಬಸವರಾಜ್ ಪಾಟೀಲ ಹುಮ್ನಾಬಾದ್: 1789 ಮತ

ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ: 1562 ಮತ

ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ  ಗೋವಿಂದರಾವ್ ಸೂರ್ಯವಂಶಿ: 15

ಒಟ್ಟು ಮತದಾರರು: 3456
ಚಲಾವಣೆಯಾದ ಮತ: 3366
ತಿರಸ್ಕೃತ ಮತ: 84

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಇನ್ನೂ ಆರಂಭವಾಗದ ಮತ ಎಣಿಕೆ

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಮತಪತ್ರಗಳ ವಿಂಗಡಣೆ ಪ್ರಕ್ರಿಯೆಯಲ್ಲಿ ಚುನಾವಣಾ ಸಿಬ್ಬಂದಿ ತೊಡಗಿದ್ದು, ಇನ್ನೂ  ಮತ ಎಣಿಕೆ ಆರಂಭವಾಗಿಲ್ಲ.

ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತಪತ್ರಗಳನ್ನು ಮಿಶ್ರಣ ಮಾಡಿ ಪ್ರತಿ ಟೇಬಲ್‌ಗೂ 25ರ ಒಂದು ಬಂಡಲ್‌ನಂತೆ ಹಂಚಿಕೆ ಮಾಡಲಾಗುತ್ತಿದೆ. ಅಸಿಂಧುವಾದ ಮತಗಳನ್ನು ತೆರವುಗೊಳಿಸಿ ಎಣಿಕೆ ಆರಂಭಿಸುತ್ತಾರೆ. ಮೊದಲ ಪ್ರಾಶಸ್ತ್ಯ ಮತವನ್ನು ಮೊದಲು ಲೆಕ್ಕ ಮಾಡಲಾಗುತ್ತದೆ. 12 ಗಂಟೆಗೆ ಎಣಿಕೆ ಆರಂಭವಾಗುವ ಸಾಧ್ಯತೆ ಇದೆ.  ಒಟ್ಟು 14 ಟೇಬಲ್‌ಗಳಲ್ಲಿ ಎಣಿಕೆ ನಡೆಯಲಿದೆ. ಒಟ್ಟು 6,769 ಮತದಾರರು ಈ ಬಾರಿ ಹಕ್ಕು ಚಲಾಯಿಸಿದ್ದಾರೆ. 
 
ಕಾಂಗ್ರೆಸ್‌ ಪಕ್ಷದ ಡಾ.ಡಿ.ತಿಮ್ಮಯ್ಯ, ಬಿಜೆಪಿಯ ಆರ್‌.ರಘು (ಕೌಟಿಲ್ಯ), ಜೆಡಿಎಸ್‌ ಪಕ್ಷದ ಸಿ.ಎನ್‌.ಮಂಜೇಗೌಡ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂವರೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕನ್ನಡ ಚಳವಳಿ ‍ಪಕ್ಷದ ವಾಟಾಳ್‌ ನಾಗರಾಜ್‌ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿ ಕ್ಷೇತ್ರದಲ್ಲಿ ಶೇ 99.73ರಷ್ಟು ಮತದಾನವಾಗಿದೆ.

ಎಚ್‌.ಎಸ್. ಗೋಪಿನಾಥ್ ಅವರಿಗೆ 400 ಮತಗಳ ಅಂತರದ ಗೆಲುವು.

ಬೆಂಗಳೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ಎಸ್. ಗೋಪಿನಾಥ್ ಅವರಿಗೆ 400 ಮತಗಳ ಅಂತರದ ಗೆಲುವು.

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಮತ ಎಣಿಕೆ ಕಾರ್ಯ ಕೆಲವೇ ಕ್ಷಣಗಳಲ್ಲಿ ಆರಂಭ

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಮತ ಎಣಿಕೆ ಕಾರ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. 

389 ಮತಗಟ್ಟೆಗಳ ಮತ ಪೆಟ್ಟಿಗೆಗಳನ್ನು ತೆರೆದು  ಮತಪತ್ರಗಳ ಮಿಶ್ರಣ ಕಾರ್ಯ ಮುಗಿದಿದ್ದು ವಿಂಗಡಣೆ ಕೆಲಸ ಆರಂಭವಾಗಿದೆ. 

14 ಟೇಬಲ್ ಗಳಲ್ಲಿ ತಲಾ ಸುಮಾರು 540 ಮತಗಳ ಎಣಿಕೆ ನಡೆಯಬೇಕು. 

ಇನ್ನು ಸುಮಾರು ಎರಡು ಗಂಟೆಗಳಲ್ಲಿ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್ ತಿಳಿಸಿದರು.

50 ಮತಗಳ ಬಂಡlಲ್‌ಗಳ ಮೂಲಕ ಮತ ಎಣಿಕೆ

ಧಾರವಾಡ: ಸ್ಥಳೀಯ ಸಂಸ್ಥೆಗಳ ಧಾರವಾಡ ಕ್ಷೇತ್ರದ ಮತ ಎಣಿಕೆ ಕಾರ್ಯ ಈಗ ಆರಂಭವಾಗಿದೆ.

50 ಮತಗಳ ಬಂಡlಲ್‌ಗಳ ಮೂಲಕ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ.

ಪ್ರತಿ ಟೇಬಲ್ ಗೆ 4 ಬಂಡಲ್ ವಿತರಿಸಲಾಗಿದೆ. ಒಟ್ಟು 14 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ.

ಸೂರಜ್ ರೇವಣ್ಣಗೆ ಗೆಲುವು

ಜೆಡಿಎಸ್ ಅಭ್ಯರ್ಥಿ ಆರ್. ಸೂರಜ್ ಅವರು 1,433 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

– ಕಾಂಗ್ರೆಸ್; 731 ಮತ
– ಜೆಡಿಎಸ್: 2242 ಮತ
– ಬಿಜೆಪಿ: 354 ಮತ

ಶಿವಮೊಗ್ಗ: ಎರಡು ತಾಸು ತಡವಾಗಿ ಮತ ಎಣಿಕೆ ಆರಂಭ

ಶಿವಮೊಗ್ಗ: ದಾವಣಗೆರೆ, ಶಿವಮೊಗ್ಗ   ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಒಳಗೊಂಡ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಎರಡು ತಾಸು ತಡವಾಗಿ ಆರಂಭವಾಯಿತು.

ಎಲ್ಲ 365 ಮತಪೆಟ್ಟಿಗೆಗಳನ್ನು ಒಂದೆಡೆ ಸುರಿದು ಮಿಶ್ರಣ ಮಾಡಿದ ನಂತರ ತಲಾ 50 ಮತಪತ್ರಗಳ ಬಂಡಲ್ ಮಾಡಿದ ನಂತರ ಮತ ಎಣಿಕೆ ಆರಂಭಿಸಲಾಯಿತು. ಈ ಪ್ರಕ್ರಿಯೆಗೆ 2 ತಾಸು ಸಮಯ ತೆಗೆದುಕೊಂಡರು.

ಎರಡು ಕೊಠಡಿಗಳಲ್ಲಿ ತಲಾ 7 ಟೇಬಲ್ ಹಾಕಲಾಗಿದೆ. ಒಂದು ಟೇಬಲ್ ಗೆ ಮೂವರು ಸಿಬ್ಬಂದಿ ನೇಮಿಸಲಾಗಿದೆ.

ನಿಧಾನವಾಗಿ ಸಾಗಿದ ಎಣಿಕೆ

ತುಮಕೂರು: ವಿಧಾನ ಪರಿಷತ್ ಮತಗಳ ಎಣಿಕೆ ನಿಧಾನವಾಗಿ ಸಾಗಿದ್ದು, ಇನ್ನೂ ಮತ ಪತ್ರಗಳನ್ನು ಜೋಡಿಸುವ (ಬಂಡಲ್ ಮಾಡುವುದು) ಕೆಲಸ ಸಾಗಿದೆ.

ಮೊದಲ ಸುತ್ತಿನ ಎಣಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. 10.30 ಗಂಟೆ ವೇಳೆಗೆ ಮೊದಲ ಸುತ್ತಿನ ಎಣೆಕೆ ಆರಂಭವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಮತಪತ್ರಗಳನ್ನು ಬಂಡಲ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಮತಪೆಟ್ಟಿಗೆಯಿಂದ ಮತ ಪತ್ರಗಳನ್ನು ತೆಗೆದು ಮಿಶ್ರಣಮಾಡಿ, ಬಂಡಲ್ ಮಾಡುವ ಕೆಲಸ ನಡೆದಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಒಂದು ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಕೊಡಗು: ಬಿಜೆಪಿಯ ಸುಜಾ ಕುಶಾಲಪ್ಪಗೆ ಗೆಲುವು


ಮಡಿಕೇರಿ: ಕೊಡಗು ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದರು.

ಬಿಜೆಪಿ ಅಭ್ಯರ್ಥಿ ಸುಜಾ 705 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ ಅವರು 603 ಮತಗಳನ್ನು ಪಡೆದರು. 17 ಮತಗಳು ತಿರಸ್ಕೃತಗೊಂಡಿವೆ. 1,325 ಮತಗಳು ಚಲಾವಣೆಗೊಂಡಿದ್ದವು.

ಮತ ಎಣಿಕೆ ಕೇಂದ್ರಕ್ಕೆ ಹಟ್ಟಿಹೊಳಿ ಆಗಮನ

ಬೆಳಗಾವಿ: ವಿಧಾನಪರಿಷತ್ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿಗೆ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿದ್ದಾರೆ. 
ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ತಮ್ಮ ಏಜೆಂಟರೊಂದಿಗೆ ಚರ್ಚಿಸುತ್ತಿದ್ದಾರೆ.

ಬಿಜೆಪಿಗೆ 93 ಮತಗಳ ಮುನ್ನಡೆ

ಕೊಡಗು
ಬಿಜೆಪಿ; 639
ಕಾಂಗ್ರೆಸ್; 546
 

ಬೆಂಗಳೂರು ನಗರ ಕ್ಷೇತ್ರ: ಮತ ಎಣಿಕೆ ಆರಂಭ

ಬೆಂಗಳೂರು: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗಿದೆ.

ಮತ ಎಣಿಕಾ ಕೊಠಡಿಯಲ್ಲಿ ಒಟ್ಟು ಏಳು ಟೇಬಲ್ ಗಳನ್ನು  ಜೋಡಿಸಲಾಗಿದ್ದು.  ಪ್ರತಿ ಟೇಬಲ್ ಗೆ  ಇಬ್ಬರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ,

ಒಟ್ಟು 2070 ಮತ ಚಲಾವಣೆಯಾಗಿದ್ದು, ಪ್ರತಿ ಟೇಬಲ್ ಗೆ ತಲಾ 300 ಮತಪತ್ರಗಳನ್ನು ಎಣಿಕೆಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಯುಸೂಫ್‌ ಷರೀಫ್‌ ಮತ್ತು (ಕೆಜಿಎಫ್‌ ಬಾಬು) ಮತ್ತು ಬಿಜೆಪಿಯಿಂದ ಎಚ್‌.ಎಸ್‌. ಗೋಪಿನಾಥ್‌ ಸ್ಪರ್ಧಿಸಿದ್ದಾರೆ.

ಚಿತ್ರದುರ್ಗ: ಮತ ಎಣಿಕೆ ಆರಂಭ: 14 ಟೇಬಲ್ ವ್ಯವಸ್ಥೆ

ಚಿತ್ರದುರ್ಗ: ವಿಧಾನಪರಿಷತ್ ಚುನಾವಣೆ ಮತ ಎಣಿಕೆ ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ನೂತನ ಕಟ್ಟಡದಲ್ಲಿ ಆರಂಭವಾಗಿದೆ. ಚುನಾವಣಾ ವೀಕ್ಷಕ ನವೀನ್ ರಾಜ್ ಸಿಂಗ್ ಉಪಸ್ಥಿತಿಯಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಡಿ.10 ರಂದು ಮತದಾನ ನಡೆದಿತ್ತು. ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕು ಸಹಿತ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 5,066 ಮತಗಳ ಪೈಕಿ 5060 (ಶೇ. 99.88) ಮತದಾನವಾಗಿತ್ತು.

ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ , ಕಾಂಗ್ರೆಸ್‌ನ ಬಿ.ಸೋಮಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಕಣದಲ್ಲಿದ್ದಾರೆ. 

ಮತ ಎಣಿಕೆಗೆ 18 ಮೇಲ್ವಿಚಾರಕರು ಹಾಗೂ 36 ಸಹಾಯಕರ ನೇಮಕ ಮಾಡಲಾಗಿದೆ.
ಎಣಿಕೆ ಕೇಂದ್ರದ ಬಳಿ ಬಿಗಿ ಬಂದೋಬಸ್ತ್  ಕಲ್ಪಿಸಲಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ವಿ.ಮನ್ನಿಕೇರಿ ಹಾಗೂ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇದ್ದಾರೆ.

ಎರಡು ಮತಗಳು ತಿರಸ್ಕೃತ, ಗೊಂದಲ‌ ನಿವಾರಣೆ

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌‌ಗೆ ನಡೆದ ಚುನಾವಣೆಯಲ್ಲಿ ಎರಡು ಮತಗಳನ್ನು,‌ ಮತ ಎಣಿಕೆ ಪ್ರಕ್ರಿಯೆಗೂ ಮುನ್ನವೇ ತಿರಸ್ಕರಿಸಲಾಗಿದೆ.

ಗೌಪ್ಯವಾಗಿ ಮತದಾನ ಮಾಡದ ಆರೋಪದ ಹಿನ್ನೆಲೆಯಲ್ಲಿ ಎರಡು ಮತಗಳನ್ನು ತಿರಸ್ಕರಿಸಿ ಚುನಾವಣಾ ಆಯೋಗ ಕ್ರಮ ವಹಿಸಿದೆ. ಈ ಕುರಿತು ಪಕ್ಷಗಳ ಏಜೆಂಟರಿಗೆ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಮನವರಿಕೆ ‌ಮಾಡಿಕೊಟ್ಟಿದ್ದಾರೆ.

ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮ ಪಂಚಾಯ್ತಿಯ ಮತಗಟ್ಟೆ ಸಂಖ್ಯೆ 250ರಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಗೌಪ್ಯ ಕಾಪಾಡದೆ ಮತದಾನ ಮಾಡಿರುವುದು ಗೊತ್ತಾಗಿದೆ.

ಇಬ್ಬರು ಗ್ರಾ.ಪಂ. ಸದಸ್ಯರು ರಹಸ್ಯ ಕಾಪಾಡದೆ ಮತದಾನ ಮಾಡಿದ ಬಗ್ಗೆ  ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಇಬ್ಬರು,
ತಾವು ಯಾರಿಗೆ ಮತ ಹಾಕಿದ್ದೇವೆ ಎಂದು ಚುನಾವಣಾ ಏಜೆಂಟರಿಗೆ ತೋರಿಸಿದ್ದರು.‌ ಈ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚುನಾವಣಾ ಏಜೆಂಟ್ ಹಾಗೂ ಮತಗಟ್ಟೆ ಸಿಬ್ಬಂದಿ ಸಮ್ಮುಖದಲ್ಲಿ ಆ ಎರಡು ಮತಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.

ಈ ಮತಗಟ್ಟೆಗೆ ಮರು ಮತದಾನ ಮಾಡಬೇಕೋ, ನಿರ್ದಿಷ್ಟ ಮತಪತ್ರಗಳನ್ನು ತಿರಸ್ಕರಿಸಬೇಕೋ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದ ನಿರ್ದೇಶನ ಕೇಳಿ ಚುನಾವಣಾ ಆಯೋಗಕ್ಕೆ ತಿಳಿಸಲಾಗಿತ್ತು. ಹೀಗಾಗಿ, ಗೊಂದಲ ನಿರ್ಮಾಣವಾಗಿತ್ತು.

ಕಾರವಾರ: 14 ಮೇಜುಗಳಲ್ಲಿ 17 ಸುತ್ತು ಮತ ಎಣಿಕೆ

ಕಾರವಾರ: ವಿಧಾನಪರಿಷತ್ ಚುನಾವಣೆಯ ಮತ ಎಣಿಕೆಯು ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗಿದೆ.  ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಯಿತು. ಒಟ್ಟು 14 ಮೇಜುಗಳಲ್ಲಿ 17 ಸುತ್ತಿನ ಮತ ಎಣಿಕೆಯಾಗಲಿದೆ. 

ಕಣದಲ್ಲಿ ಐವರಿದ್ದು, 2,907 ಮತ ಚಲಾವಣೆಯಾಗಿದೆ. ಉತ್ತರಕನ್ನಡ ಕ್ಷೇತ್ರದಲ್ಲಿ 2,915 ಮತದಾರರಿದ್ದಾರೆ.

ಬಿ.ಜೆ.ಪಿ ಅಭ್ಯರ್ಥಿಯಾಗಿ ಗಣಪತಿ ಉಳ್ವೇಕರ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ, ರೈತ ಭಾರತ ಪಕ್ಷದಿಂದ ಸೋಮಶೇಖರ ಗೌಡ, ಪಕ್ಷೇತರರಾಗಿ ದತ್ತಾತ್ರೇಯ ನಾಯ್ಕ ಹಾಗೂ ಈಶ್ವರ ಗೌಡ ಸ್ಪರ್ಧಿಸಿದ್ದಾರೆ.

ರಾಯಚೂರು: ಮತಗಳ‌ ಎಣಿಕೆ ‌ಆರಂಭ

ರಾಯಚೂರು: ನಗರದ ಎಸ್ ಆರ್ ಪಿಯು ಕಾಲೇಜಿನಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಡಾ.ಅವಿನಾಶ ಮೆನನ್ ಅವರ ಸಮ್ಮುಖದಲ್ಲಿ ಸರಿಯಾಗಿ ಬೆಳಿಗ್ಗೆ 8 ಗಂಟೆಗೆ ಭದ್ರತಾ ಕೋಣೆ (ಸ್ಟ್ರಾಂಗ್ ರೂಮ್) ತೆರೆಯಲಾಯಿತು. ಮತಪೆಟ್ಟಿಗೆಗಳನ್ನು ಮತಗಳ ‌ಎಣಿಕೆ‌ ಟೇಬಲ್ ಗಳಿಗೆ ತೆಗೆದುಕೊಳ್ಳಲಾಗಿದ್ದು, ಪ್ರಾಶಸ್ತ್ಯ ಅನುಸಾರ ಮತಪತ್ರಗಳ ವಿಂಗಡನೆ ಆರಂಭಿಸಲಾಗಿದೆ. 

ಒಟ್ಟು 6,488 ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ.
ಮತಗಳ ಎಣಿಕೆಗೆ ಭದ್ರತಾ ಕೋಣೆ ತೆರೆಯುವ ಪೂರ್ವದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ, ಮತ ಎಣಿಕೆ‌ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಮಧ್ಯೆ ತೀವ್ರ ಸ್ಪರ್ಧೆ ಇದೆ.

ಬಳ್ಳಾರಿಯಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ

ಬಳ್ಳಾರಿ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆ ಕಾರ್ಯನಗರದ ಸರಕಾರಿ ಪಾಲಿಕೆಟ್ನಿಕ್‌ ಕಾಲೇಜಿನಲ್ಲಿ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಹಿನ್ನೆಲೆ ಸ್ಟ್ರಾಂಗ್ ರೂಮ್ ಗಳನ್ನು ಓಪನ್ ಮಾಡಿ ಮತಪೆಟ್ಟಿಗೆಗಳನ್ನು ಮತ ಎಣಿಕೆ ಕೊಠಡಿಗೆ ರವಾನೆ ಮಾಡಲಾಯಿತು.

ಮತ ಎಣಿಕೆ ಒಟ್ಟು ಎರಡು ಕೊಠಡಿಗಳಲ್ಲಿ10 ಟೇಬಲ್‌ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‌ನಲ್ಲಿ ಒಬ್ಬರು ಮತ ಎಣಿಕೆ ಸೂಪವೈಸರ್‌ ಹಾಗೂ ಒಬ್ಬರು ಮತ ಎಣಿಕೆ ಸಹಾಯಕರು, ಅಭ್ಯರ್ಥಿ ಪರ ಒಬ್ಬರು ಕೌಂಟಿಂಗ್‌ ಏಜೆಂಟರಿರಲಿದ್ದಾರೆ.

ಎಂಎಲ್ಸಿ ಚುನಾವಣೆಯಲ್ಲಿ ಒಟ್ಟು 4663 ಮತದಾರರಿದ್ದು, ಡಿ.10ರಂದು ನಡೆದ ಮತದಾನದ ವೇಳೆ ಒಟ್ಟು 4654ಮತದಾರರು ಮತ ಚಲಾಯಿಸಿದ್ದಾರೆ. 9 ಜನ ಗೈರಾಗಿದ್ದಾರೆ.

ಧಾರವಾಡ: ಎರಡು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭಗೊಂಡಿತು.

ಧಾರವಾಡ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ದಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು.

ಚುನಾವಣಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ. ಪಾಟೀಲ ಅವರ ನೇತೃತ್ವದಲ್ಲಿ ಮತ ಪೆಟ್ಟಿಗೆ ಇರಿವ ಸ್ಟ್ರಾನ್ಗ್ ರೂಮ್ ಬಾಗಿಲು ತೆರೆಯಲಾಯಿತು.
ವಿವಿಧ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಇದ್ದರು.

ಒಟ್ಟು 14 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 7452 ಮತಗಳ ಎಣಿಕೆಗೆ ಸಿದ್ಧತೆ ಆರಂಭ ಗೊಂಡಿದೆ. ಚುನಾವಣೆಯಲ್ಲಿ ಒಟ್ಟು ಶೇ 99.68ರಷ್ಟು ಮತದಾನವಾಗಿತ್ತು

ಕಲಬುರಗಿ-ಯಾದಗಿರಿ: ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ

ಕಲಬುರಗಿ: ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಿತ ವಿಭಾಗದಲ್ಲಿ ಚಾಲನೆ ದೊರೆತಿದೆ. 

ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ನೇತೃತ್ವದಲ್ಲಿ ‌ಮತಪೆಟ್ಟಿಗೆಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಮ್ ಬಾಗಿಲು ತೆರೆಯಲಾಯಿತು.

ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ‌ಪಾಟೀಲ ಮರತೂರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ‌ಕೋಡ್ಲಿ ಇದ್ದರು.

ಒಟ್ಟು 7088 ಮತದಾರರ ಪೈಕಿ 7070 ಜನರು ತಮ್ಮ ಹಕ್ಕು ಚಲಾಯಿಸಿದ್ದರು.‌ ಶೇ 99.70 ಮತದಾನವಾಗಿತ್ತು.

ಪರಿಷತ್ ಚುನಾವಣೆ: ಮತ ಎಣಿಕೆ ಆರಂಭ

ವಿಜಯಪುರ: ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ದ್ವಿಸದಸ್ಯ ಕ್ಷೇತ್ರಕ್ಕೆ ನಡೆದಿರುವ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ.

ನಗರದ ದರಬಾರ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದೆ.

ಒಟ್ಟು14 ಟೇಬಲ್ ಅಳವಡಿಸಲಾಗಿದ್ದು, ಒಂದು ಟೇಬಲ್‌ ಗೆ ಮೂವರು ಸಿಬ್ಬಂದಿ ನೇಮಿಸಲಾಗಿದೆ.
ಮೊದಲ ಹಂತದಲ್ಲಿ ಭದ್ರತಾ ಕೊಠಡಿ ತೆರೆದು ಮತ ಪೆಟ್ಟಿಗೆ ಹೊರ ತೆಗೆಯಲಾಯಿತು.
ಎಲ್ಲ ಮತ ಪೆಟ್ಟಿಗೆ ತೆಗೆದು ಬ್ಯಾಲೆಟ್ ಪೇಪರ್ ಕ್ರೋಢೀಕರಿಸಲಾಯಿತು. ಯಾವ ಮತ ಪೆಟ್ಟಿಗೆಯ ಮತಗಳು ಯಾವುದರಲ್ಲಿವೆ ಎಂಬುದು ಗೊತ್ತಾಗದಂತೆ ಮಾಡಲಾಯಿತು.

ಒಟ್ಟು ಒಂಬತ್ತು ಟ್ರೇಗಳನ್ನು ಇಡಲಾಗಿದೆ. ತಿರಸ್ಕೃತ ಮತಗಳನ್ನು ಹಾಕಲು ಒಂದು ಟ್ರೇ ಇಡಲಾಗಿದೆ. ಇನ್ನುಳಿದಂತೆ ಏಜೆಂಟರು ಹಾಗೂ ಸಿಬ್ಬಂದಿ ಕಡೆ ಟ್ರೇ ಇಡಲಾಗಿದ್ದು, ಮೊದಲ ಸುತ್ತಿನ ಮತ ಎಣಿಕೆ ಆರಂಭಿಸಲಾಗಿದೆ.
ಅಭ್ಯರ್ಥಿ ಹಾಗೂ ಆದ್ಯತಾವಾರು ಮತ ವಿಂಗಡಿಸಲಾಗುತ್ತಿದೆ.

ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಸೇರಿದಂತೆ ಕಣದಲ್ಲಿರುವ ಒಟ್ಟು ಏಳು ಜನ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ.

ಭದ್ರತಾ ಕೊಠಡಿಯನ್ನು ತೆರೆಯುವ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ ಇದ್ದರು.

ಇದೇ ಮೊದಲಿಗೆ ‌ಚಿಕ್ಕೋಡಿಯಲ್ಲಿ ಮತ ಎಣಿಕೆ

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ ದ್ವಿಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಕೆ ಕಾರ್ಯ ಉಪ ವಿಭಾಗ ಕೇಂದ್ರ ಸ್ಥಾನವಾದ ಚಿಕ್ಕೋಡಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

ಆರ್.ಡಿ. ಪಿಯು ಕಾಲೇಜಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಭದ್ರತಾ ಕೊಠಡಿಯನ್ನು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ಸಮ್ಮುಖದಲ್ಲಿ ತೆರೆಯಲಾಯಿತು.

ಎರಡು ಕೊಠಡಿಗಳ‌ 14 ಟೇಬಲ್‌ಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ.

ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಿರಿಯ ಸಹೋದರ ಚನ್ನರಾಜ ಹಟ್ಟಿಹೊಳಿ, ಆಮ್ ಆದ್ಮಿ ಪಕ್ಷದಿಂದ ಶಂಕರ ಹೆಗಡೆ, ಪಕ್ಷೇತರರಾದ ಲಖನ್ ಜಾರಕಿಹೊಳಿ, ಶಂಕರ ಕುಡುಸೋಮಣ್ಣವರ ಹಾಗೂ ಕಲ್ಮೇಶ ಗಾಣಗಿ ಅವರ ರಾಜಕೀಯ ಭವಿಷ್ಯವನ್ನು ಸ್ಥಳೀಯ ಸಂಸ್ಥೆಗಳ ಮತದಾರರು ಬರೆದಾಗಿದೆ. ಯಾರಿಗೆ ಪ್ರಾಶಸ್ತ್ಯ ದೊರೆತಿದೆ ಎನ್ನುವುದು ಇಂದು ಗೊತ್ತಾಗಲಿದೆ.

ಕೊಡಗು: ಕೆಲವೇ ಕ್ಷಣದಲ್ಲಿ ಮತ ಎಣಿಕೆ ಆರಂಭ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ಡಾ.ಮಂಥರ್‌ಗೌಡ ಹಾಗೂ ಬಿಜೆಪಿಯಿಂದ ಸುಜಾ ಕುಶಾಲಪ್ಪ ಕಣದಲ್ಲಿ.

ಶೇ 99.80ರಷ್ಟು ಮತ ಚಲಾವಣೆ

ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನದಲ್ಲಿ, ಸುಮಾರು ಶೇ 99.80ರಷ್ಟು ಮತ ಚಲಾವಣೆಯಾಗಿತ್ತು.

ಮತಪೆಟ್ಟಿಗೆಗಳು ಹೊರಕ್ಕೆ...

ಮತಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಬೆಳಿಗ್ಗೆ 7.30ರಿಂದ ಅಭ್ಯರ್ಥಿಗಳ ಹಾಗೂ ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗುತ್ತಿದೆ.

ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ '9ರ ಮಹಿಮೆ' ಚರ್ಚೆ

‌ಎಲ್ಲ ಪಕ್ಷದ ಅಭ್ಯರ್ಥಿಗಳು ಸಾಕಷ್ಟು ದುಡ್ಡು ಖರ್ಚು ಮಾಡಿದ್ದಾರೆ. ಈ ಬಾರಿಯ ಚುನಾವಣೆ ನೋಡಿದರೆ ಸಾಮಾನ್ಯರು ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ ಎಂದು ಶಾಸಕರು ತಮ್ಮ ಭಾವನೆ ಹಂಚಿಕೊಳ್ಳುತ್ತಿದ್ದರು.

9ರ ಸಂಖ್ಯೆ ಗೆಲುವಿಗೆ ದಾರಿ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದನ್ನು ಎಲ್ಲರೂ ನಂಬಿಕೊಂಡಿದ್ದಾರೆ. ₹1 ಲಕ್ಷ ಕೊಡುವ ಕಡೆ 9ರ ಲೆಕ್ಕದಲ್ಲಿ ₹90 ಸಾವಿರ ಕೊಟ್ಟಿದ್ದಾರೆ. 3+6 ಕೂಡಿದರೆ 9 ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಲವರು ₹36 ಸಾವಿರ, ₹63 ಸಾವಿರ ಕೊಟ್ಟವರೂ ಇದ್ದಾರೆ ಎಂಬ ‘ಸಂಖ್ಯಾಶಾಸ್ತ್ರ’ದ ಸ್ವಾರಸ್ಯವೂ ಚರ್ಚೆ ಮಧ್ಯೆ ಹರಿದು ಬಂತು.

ಕಾಂಗ್ರೆಸ್‌, ಜೆಡಿಎಸ್‌ಗೂ ಪ್ರತಿಷ್ಠೆಯ ಕಣ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಪರಿಷತ್ತಿನ ಹಾಲಿ ಸದಸ್ಯ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ, ಜೆಡಿಎಸ್‌ನ ಸೂರಜ್‌ ರೇವಣ್ಣ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಚನ್ನರಾಜ ಹಟ್ಟಿಹೊಳಿ, ಜಾರಕಿಹೊಳಿ ಕುಟುಂಬದ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ, ಬಿಜೆಪಿ ಶಾಸಕ ಜಗದೀಶ ಶೆಟ್ಟರ್ ತಮ್ಮ ಪ್ರದೀಪ ಶೆಟ್ಟರ್ ಕಣದಲ್ಲಿರುವ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.