ADVERTISEMENT

Live | ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕ್ಷೇತ್ರವಾರು ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ

ರಾಜ್ಯದ 5 ನಗರ ಸಭೆಗಳು ಸೇರಿ ಅವಧಿಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 59 ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಬಿಜೆಪಿ ಮೂರು ನಗರಸಭೆಗಳಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಹೊಸಪೇಟೆ ಮತ್ತು ಶಿರಾದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ.ಮತಗಳ ಎಣಿಕೆ ಬೆಳಿಗ್ಗೆ 8ಕ್ಕೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರ ಸ್ಥಾನದಲ್ಲೇ ಆರಂಭವಾಗಿದೆ. ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ–ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಹೊಸಪೇಟೆ ನಗರಸಭೆಗಳು, ವಿವಿಧ ಜಿಲ್ಲೆಗಳ 19 ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳ ಫಲಿತಾಂಶ ಹೊರಬಂದಿದೆ. 1,184 ವಾರ್ಡ್‌ಗಳಲ್ಲಿ 4,961 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಿಗೆ ಮತ್ತು ವಿವಿಧ ಗ್ರಾಮ ಪಂಚಾಯಿತಿಗಳ 401 ಸ್ಥಾನಗಳಿಗೂ ಉಪಚುನಾವಣೆ ನಡೆದಿತ್ತು.

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 15:22 IST
Last Updated 30 ಡಿಸೆಂಬರ್ 2021, 15:22 IST

ಹೊಸಪೇಟೆ ನಗರಸಭೆ: ಕಡಿಮೆ ಅಂತರದ ಗೆಲುವು

ಹೊಸಪೇಟೆ ನಗರಸಭೆಗೆ ನಡೆದ ಚುನಾವಣೆಯಲ್ಲಿ 14ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸರವಣನ್ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್.ಈಶ್ವರ್ ವಿರುದ್ಧ 59 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. 35 ವಾರ್ಡ್‌ಗಳಲ್ಲಿ ಅತಿ ಕಡಿಮೆ ಅಂತರದಿಂದ ಜಯಗಳಿಸಿದ ಅಭ್ಯರ್ಥಿ ಇವರಾಗಿದ್ದಾರೆ.

8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಹುಲುಗಪ್ಪ ವಡ್ಡರ್ ಪಕ್ಷೇತರ ಅಭ್ಯರ್ಥಿ ವಿ.ಗಾಳೆಪ್ಪ ವಿರುದ್ಧ 1741 ಮತಗಳ ಅಂತರದಿಂದ ಗೆದ್ದಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಎನಿಸಿಕೊಂಡಿದ್ದಾರೆ.

ನೋಟಾಕ್ಕೆ 891 ಮತಗಳು
ನಗರಸಭೆ ಚುನಾವಣೆಯ 35 ವಾರ್ಡ್‌ಗಳಿಗೆ ನಡೆದ ಮತದಾನದಲ್ಲಿ ಒಟ್ಟು 891 ಮತಗಳು ನೋಟಾಕ್ಕೆ ಬಿದ್ದಿವೆ. 32ನೇ ವಾರ್ಡಿನಲ್ಲಿ 65 ಮತದಾರರು ನೋಟಾಗೆ ಮತ ಹಾಕಿದ್ದಾರೆ.

ADVERTISEMENT

ಕ್ಷೇತ್ರವಾರು ಫಲಿತಾಂಶದ ವಿವರ

ಒಟ್ಟು ಸ್ಥಾನಗಳು: 1184

ಕಾಂಗ್ರೆಸ್: 501

ಬಿಜೆಪಿ: 433

ಜಿಡಿಎಸ್: 45

ಜನತಾ ಪಕ್ಷ: 1

ಎಎಪಿ: 1

ಎಐಎಂಐಎಂ: 2

ಎಸ್‌ಡಿಪಿಐ:  6

ಪಕ್ಷೇತರರು: 195
 

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕ್ಷೇತ್ರವಾರು ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ

ಬೆಳಗಾವಿ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

ಬೆಳಗಾವಿ: ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, 5 ಕ್ಷೇತ್ರಗಳಲ್ಲಿ ಕಮಲ ಅರಳಿದೆ. 3 ಕ್ಷೇತ್ರಗಳಲ್ಲಿ ಮತದಾರ ಕಾಂಗ್ರೆಸ್‌ ಕೈಹಿಡಿದಿದ್ದಾನೆ.  ಪಕ್ಷೇತರರಿಗೆ ಮಣೆ ಹಾಕಿದ್ದರಿಂದ 8 ಕ್ಷೇತ್ರಗಳ ಫಲಿತಾಂಶ ಅತಂತ್ರವಾಗಿದೆ.

ಹೊಸಪೇಟೆ ನಗರಸಭೆ ಫಲಿತಾಂಶ ಅತಂತ್ರ; ಸಚಿವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ

ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ನಡೆದ ಸ್ಥಳೀಯ ಸಂಸ್ಥೆಗಳ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತವರು ಕ್ಷೇತ್ರ ವಿಜಯನಗರದಲ್ಲೇ ಬಿಜೆಪಿಗೆ ಮುಖಭಂಗವಾಗಿದೆ.

ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಮಂಜಪ್ಪ ಗೆಲುವು 

ಉಚ್ಚಂಗಿದುರ್ಗ: ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಮಂಜಪ್ಪ ಗೆಲುವು ಸಾಧಿಸಿದ್ದಾರೆ. 

ಪ್ರತಿಸ್ಪರ್ಧಿ ಎಂ.ಡಿ ನಾಗರಾಜ ಅವರನ್ನು ಅವರು 98 ಮತಗಳಿಂದ ಪರಾಭವಗೊಳಿಸಿದರು. ಚಲಾವಣೆಯಾಗಿದ್ದ 885 ಮತಗಳ ಪೈಕಿ 535 ಮತಗಳನ್ನು ಪಡೆದರೆ, ಎಂ.ಡಿ ನಾಗರಾಜ್ 385 ಮತಗಳನ್ನು ಪಡೆದಿದ್ದರು. 14 ಮತಗಳು ತಿರಸ್ಕೃತಗೊಂಡಿದ್ದವು. 

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಪಿ.ಮಂಜಪ್ಪ ಅವರ ಬೆಂಬಲಿಗರು ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿರು. 

ಇಬ್ಬರಿಗೂ ಸಮಾನ ಮತ: ಚೀಟಿ ಎತ್ತುವ ಮೂಲಕ ಆಯ್ಕೆ

ಮೋಳೆ(ಬೆಳಗಾವಿ ಜಿಲ್ಲೆ): ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ 12ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾಶ್ರೀ ಪವಾರ ಹಾಗೂ ಬಿಜೆಪಿ ಅಭ್ಯರ್ಥಿ ರೋಹಿಣಿ ಬಾಳಿ 284 ಮತ ಗಳಿಸಿದ್ದರು. ಇಬ್ಬರೂ ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರಿಂದ ಚುನಾವಣೆ ಅಧಿಕಾರಿಗಳು ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಂತಿಮವಾಗಿ ಬಿಜೆಪಿಯ ರೋಹಿಣಿ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು.

ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶ

ಹಾವೇರಿ ತಾಲ್ಲೂಕಿನ ಗುತ್ತಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು, ಬಿಜೆಪಿಗೆ ನಿರಾಸೆಯಾಗಿದೆ. ಒಟ್ಟು 18 ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಬಿಜೆಪಿ 6 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನವನ್ನು ಗೆದ್ದುಕೊಂಡಿದ್ದಾರೆ. 

ಹಾನಗಲ್‌ ಪುರಸಭೆ: ಪಕ್ಷೇತರ ಅಭ್ಯರ್ಥಿ ಗೆಲುವು

ಹಾನಗಲ್‌ ಪುರಸಭೆಯ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ  ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಯನ್ನು ಮಣಿಸಿ, ಪಕ್ಷೇತರ ಅಭ್ಯರ್ಥಿ ಜಿಲಾನಿ ಶೇಖ್‌ ಜಯ ಗಳಿಸಿದ್ದಾರೆ. 

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ

ಹಾವೇರಿ: ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶವಾಗಿದ್ದು, ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ–ಸವಣೂರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ‘ಬಂಕಾಪುರ ಪುರಸಭೆ’ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಬಿಜೆಪಿ 7 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನ ಗಳಿಸಿದ್ದಾರೆ. 

ಹೊಸಪೇಟೆ ನಗರಸಭೆಯಲ್ಲಿ ಖಾತೆ ತೆರೆದ ‘ಆಮ್‌ ಆದ್ಮಿ’

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ 22ನೇ ವಾರ್ಡಿನಲ್ಲಿ ಜಯ ಗಳಿಸುವ ಮೂಲಕ ‘ಆಮ್‌ ಆದ್ಮಿ’ ಪಕ್ಷ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಶೇಕ್ಷಾವಲಿ ಅವರು ಎಎಪಿಯಿಂದ ಕಣಕ್ಕಿಳಿದಿದ್ದರು. ಮೊದಲ ಚುನಾವಣೆಯಲ್ಲೇ ಮತದಾರರು ಎಎಪಿ ಕೈ ಹಿಡಿದಿದ್ದಾರೆ. 

ಖಾರದಪುಡಿ ಮಹೇಶ ಗೆಲುವು: ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಖಾರದಪುಡಿ ಮಹೇಶ ನಗರಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ನಿಂದ 20ನೇ ವಾರ್ಡ್‌ನಿಂದ ಮಹೇಶ ಸ್ಪರ್ಧಿಸಿದ್ದರು. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದ ಕಾಂಗ್ರೆಸ್‌ ಪಕ್ಷವು, ಮಹೇಶ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು.

1 ಮತ ಅಂತರದಲ್ಲಿ ಗೆಲುವು: ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಒಂದನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿ ಎಲ್.ವಸಂತ 1 ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ. ವಸಂತ 166 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಂ. ವಿರೂಪಾಕ್ಷ 165 ಮತ ಗಳಿಸಿದ್ದಾರೆ. ಎರಡು ಬಾರಿ ಮರು ಮತ ಎಣಿಕೆ ನಡೆಸಲಾಯಿತು.

5 ಮತಗಳಿಂದ ಜಯ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ 1ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಸರಸ್ವತಿ 5 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಮತಾ ಅವರನ್ನು ಸೋಲಿಸಿದ್ದಾರೆ.

ಗದಗ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ

 ನಗರಸಭೆ      ಕಾಂಗ್ರೆಸ್    ಬಿಜೆಪಿ    ಜೆಡಿಎಸ್‌    ಎಎಪಿ    ಇತರೆ    ಅಧಿಕಾರ ಹಿಡಿದ ಪಕ್ಷ
ಗದಗ -ಬೆಟಗೇರಿ    15        18            0                  0         02         ಬಿಜೆಪಿ

ಗದಗ: ಚುನಾವಣೆ ಅಖಾಡದಲ್ಲಿ ಸೋಲುಂಡ ಯುವ ನೇತಾರರು

ಗದಗ: ಗದಗ ಬೆಟಗೇರಿ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಅಖಾಡದಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಯೂತ್‌ ವಿಂಗ್‌ನ ಅಧ್ಯಕ್ಷರು ಸೋಲುಂಡಿದ್ದಾರೆ.

ವಾರ್ಡ್‌ ನಂಬರ್‌ 25ರಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಶೋಕ್ ಮಂದಾಲಿ ಬಿಜೆಪಿಯ ವಿನಾಯಕ್ ಮಾನ್ವಿ ವಿರುದ್ಧ ಸೋಲುಂಡಿದ್ದಾರೆ.

ಅದೇರೀತಿ, ವಾರ್ಡ್ ನಂಬರ್ 9ರಿಂದ ಕಣಕ್ಕೆ ಇಳಿದಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜಗೌಡ ಹಿರೇಮನಿ ಪಾಟೀಲ ಅವರಿಗೂ ಸೋಲಾಗಿದ್ದು, ಇಲ್ಲಿ ಕಾಂಗ್ರೆಸ್‌ನ ಚಂದ್ರಶೇಖರಗೌಡ ಕರಿಸೋಮನಗೌಡರ್ ಗೆಲುವು ಸಾಧಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ

ಪುರಸಭೆ
* ಕುರುಗೋಡು– 15– 7– 0– 0– 1– ಕಾಂಗ್ರೆಸ್‌    
* ಕುರೇಕುಪ್ಪ– 8– 7– 2– 0– 6– ಅತಂತ್ರ

ವಿಜಯನಗರ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ

ಹೆಸರು–ಕಾಂಗ್ರೆಸ್‌–ಬಿಜೆಪಿ–ಜೆಡಿಎಸ್‌–ಎಎಪಿ–ಇತರೆ–ಅಧಿಕಾರ ಹಿಡಿದ ಪಕ್ಷ

* ನಗರಸಭೆ
ಹೊಸಪೇಟೆ    – 12– 10– 0– 1– 12– ಅತಂತ್ರ

* ಪುರಸಭೆ
ಹಗರಿಬೊಮ್ಮನಹಳ್ಳಿ– 12– 11– 0– 0– 0– ಕಾಂಗ್ರೆಸ್‌

* ಪಟ್ಟಣ ಪಂಚಾಯಿತಿ
ಮರಿಯಮ್ಮನಹಳ್ಳಿ– 13– 4– 0– 0– 1– ಕಾಂಗ್ರೆಸ್‌

ಗದಗ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ

ಹೆಸರು–ಕಾಂಗ್ರೆಸ್‌–ಬಿಜೆಪಿ–ಜೆಡಿಎಸ್‌–ಎಎಪಿ–ಇತರೆ–ಅಧಿಕಾರ ಹಿಡಿದ ಪಕ್ಷ

ನಗರಸಭೆ
ಗದಗ ಬೆಟಗೇರಿ– 15–18–0–0–02–ಬಿಜೆಪಿ

ಬಳ್ಳಾರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

ಹೆಸರು- ಗೆದ್ದ ಪಕ್ಷ- ಹಿಂದೆ ಅಧಿಕಾರದಲ್ಲಿದ್ದ ಪಕ್ಷ

* ಕುರುಗೋಡು ಪುರಸಭೆ- ಕಾಂಗ್ರೆಸ್‌- ಬಿಜೆಪಿ
* ಕುರೇಕುಪ್ಪ ಪಟ್ಟಣ ಪಂಚಾಯಿತಿ- ಅತಂತ್ರ- ಕಾಂಗ್ರೆಸ್‌

ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

ಹೆಸರು- ಗೆದ್ದ ಪಕ್ಷ- ಹಿಂದೆ ಅಧಿಕಾರದಲ್ಲಿದ್ದ ಪಕ್ಷ

* ಹೊಸಪೇಟೆ ನಗರಸಭೆ- ಅತಂತ್ರ- ಕಾಂಗ್ರೆಸ್‌
* ಹಗರಿಬೊಮ್ಮನಹಳ್ಳಿ ಪುರಸಭೆ- ಕಾಂಗ್ರೆಸ್‌- ಕಾಂಗ್ರೆಸ್‌
* ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ- ಅತಂತ್ರ- ಕಾಂಗ್ರೆಸ್‌

ಅಣ್ಣಿಗೇರಿ ಪುರಸಭೆ ಚುನಾವಣೆ ಫಲಿತಾಂಶ

ಧಾರವಾಡ: ಅಣ್ಣಿಗೇರಿ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆದ್ದಿದೆ. ಪಕ್ಷೇತರರು 6 ಸ್ಥಾನಗಳಲ್ಲಿ ಹಾಗೂ ಬಿಜೆಪಿ 5 ಸ್ಥಾನಗಲ್ಲಿ ಜಯ ಸಾಧಿಸಿದೆ. ಕಳೆದಬಾರಿ 11 ಅಭ್ಯರ್ಥಿಗಳನ್ನು ಹೊಂದಿದ್ದ ಜೆಡಿಎಸ್‌ನದ್ದು ಈ ಬಾರಿ ಶೂನ್ಯ ಸಾಧನೆ.

ಹಗರಿಬೊಮ್ಮನಹಳ್ಳಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಹಗರಿಬೊಮ್ಮನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಒಟ್ಟು 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಬಿಡದಿ ಪುರಸಭೆ ಫಲಿತಾಂಶ

ಕಾಂಗ್ರೆಸ್: 09
ಜೆಡಿಎಸ್: 14
ಬಿಜೆಪಿ: 00
ಇತರೆ: 00
ಅಧಿಕಾರ ಹಿಡಿಯಲಿರುವ ಪಕ್ಷ: ಜೆಡಿಎಸ್

ವೆಂಕಟೇಶ ನಗರದ ಪುರಸಭೆ ಉಪಚುನಾವಣೆ: ಕಾಂಗ್ರೆಸ್‌ನ ದೇವುಗೆ ಭರ್ಜರಿ ಗೆಲುವು

ಸೇಡಂ (ಕಲಬುರಗಿ ಜಿಲ್ಲೆ): ಪಟ್ಟಣದ ವೆಂಕಟೇಶ ನಗರದ ಪುರಸಭೆ ಸದಸ್ಯ ಸ್ಥಾನದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವು ದೊರೆ ಗೆಲುವು ಸಾಧಿಸಿದ್ದಾರೆ.

ದೇವು ದೊರೆ (778), ಬಿಜೆಪಿಯ ಸಂದೀಪ ಪ್ಯಾಟಿ (353) ಮತ್ತು ಜೆಡಿಎಸ್‌ನ ದಿನೇಶ್ ನಾಯಿಕೋಡಿ 152 ಮತಗಳನ್ನು ಪಡೆದಿದ್ದಾರೆ. ದೇವು ದೊರೆ 425 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಈ ಫಲಿತಾಂಶ ತೀವ್ರ ಮುಖಭಂಗವಾದಂತಾಗಿದೆ.

ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಪಕ್ಷಕ್ಕೆ ಈ ಫಲಿತಾಂಶ ಮುಂದಿನ ಚುನಾವಣೆಗೆ ಬಲ ತಂದಂತಾಗಿದೆ‌. ಗೆಲುವು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ರಾಯಚೂರು ನಗರ ಸ್ಥಳೀಯ ಸಂಸ್ಥೆ ಚುನಾವಣೆ: 3 ಕಾಂಗ್ರೆಸ್, 2 ಬಿಜೆಪಿಗೆ

ರಾಯಚೂರು: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಪಟ್ಟಣ ಪಂಚಾಯಿತಿಗಳಲ್ಲಿ, ಬಿಜೆಪಿ ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದಿವೆ.

ಸಿರವಾರ ಪಟ್ಟಣ ಪಂಚಾಯಿತಿ 21 ಸ್ಥಾನಗಳ ಪೈಕಿ 9 ಕಾಂಗ್ರೆಸ್, 6 ಬಿಜೆಪಿ, 3 ಜೆಡಿಎಸ್ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದಾರೆ. ತುರವಿಹಾಳ ಪಟ್ಟಣ ಪಂಚಾಯಿತಿ 14 ಸ್ಥಾನಗಳ ಪೈಕಿ ಕಾಂಗ್ರೆಸ್ 9, ಬಿಜೆಪಿ 2 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದಾರೆ.

ಕವಿತಾಳ ಪಟ್ಟಣ ಪಂಚಾಯಿತಿ 16 ಸ್ಥಾನಗಳ ಪೈಕಿ 8 ಕಾಂಗ್ರೆಸ್, 4 ಬಿಜೆಪಿ, 3 ಜೆಡಿಎಸ್ ಹಾಗೂ 1 ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಳಗಾನೂರ ಪಟ್ಟಣ ಪಂಚಾಯಿತಿ 12 ಬಿಜೆಪಿ ಸ್ಥಾನಗಳ ಪೈಕಿ 6 ಬಿಜೆಪಿ, 5 ಕಾಂಗ್ರೆಸ್, 1 ಪಕ್ಷೇತರ ಆಯ್ಕೆಯಾಗಿದ್ದಾರೆ. ಮಸ್ಕಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 16 ಬಿಜೆಪಿ ಹಾಗೂ 9 ಕಾಂಗ್ರೆಸ್ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಚಿಕ್ಕಮಗಳೂರು ನಗರಸಭೆ ಚುನಾವಣೆ: ಬಿಜೆಪಿಗೆ ಸರಳ ಬಹುಮತ

ಚಿಕ್ಕಮಗಳೂರು ನಗರಸಭೆ ಚುನಾವಣೆ: ಬಿಜೆಪಿಗೆ ಸರಳ ಬಹುಮತ

ಒಟ್ಟು ವಾರ್ಡ್ 35–
ಬಿಜೆಪಿ- 18
ಕಾಂಗ್ರೆಸ್-12
ಜೆಡಿಎಸ್- 02
ಪಕ್ಷೇತರ- 02
ಎಸ್‌ಡಿಪಿಐ- 01

ಗದಗ ನಗರಸಭೆ ಚುನಾವಣಾ ಫಲಿತಾಂಶ

ಒಟ್ಟು 35 ವಾರ್ಡಗಳಲ್ಲಿ–
18 ಬಿಜೆಪಿ
15 ಕಾಂಗ್ರೆಸ್
2 ಪಕ್ಷೇತರ

––––––––
 ವಾರ್ಡ್ 1 ಕಾಂಗ್ರೇಸ್
ವಾರ್ಡ್ 2 ಕಾಂಗ್ರೇಸ್
ವಾರ್ಡ್ 3 ಬಿಜೆಪಿ
ವಾರ್ಡ್ 4 ಕಾಂಗ್ರೇಸ್
ವಾರ್ಡ್ 5 ಬಿಜೆಪಿ
ವಾರ್ಡ್ 6 ಕಾಂಗ್ರೇಸ್
ವಾರ್ಡ್ 7 ಬಿಜೆಪಿ
ವಾರ್ಡ್ 8 ಕಾಂಗ್ರೇಸ್
ವಾರ್ಡ್ 9 ಕಾಂಗ್ರೇಸ್
ವಾರ್ಡ್ 10 ಕಾಂಗ್ರೇಸ್
ವಾರ್ಡ್ 11 ಬಿಜೆಪಿ
ವಾರ್ಡ್ 12 ಬಿಜೆಪಿ
ವಾರ್ಡ್ 13 ಬಿಜೆಪಿ
ವಾರ್ಡ್ 14 ಬಿಜೆಪಿ
ವಾರ್ಡ್ 15 ಬಿಜೆಪಿ
ವಾರ್ಡ್ 16 ಕಾಂಗ್ರೇಸ್
ವಾರ್ಡ್ 17 ಪಕ್ಷೇತರ
ವಾರ್ಡ್ 18 ಕಾಂಗ್ರೇಸ್
ವಾರ್ಡ್ 19 ಬಿಜೆಪಿ
ವಾರ್ಡ್ 20 ಕಾಂಗ್ರೇಸ್
ವಾರ್ಡ್ 21 ಪಕ್ಷೇತರ
ವಾರ್ಡ್ 22 ಕಾಂಗ್ರೇಸ್
ವಾರ್ಡ್ 23 ಕಾಂಗ್ರೇಸ್
ವಾರ್ಡ್ 24  ಬಿಜೆಪಿ
ವಾರ್ಡ್ 25 ಬಿಜೆಪಿ
ವಾರ್ಡ್ 26 ಬಿಜೆಪಿ
ವಾರ್ಡ್ 27 ಕಾಂಗ್ರೇಸ್
ವಾರ್ಡ್ 28 ಬಿಜೆಪಿ
ವಾರ್ಡ್ 29 ಕಾಂಗ್ರೇಸ್
ವಾರ್ಡ್ 30 ಕಾಂಗ್ರೇಸ್
ವಾರ್ಡ್ 31 ಬಿಜೆಪಿ
ವಾರ್ಡ್ 32 ಬಿಜೆಪಿ
ವಾರ್ಡ್ 33 ಬಿಜೆಪಿ
ವಾರ್ಡ್ 34 ಬಿಜೆಪಿ
ವಾರ್ಡ್ 35 ಬಿಜೆಪಿ

ಬಿಜೆಪಿ ತೆಕ್ಕೆಗೆ ಗದಗ ಬೆಟಗೇರಿ ನಗರಸಭೆ

ಗದಗ ಬೆಟಗೇರಿ ನಗರಸಭೆಯು ಬಿಜೆಪಿ ಕೈವಶವಾಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ 15 ಸ್ಥಾನ, ಒಟ್ಟು 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನ ಪಕ್ಷೇತರರ ಪಾಲಾಗಿದೆ. ಗದಗ ಬೆಟಗೇರಿಯ 35 ವಾರ್ಡ್‌ಗಳಿಗೆ ಡಿ.27ರಂದು ಚುನಾವಣೆ ನಡೆದಿತ್ತು. 35ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಉಷಾ ದಾಸರ 217 ಮತಗಳಿಂದ ಜಯಗಳಿಸಿದರು.

ಕಿತ್ತೂರು ಪಟ್ಟಣ ಪಂಚಾಯಿತಿ ಫಲಿತಾಂಶ

ಕಿತ್ತೂರು ಪಟ್ಟಣ ಪಂಚಾಯಿತಿ: 4 ಪಕ್ಷೇತರ, 5 ಕಾಂಗ್ರೆಸ್, 9 ಬಿಜೆಪಿ ಗೆಲುವು, ಒಟ್ಟು 18 ಸ್ಥಾನಗಳು,

ಜಾಲಿ ಪಟ್ಟಣ ಪಂಚಾಯಿತಿ: ಪಕ್ಷೇತರರ ಮೇಲುಗೈ

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿಯ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಪೂರ್ಣಗೊಂಡಿದ್ದು, 20 ವಾರ್ಡ್‌ಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಹಾಗೂ 13ರಲ್ಲಿ ಪಕ್ಷೇತರ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಇದರಿಂದ ಈ ಬಾರಿ ಪಕ್ಷೇತರರೇ ಜಾಲಿ ಪಟ್ಟಣ ಪಂಚಾಯಿತಿ ಆಡಳಿತ ನಡೆಸುವುದು ಖಚಿತವಾಗಿದೆ.

ವಾರ್ಡ್ ನಂ.1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಮೊಗೇರ (315) ಪ್ರತಿಸ್ಫರ್ಧಿ ಪುರಂದರ ಮೊಗೇರ ಪಕ್ಷೇತರ(156), ವಾರ್ಡ್ ನಂ.2ರಲ್ಲಿ ಬಿಜೆಪಿ ಅಭ್ಯರ್ಥಿ ಪದ್ಮಾವತಿ ನಾಯ್ಕ(184) ಪ್ರತಿಸ್ಫರ್ಧಿ ಸಾವಿತ್ರಿ ನಾಯ್ಕ ಕಾಂಗ್ರೆಸ್ (180), ವಾರ್ಡ್ ನಂ.3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ನಾಯ್ಕ (511) ಪ್ರತಿಸ್ಫರ್ಧಿ ಬಾಲಚಂದ್ರ ನಾಯ್ಕ ಬಿಜೆಪಿ (373), ವಾರ್ಡ್ ನಂ..4ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಹಿನಾ ಶೇಖ್ (170) ಪ್ರತಿಸ್ಫರ್ಧಿ ರೇಣುಕಾ ನಾಯ್ಕ (160), ವಾರ್ಡ್ ನಂ. 6ರಲ್ಲಿ ಪಕ್ಷೇತರ ಅಭ್ಯರ್ಥಿ ಮಿಸ್ಬಾ ಹುಲ್ ಹಕ್ ಉಮರ್ (187) ಪ್ರತಿಸ್ಫರ್ಧಿ ಮೊಹಿದ್ದೀನ್ ಪಕ್ಷೇತರ (179), ವಾರ್ಡ್ ನಂ.8ರಲ್ಲಿ ಬಿಜೆಪಿ ಅಭ್ಯರ್ಥಿ ಲೀಲಾವತಿ ಗಣಪತಿ ಆಚಾರಿ (400) ಪ್ರತಿಸ್ಫರ್ಧಿ ಯೋಗರಾಜ್ ಜೈನ್ ಕಾಂಗ್ರೆಸ್ (95), ವಾರ್ಡ್ ನಂ 9ರಲ್ಲಿ ಬಿಜೆಪಿ ಅಭ್ಯರ್ಥಿ ದಯಾನಂದ ನಾಯ್ಕ (212) ಪ್ರತಿಸ್ಪರ್ಧಿ ಅಬ್ದುಲ್ ಅಜೀಜ್ ಕಾಂಗ್ರೆಸ್ (122), ವಾರ್ಡ್ ನಂ 10ರಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ ನಾಯ್ಕ (311) ಪ್ರತಿಸ್ಫರ್ಧಿ ರಾಮ ನಾಯ್ಕ, ಬಿಜೆಪಿ (225), ವಾರ್ಡ್ ನಂ 11ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ಗೊಂಡ (411) ಪ್ರತಿಸ್ಫರ್ಧಿ ಈಶ್ವರ ಗೊಂಡ, ಬಿಜೆಪಿ (262), ವಾರ್ಡ್ ನಂ.14ರಲ್ಲಿ ಪಕ್ಷೇತರ ಅಭ್ಯರ್ಥಿ ಮೋಮಿನ್ ಶೈನಾಜ್ ಶೇಖ್ (256) ಪ್ರತಿಸ್ಫರ್ಧಿ ನೇತ್ರಾ ನಾಯ್ಕ ಕಾಂಗ್ರೆಸ್ (114), ವಾರ್ಡ್ ನಂ.18ರಲ್ಲಿ ಪಕ್ಷೇತರ ಅಭ್ಯರ್ಥಿ ವಸೀಂ ಅಹ್ಮದ್ ಮನೆಗಾರ (209) ಪ್ರತಿಸ್ಫರ್ಧಿ ಕೆ.ಸುಲೆಮಾನ್ , ಪಕ್ಷೇತರ (28), ವಾರ್ಡ್ ನಂ.19ರಲ್ಲಿ ಪಕ್ಷೇತರ ಅಭ್ಯರ್ಥಿ ಮಹ್ಮದ್ ತೌಫಿಕ್ ಬ್ಯಾರಿ (333) ಪ್ರತಿಸ್ಫರ್ಧಿ ಅತಾವುಲ್ಲಾ ಹಿರೂರು ಪಕ್ಷೇತರ (270), ವಾರ್ಡ್ ನಂ.20ರಲ್ಲಿ ಪಕ್ಷೇತರ ಅಭ್ಯರ್ಥಿ ಇರ್ಫಾನ್ ಅಹ್ಮದ್ (419) ಪ್ರತಿಸ್ಫರ್ಧಿ ಇರ್ಫಾನ್ ಅಹ್ಮದ್ ಪಕ್ಷೇತರ (67) ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಜಿದ್ದಾಜಿದ್ದಿ ಕಣವಾಗಿದ್ದ ವಾರ್ಡ 9ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ, ವಾರ್ಡ್ ನಂ. 6ರಲ್ಲಿ ತಂಝೀಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 13 ವಾರ್ಡ್‌ಗಳಲ್ಲಿ 72 ಜನರು ನೋಟಾ ಮತದಾನ ಮಾಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತಯೇ ಶ್ರೀ ಗುರು ಸುಧೀಂದ್ರ ಕಾಲೇಜಿನ ಹೊರಗೆ ಇದ್ದ ಅಭ್ಯರ್ಥಿಗಳ ಬೆಂಬಲಿಗರು ಕುಣಿದು ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೊಬಸ್ತ್ ಹಾಕಲಾಗಿತ್ತು.

ಅಥಣಿ ಪುರಸಭೆ ಚುನಾವಣೆ: ಕಾಂಗ್ರೆಸ್ ಮೇಲುಗೈ

ಬೆಳಗಾವಿ: ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಕಾಂಗ್ರೆಸ್‌ನ 15, ಬಿಜೆಪಿಯ 9  ಹಾಗೂ ಮೂವರು ಪಕ್ಷೇತರರು  ಗೆಲುವು ಸಾಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ಚುನಾವಣೆ ಫಲಿತಾಂಶ

ಕಕ್ಕೇರಾ ಪುರಸಭೆ:
ಕಾಂಗ್ರೆಸ್:16
ಬಿಜೆಪಿ: 06
ಇತರೆ: 01
ಒಟ್ಟು: 23

ಗದಗ ಬೆಟಗೇರಿ ನಗರಸಭೆ ಚುನಾವಣೆ; 35ನೇ ವಾರ್ಡ್ ನಿರ್ಣಾಯಕ

17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ, 15 ಸ್ಥಾನ ಗೆದ್ದುಕೊಂಡ ಕಾಂಗ್ರೆಸ್, ಎರಡು ವಾರ್ಡ್‌ಗಳಲ್ಲಿ ಗೆಲುವಿನ ನಗು ತುಳುಕಿಸಿದ ಪಕ್ಷೇತರರು.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿಗೆ ಮುಖಭಂಗ

ನಾಯಕನಹಟ್ಟಿ : ಇಲ್ಲಿನ ಪಟ್ಟಣಪಂಚಾಯಿತಿ  ಚುನಾವಣೆಯಲ್ಲಿ ಕಾಂಗ್ರೆಸ್ 11ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿ ಪಟ್ಟಣ ಪಂಚಾಯಿತಿಯನ್ನು ಕೈ ವಶ ಮಾಡಿಕೊಂಡಿದೆ.

16 ವಾರ್ಡ್‌ಗಳ ಪಟ್ಟಣಪಂಚಾಯಿತಿಯಲ್ಲಿ ಕಾಂಗ್ರೆಸ್ 11, ಬಿಜೆಪಿ 02, ಪಕ್ಷೇತರ 03 ಸ್ಥಾನಗಳು ಗೆದ್ದಿವೆ.

ಹಿರೇಕೋಡಿ ಗ್ರಾಮ ಪಂಚಾಯಿತಿ ಉಪ ಚುನಾವಣೆ

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 7ರಿಂದ ಅನಿತಾ ಬನಗೆ ಜಯ ಗಳಿಸಿದ್ದಾರೆ. ಅವರ ಪತಿ ವಿಕ್ರಂ ಬನಗೆ ನಿಧನದಿಂದಾಗಿ ಈ ಸ್ಥಾನ ತೆರವಾಗಿತ್ತು.

ಅಂಡಗಿ: ಅಜ್ಜಿ ಸೋಲಿಸಿದ ಮೊಮ್ಮಗಳು

ಶಿರಸಿ: ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯ್ತಿಯ ಕಿರವತ್ತಿ ವಾರ್ಡಗೆ ನಡೆದ ಉಪಚುನಾವಣೆಯಲ್ಲಿ ಸಂಗೀತಾ ಗಣೇಶ ಚೆನ್ನಯ್ಯ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಶಿವಕ್ಕ ಚಂದ್ರಪ್ಪ ಚೆನ್ನಯ್ಯ ಅವರನ್ನು ಅವರು 76 ಮತಗಳಿಂದ ಪರಾಭವಗೊಳಿಸಿದರು. ಸೋತ ಶಿವಕ್ಕ ಸಂಗೀತಾ ಅವರಿಗೆ ಸಂಬಂಧದಲ್ಲಿ ಅಜ್ಜಿಯಾಗಿದ್ದಾರೆ.

ಚಲಾವಣೆಯಾಗಿದ್ದ 415 ಮತಗಳ ಪೈಕಿ ಸಂಗೀತಾ 241 ಮತಗಳನ್ನು ಪಡೆದರೆ, ಶಿವಕ್ಕ 165 ಮತಗಳನ್ನು ಪಡೆದಿದ್ದರು. 9 ಮತಗಳು ತಿರಸ್ಕೃತಗೊಂಡಿದ್ದವು.

ಕಾಪು ಪುರಸಭೆ: ಬಿಜೆಪಿಗೆ ಬಹುಮತ

ಉಡುಪಿ: ಕಾಪು ಪುರಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ –12 ಕ್ಷೇತ್ರಗಳಲ್ಲಿ, ಕಾಂಗ್ರೆಸ್ –7 ಕ್ಷೇತ್ರಗಳಲ್ಲಿ, ಎಸ್‌ಡಿಪಿಐ –3 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ದಾಂಡೇಲಿ ನಗರಸಭೆ 18ನೇ ವಾರ್ಡ್ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ದಾಂಡೇಲಿ ನಗರಸಭೆ 18ನೇ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಗಂಧಾ ಪ್ರಕಾಶ ಕಾಂಬಳೆ ಜಯ ಸಾಧಿಸಿದ್ದಾರೆ. ಸಮೀಪ ಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಪದ್ಮಾ ಅಶೋಕ ಭೋವಿ ಸೋಲು ಕಂಡರು.

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಪಕ್ಷಗಳ ಬಲಾಬಲ

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಪಕ್ಷಗಳ ಬಲಾಬಲ

ಒಟ್ಟು 18 ಸ್ಥಾನ

ಕಾಂಗ್ರೆಸ್  13
ಬಿಜೆಪಿ 4
ಇತರೆ 1

ಚಾಮರಾಜನಗರ ನಗರಸಭೆ ಉಪ ಚುನಾವಣೆ: ಎಸ್‌ಡಿಪಿಐ ಗೆಲುವು

ಚಾಮರಾಜನಗರ: ಇಲ್ಲಿನ ನಗರಸಭೆಯ 6ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಗೆಲುವು ಸಾಧಿಸಿದೆ. ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು.

ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಎಸ್ ಡಿಪಿಐ ನಿಂದ ಅಫ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮೊಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು.

1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು. ಅಫ್ಸರ್ ಪಾಷಾ ಅವರು 651 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.  ಕಾಂಗ್ರೆಸ್ ನ ಸೈಯದ್ ಅತೀಕ್ ಅಹಮದ್ ಅವರು 399, ಜೆಡಿಎಸ್ ನ ಮೊಹಮ್ಮದ್ ಜಾವೀದ್ ಅವರು 82 ಹಾಗೂ ಬಿಜೆಪಿಯ ಮಹೇಶ್ ಅವರು 73 ಮತಗಳನ್ನು ಗಳಿಸಿದ್ದಾರೆ. ನೋಟಾಗೆ‌ ನಾಲ್ಕು ಮತಗಳು ಬಿದ್ದಿವೆ.

ಹೊಸಪೇಟೆ ನಗರಸಭೆ ಫಲಿತಾಂಶ ಅತಂತ್ರ; ಸಚಿವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನೆಡೆ

ಕಾಂಗ್ರೆಸ್, ಪಕ್ಷೇತರರಿಗೆ ಹೆಚ್ಚಿನ ಸ್ಥಾನ

ಹೊಸಪೇಟೆ (ವಿಜಯನಗರ): ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ‌ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ. ಒಟ್ಟು 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಹತ್ತು ಕ್ಷೇತ್ರಗಳಲ್ಲಿ ಗೆದ್ದರೆ, ಆಮ್ ಆದ್ಮಿ ಪಕ್ಷ ಒಂದು ಸ್ಥಾನದಲ್ಲಿ ಗೆಲ್ಲುವುದರ ಮೂಲಕ ಮೊದಲ ಚುನಾವಣೆಯಲ್ಲೇ ಖಾತೆ ತೆರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಸಲ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಹಲವು ಸಲ ಆನಂದ್ ಸಿಂಗ್ ಹೇಳಿಕೆ ನೀಡಿದ್ದರು.

ಹೊಸಪೇಟೆ ನಗರಸಭೆಯಲ್ಲಿ ಪಕ್ಷಗಳ ಬಲಾಬಲ

ಒಟ್ಟು ಸ್ಥಾನ -35
ಕಾಂಗ್ರೆಸ್ -12
ಬಿಜೆಪಿ- 10
ಎಎಪಿ-01
ಪಕ್ಷೇತರರು-12

ಯಾದಗಿರಿ ಜಿಲ್ಲೆಯ ಕೆಂಭಾವಿ ಪುರಸಭೆ ಚುನಾವಣೆ ಫಲಿತಾಂಶ

ಕೆಂಭಾವಿ ಪುರಸಭೆ:
ಬಿಜೆಪಿ: 13
ಕಾಂಗ್ರೆಸ್:08
ಇತರೆ: 01
ಅವಿರೋಧ ಆಯ್ಕೆ:01
ಒಟ್ಟು: 23

ಶಿರಾ ನಗರಸಭೆ ಅತಂತ್ರ

ಶಿರಾ: ಶಿರಾ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುತ ಸಿಕ್ಕಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರ ಹಿಡಿಯಲು ಕಸರತ್ತು ಆರಂಭವಾಗಿದೆ. ಪಕ್ಷೇತರರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ.

ಒಟ್ಟು 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅತಿ ಹೆಚ್ಚು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7, ಬಿಜೆಪಿ 4 ಹಾಗೂ ಪಕ್ಷೇತರರು 8 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ.

ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಿದ್ದು, ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ. ಪಕ್ಷೇತರರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದರ ಮೇಲೆ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ರನ್ನ ಬೆಳಗಲಿ ಪ.ಪಂ: ಅತಂತ್ರ ಸ್ಥಿತಿ, ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

ಬಾಗಲಕೋಟೆ: ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಪಟ್ಟಣ ಪಂಚಾಯ್ತಿಯ 18 ಸ್ಥಾನಗಳಲ್ಲಿ ಕಾಂಗ್ರೆಸ್ 8, ಬಿಜೆಪಿ 5, ಪಕ್ಷೇತರರು 2 ಹಾಗೂ ರೈತ ಸಂಘ ಬೆಂಬಲಿತ ಮೂವರು ಆಯ್ಕೆಯಾಗಿದ್ದಾರೆ. ಸ್ಪಷ್ಟ ಬಹುಮತ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಎರಡು ಸ್ಥಾನಗಳ ಅಗತ್ಯವಿದೆ. ಬಿಜೆಪಿಗೆ ಐದು ಸ್ಥಾನಗಳ ಅಗತ್ಯವಿದೆ. ಪಕ್ಷೇತರರು ಹಾಗೂ ರೈತ ಸಂಘ ಬೆಂಬಲಿತರು ನಿರ್ಣಾಯಕರಾಗಿದ್ದಾರೆ.

ಹಾರೂಗೇರಿ ಪುರಸಭೆ ಚುನಾವಣೆ ಫಲಿತಾಂಶ

ಹಾರೂಗೇರಿ ಪುರಸಭೆ ಚುನಾವಣೆ ಫಲಿತಾಂಶ

ಒಟ್ಟು 23: ಬಿಜೆಪಿ-15, ಕಾಂಗ್ರೇಸ್–7, ಪಕ್ಷೇತರ–1

ಕೊಪ್ಪಳ ಜಿಲ್ಲೆಯ ಪಟ್ಟಣ ಪಂಚಾಯಿತಿ ಫಲಿತಾಂಶ

ಕನಕಗಿರಿ: ಕಾಂಗ್ರೆಸ್ 12, ಬಿಜೆಪಿ 5,

ಭಾಗ್ಯನಗರ: ಬಿಜೆಪಿ 9, ಕಾಂಗ್ರೆಸ್ 8, ಪಕ್ಷೇತರ 2

ಕುಕನೂರ: ಕಾಂಗ್ರೆಸ್ 10, ಬಿಜೆಪಿ 9

ತಾವರಗೇರಾ: ಕಾಂಗ್ರೆಸ್ 8, ಬಿಜೆಪಿ 5, ಪಕ್ಷೇತರ 3

ಕಾರಟಗಿ ಪುರಸಭೆ: 11 ಕಾಂಗ್ರೆಸ್,  11. ಬಿಜೆಪಿ, ಪಕ್ಷೇತರ 1

ಬಿಡದಿ ಪುರಸಭೆಯಲ್ಲಿ ಜೆಡಿಎಸ್‌ಗೆ ಅಧಿಕಾರ

ರಾಮನಗರ: ಬಿಡದಿ ಪುರಸಭೆಯಲ್ಲಿ‌‌‌ ಮತ್ತೆ ಅಧಿಕಾರ ಹಿಡಿಯುವಲ್ಲಿ‌ ಜೆಡಿಎಸ್ ಯಶಸ್ವಿ ಆಗಿದೆ. ಒಟ್ಟು 23 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ.‌ 9 ವಾರ್ಡುಗಳಲ್ಲಿ‌ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಹೊಸಪೇಟೆ: ಮುಂದುವರಿದ ಮತ ಎಣಿಕೆ

* 27ನೇ ವಾರ್ಡ್‌ನಿಂದ ಬಿಜೆಪಿಯ ಶಕುಂತಲಮ್ಮ ಗೆಲುವು
* 30ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ವಿ.ಲತಾ ಗೆಲುವು
* 3ನೇ ವಾರ್ಡ್‌ನಿಂದ ಕಾಂಗ್ರೆಸ್ ನ ನಾರಾಯಣಪ್ಪ ಗೆಲುವು
* 33ನೇ ವಾರ್ಡ್‌ನಿಂದ ಬಿಜೆಪಿಯ ಪರಗಂಟಿ ಲಕ್ಷ್ಮಿ ಗೆಲುವು
* 12ನೇ ವಾರ್ಡ್‌ನಿಂದ ಕಾಂಗ್ರೆಸ್ ನ ಅಸ್ಲಂ ಮಾಳಗಿ ಗೆಲುವು
* ಒಂಬತ್ತನೇ ವಾರ್ಡ್‌ನಿಂದ ಕಾಂಗ್ರೆಸ್‌ನ ಮುನ್ನಿ ಕಾಸಿಂ ಗೆಲುವು
* 24ನೇ ವಾರ್ಡ್‌ನಿಂದ  ಕಾಂಗ್ರೆಸ್ ನ ರಾಘವೇಂದ್ರ ಗೆಲುವು
* ನಾಲ್ಕನೇ ವಾರ್ಡ್ ನಲ್ಲಿ ಬಿಜೆಪಿಯ ವಿದ್ಯಾ ಗೆಲುವು.

ಚಿಕ್ಕಮಗಳೂರು: 16 ವಾರ್ಡ್‌ಗಳ ಫಲಿತಾಂಶ ಪ್ರಕಟ

16 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 6, ಕಾಂಗ್ರೆಸ್ 6, ಪಕ್ಷೇತರ 2, ಜೆಡಿಎಸ್, ಎಸ್ ಡಿಪಿಐ  ತಲಾ ಒಂದು ಸ್ಥಾನ ಪಡೆದಿವೆ.

* 10ನೇ ವಾರ್ಡ್ ನಲ್ಲಿ ಬಿಜೆಪಿಯ ರೂಪಾಕುಮಾರ್ ಗೆಲುವು.
* 3ನೇ ವಾರ್ಡ್ ನಲ್ಲಿ ಬಿಜೆಪಿಯ ಅರುಣ್ ಗೆಲುವು.
* 18 ನೇ ವಾರ್ಡ್ ನಲ್ಲಿ ಬಿಜೆಪಿಯ ಮಣಿಕಂಠ ಗೆಲುವು.
* 25ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಲಕ್ಷ್ಮಣ ಗೆಲುವು.
* 19ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಶಾದಬ್ ಗೆಲುವು ಸಾಧಿಸಿದ್ದಾರೆ.
* 11ನೇ ವಾರ್ಡ್‌ನಲ್ಲಿ ಬಿಜೆಪಿ ಉಮಾದೇವಿ ಗೆಲುವು
* 26ನೇ ವಾರ್ಡ್‌ನಲ್ಲಿ ಬಿಜೆಪಿಯ ವರಸಿದ್ಧಿ ವೇಣುಗೋಪಾಲ್ ಗೆಲುವು

ಯಕ್ಸಂಬಾ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ತೆಕ್ಕೆಗೆ

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣ ಪಂಚಾಯ್ತಿ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಬಂದಿದೆ.

ಒಟ್ಟು 17 ಸ್ಥಾನಗಳಲ್ಲಿ 16ರಲ್ಲಿ ಕಾಂಗ್ರೆಸ್ ಗೆದ್ದಿದ್ದೆ. 1ರಲ್ಲಿ ಮಾತ್ರ ಬಿಜೆಪಿ ಗೆಲುವು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಯಕ್ಸಂಬಾ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಸ್ವಗ್ರಾಮ.‌ ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಮತ್ತು ಮುಖಂಡ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಪ.ಪಂ. ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಮಲೇಬೆನ್ನೂರು ಪುರಸಭೆ ಕಾಂಗ್ರೆಸ್‌ ವಶಕ್ಕೆ

ಮಲೇಬೆನ್ನೂರು (ದಾವಣಗೆರೆ ಜಿಲ್ಲೆ): ಮಲೇಬೆನ್ನೂರು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಿದೆ. ಕಳೆದ ಬಾರಿ ಅತಂತ್ರ ಫಲಿತಾಂಶ ಹೊರಬಂದಿದ್ದರಿಂದ ಬಿಜೆಪಿ–ಜೆಡಿಎಸ್‌ ಮೈತ್ರಿಯೊಂದಿಗೆ ಅಧಿಕಾರ ನಡೆಸಿತ್ತು.

ಒಟ್ಟು 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 12 ಅಭ್ಯರ್ಥಿಗಳು (ಇಬ್ಬರು ಅವಿರೋಧ ಸೇರಿ), ಬಿಜೆಪಿಯ 7, ಜೆಡಿಎಸ್‌ನ 3 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ನ 8, ಬಿಜೆಪಿಯ 7, ಜೆಡಿಎಸ್‌ನ 5 ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಲ್ಕು ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಪುರಸಭೆಯ ಗದ್ದುಗೆಯನ್ನು ಏರಲಿದೆ. ಬಿಜೆಪಿ ಕಳೆದ ಬಾರಿಯಷ್ಟೇ  ಸ್ಥಾನಗಳನ್ನು ಪಡೆದಿದೆ. ಜೆಡಿಎಸ್‌ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಮೂವರು ಪಕ್ಷೇತರರ ಬದಲು ಈ ಬಾರಿ ಕೇವಲ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪುರಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು.

ಹಗರಿಬೊಮ್ಮನಹಳ್ಳಿ ಪುರಸಭೆ, ಹಂಪಾಪಟ್ಟಣ ಗ್ರಾಮ ಪಂಚಾಯ್ತಿ ಫಲಿತಾಂಶ

ಹಗರಿಬೊಮ್ಮನಹಳ್ಳಿ ಪುರಸಭೆ, ಹಂಪಾಪಟ್ಟಣ ಗ್ರಾಮ ಪಂಚಾಯ್ತಿ  ಫಲಿತಾಂಶ

* 9ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ ಬ್ಯಾಡಗಿ ಜಯ
* 1 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಸರಸ್ವತಿ ಹನುಮಂತಪ್ಪ ಜಯ
* 10 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಡಿ.ಎಂ.ಅಜೀಜುಲ್ಲಾ ಗೆಲುವು
* 17ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಖಾಜಾಬನ್ನಿ ಅಲ್ಲಾಭಕ್ಷಿ
* 2ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನೆಲ್ಲು ಇಸ್ಮಾಯಿಲ್ ಗೆಲುವು
* 11ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಈತಣ್ಣ ಗೆಲುವು
* 16ನೇ ವಾರ್ಡ್ ಬಿಜೆಪಿಯ ಕಮಲಾ ಗೆಲುವು
* 3ನೇ ವಾರ್ಡ್‌ನ ಎಚ್.ಎಂ.ಚನ್ನಮ್ಮ ಗೆಲುವು

ಕುಕನೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ

ಕೊಪ್ಪಳ: ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳಲ್ಲಿ ಕಾಂಗ್ರೆಸ್ 10, ಬಿಜೆಪಿ  9 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರ ಸ್ವಕ್ಷೇತ್ರದಲ್ಲಿಯೇ ಹಿನ್ನಡೆ ಆಗಿರುವುದು ಬಿಜೆಪಿಗೆ ತೀವ್ರ ಮುಜಗುರ ತಂದಿದೆ.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಕೊನೆಯ ಕ್ಷಣದಲ್ಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಇದು ಸಚಿವ ಹಾಲಪ್ಪ ಆಚಾರಗೆ ಎಚ್ಚರಿಕೆ ಗಂಟೆಯಾಗಿದೆ.

ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ 11 ಪಕ್ಷೇತರ ಅಭ್ಯರ್ಥಿಗಳಿಗೆ ಜಯ

ಬೆಳಗಾವಿ: ಚನ್ನಮ್ಮ‌ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ 11  ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಮೂವರು ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಚಿಕ್ಕಮಗಳೂರು: 10 ವಾರ್ಡ್‌ಗಳ ಫಲಿತಾಂಶ ಪ್ರಕಟ

ಚಿಕ್ಕಮಗಳೂರು ನಗರಸಭೆಯ 10 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. 5 ಕಾಂಗ್ರೆಸ್, ಬಿಜೆಪಿ 2 , ಎಸ್‌ಡಿಪಿಐ , ಜೆಡಿಎಸ್, ಪಕ್ಷೇತರ ತಲಾ ಒಂದು ಸ್ಥಾನದಲ್ಲಿ ಗೆದ್ದಿವೆ.

ಬಾಗಲಕೋಟೆ : ಕಮತಗಿ ಪ.ಪಂ ಕಾಂಗ್ರೆಸ್ ಪಾಲು, ಅಮೀನಗಡ ಪ.ಪಂ ಅತಂತ್ರ

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ವಶವಾಗಿದೆ. ಅಮೀನಗಡ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ.

ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿ: ಮೊದಲ ಸುತ್ತು ಮುಕ್ತಾಯ

ಬೆಳಗಾವಿ: ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿಯಲ್ಲಿ ಮೊದಲ ಸುತ್ತಿನ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ತಲಾ ಇಬ್ಬರು  ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನೂ 12 ಸ್ಥಾನಗಳ ಫಲಿತಾಂಶ ಬರಬೇಕಿದೆ.

ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ: ಮತ ಏಣಿಕೆ ಆರಂಭ

ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ ಡಿ.27 ರಂದು ಮತದಾನ ನಡೆದಿದ್ದು, ಇಂದು ಮತ ಏಣಿಕೆ ನಡೆಯುತ್ತಿದೆ. ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಮತ ಏಣಿಕೆ ನಡೆಯುತ್ತಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಮಾಡುತ್ತಿದ್ದಾರೆ. ಕೆಂಭಾವಿ ಪುರಸಭೆಯ ವಾರ್ಡ್ ಸಂಖ್ಯೆ 5 ರಲ್ಲಿ ರಮ್ಯಾ ರಾಘವೇಂದ್ರ ದೇಶಪಾಂಡೆ ಅವರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಹೊಸಪೇಟೆ ನಗರಸಭೆ ಫಲಿತಾಂಶ

* ಹೊಸಪೇಟೆ ನಗರಸಭೆ 28ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ‌ಎಚ್.ಕೆ. ಮಂಜುನಾಥ ಗೆಲುವಿನ ನಗೆ
* 31ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ತಾರಿಹಳ್ಳಿ ಜಂಬುನಾಥ ಜಯಭೇರಿ
* 17ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ಎಲ್. ಸಂತೋಷ ಗೆಲುವು
* 26ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಗೌಸ್ ಗೆಲುವು
* 23ನೇ ವಾರ್ಡ್‌ನಲ್ಲಿ ಬಿಜೆಪಿ ಗಂಗಮ್ಮ ಜಯಶಾಲಿ
* ಐದನೇ ವಾರ್ಡ್‌ನಲ್ಲಿ ಬಿಜೆಪಿ ರೂಪೇಶ್ ಕುಮಾರ್ ಗೆಲುವು
* 29ನೇ ವಾರ್ಡಿನಲ್ಲಿ ಬಿಜೆಪಿಯ ರಮೇಶ್ ಗುಪ್ತಾ ಗೆಲುವು
* 20ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಖಾರದಪುಡಿ ಮಹೇಶ ಗೆಲುವು

ಚಿಕ್ಕಮಗಳೂರು ನಗರಸಭೆ: ಫಲಿತಾಂಶ ಇಲ್ಲಿದೆ

* ಎಂಟನೇ ವಾರ್ಡ್‌ನಲ್ಲಿ ಜೆಡಿಎಸ್ ನ  ಎ.ಸಿ. ಕುಮಾರ್ ಗೆಲುವು ಸಾಧಿಸಿದ್ದಾರೆ
* ಒಂದನೇ ವಾರ್ಡ್‌ನಲ್ಲಿ ಬಿಜೆಪಿಯ ಕವಿತಾ ಶೇಖರ್ ಗೆಲುವು ಸಾಧಿಸಿದ್ದಾರೆ.
* 29ನೇ ವಾರ್ಡ್‌ನಲ್ಲಿ ಬಿಜೆಪಿಯ ಅಮೃತೇಶ್ ಗೆಲುವು
* 16ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಲಂದರ್ ಗೆಲುವು.
* 9ನೇ ವಾರ್ಡ್‌ನಲ್ಲಿ ಕಾಂಗ್ರೆಸ್  ಪರಮೇಶ್ ರಾಜ್ ಅರಸ್ ಗೆಲುವು.
* 30ನೇ ವಾರ್ಡ್‌ನಲ್ಲಿ ಕಾಂಗ್ರಸ್ ನ ಗೌಸಿಯಾ ಗೆಲುವು.
* ಎರಡನೇ  ವಾರ್ಡ್‌ನಲ್ಲಿ ಬಿಜೆಪಿಯ ಯಶೋಧಾ ರಾಮಣ್ಣ ಗೆಲುವು
* 23ನೇ ವಾರ್ಡ್‌ನಲ್ಲಿ ಎಸ್‌ಡಿಪಿಐನ ಮಂಜುಳಾ ಶ್ರೀನಿವಾಸ್ ಗೆಲುವು
* ಎರಡನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ  ಇಂದಿರಾ ಶಂಕರ್ ಗೆಲುವು
* 17ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಮುನೀರ್ ಅಹಮದ್ ಗೆಲುವು
* 24ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಗುರುಮಲ್ಲಪ್ಪ ಗೆಲುವು

ಹೊಸಪೇಟೆ ನಗರಸಭೆಯಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ

* ಹೊಸಪೇಟೆ ನಗರಸಭೆಯಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ. 22ನೇ ವಾರ್ಡಿನಲ್ಲಿ‌ಎಎಪಿಯ ಶೇಕ್ಷಾವಲಿ ಗೆಲುವು

* 19ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆ. ಶಾಂತಾ ಗೆಲುವು

ಜಾಲಿ ಪ.ಪಂ: ಮತ ಎಣಿಕೆ ಆರಂಭ

ಕಾರವಾರ: ಜಾಲಿ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆಯುತ್ತಿದೆ. ಒಟ್ಟು 20 ವಾರ್ಡ್‌ಗಳ ಪೈಕಿ ಏಳು ವಾರ್ಡ್‌ಗಳಿಗೆ ಅವಿರೋಧ ಆಯ್ಕೆಯಾಗಿದೆ. 13 ವಾರ್ಡ್‌ಗಳಿಗೆ 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ಆರಂಭ

ಬೆಳಗಾವಿ: ಜಿಲ್ಲೆಯ ವಿವಿಧ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಅಥಣಿ, ರಾಯಬಾಗ ತಾಲ್ಲೂಕಿನ ಹಾರೂಗೇರಿ,  ಮುಗಳಖೋಡ, ಸವದತ್ತಿ ತಾಲ್ಲೂಕಿನ ಮುನವಳ್ಳಿ ಹಾಗೂ ಕಾಗವಾಡ ತಾಲ್ಲೂಕಿನ ಉಗಾರ ಖುರ್ದ್ ಪುರಸಭೆಗಳು, ಎಂ‌‌.ಕೆ. ಹುಬ್ಬಳ್ಳಿ, ಕಂಕಣವಾಡಿ, ನಾಗನೂರ, ಯಕ್ಸಂಬಾ, ಚನ್ನಮ್ಮನ ಕಿತ್ತೂರು, ಅರಭಾವಿ,‌ ಐನಾಪುರ, ಶೇಡಬಾಳ, ಚಿಂಚಲಿ, ಬೋರಗಾಂವ ಹಾಗೂ ಕಲ್ಲೋಳಿ ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯುತ್ತಿದೆ.

ಒಟ್ಟು 301 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ. ಬಿಜೆಪಿಯ 268, ಕಾಂಗ್ರೆಸ್‌ನ 228, ಜೆಡಿಎಸ್‌ನ 37, ಬಿಎಸ್‌ಪಿಯಿಂದ ಮೂವರು, 345 ಪಕ್ಷೇತರರು ಸೇರಿದಂತೆ 902 ಅಭ್ಯರ್ಥಿಗಳ ಕಣದಲ್ಲಿದ್ದಾರೆ.

ಚಿಕ್ಕಮಗಳೂರು: ನಗರಸಭೆ ಚುನಾವಣೆ ಫಲಿತಾಂಶ

ಚಿಕ್ಕಮಗಳೂರು:  22ನೇ ವಾರ್ಡ್ ನಲ್ಲಿ ಕಾಂಗ್ರೆಸ್‌ನ ಸಲ್ಮಾ 940 ಮತ ಪಡೆದು ಗೆಲುವಿನ ನಗೆ ಬೀರಿದ್ದಾರ. ಸಮೀಪದ ಸ್ಪರ್ಧಿ ಬೇಬಿ ಜಿ.ರಘು 476 ಮತ ಪಡೆದಿದ್ದಾರೆ.

* 15 ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಶೀಲಾದಿನೇಶ್ 449  ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಚಿಕ್ಕಮಗಳೂರು ನಗರಸಭೆ ಚುನಾವಣೆ: ಅಂಚೆ ಮತಗಳ ಎಣಿಕೆ

ನಗರಸಭೆ ಚುನಾವಣೆ ಮತ ಎಣಿಕೆ ಶುರುವಾಗಿದ್ದು, ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. ವಾರ್ಡ್ ನಂ 1 ರಲ್ಲಿ 30 ಅಂಚೆ ಮತಗಳ ಪೈಕಿ 23 ಕ್ರಮಬದ್ದಬಾಗಿವೆ, 7 ತಿರಸ್ಕೃತವಾಗಿವೆ.

ಹೊಸಪೇಟೆ ನಗರಸಭೆಯಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ

* ಹೊಸಪೇಟೆಯ ನಾಲ್ಕನೇ ವಾರ್ಡಿನಲ್ಲಿ ಬಿಜೆಪಿಯ ಸುಂಕಮ್ಮ ಅವರಿಗೆ ಗೆಲುವು.

* ಹತ್ತನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ರೋಹಿಣಿ ವೆಂಕಟೇಶ್‌ಗೆ ಗೆಲುವು

* 25ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸಣ್ಣ ದುರುಗಮ್ಮ ಅವರಿಗೆ ಜಯ

* 28ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಚ್.ಕೆ. ಮಂಜುನಾಥ ಅವರಿಗೆ ಜಯ

* ಏಳನೇ ವಾರ್ಡಿನಲ್ಲಿ ಕಾಂಗ್ರೆಸ್‌ನ ವಿ.ಕನಕಮ್ಮ ಗೆಲುವು

* ನಗರಸಭೆ ಒಂದನೇ ವಾರ್ಡ್: ಬಿಜೆಪಿಯ ಉಮಾ ಮಹೇಶ್ವರಿಗೆ ಜಯ

* 32ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಜಗದೀಶ ಅವರಿಗೆ ವಿಜಯಮಾಲೆ

* ಹೊಸಪೇಟೆ ನಗರಸಭೆಯಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ: 22ನೇ ವಾರ್ಡಿನಲ್ಲಿ‌ಎಎಪಿಯ ಶೇಕ್ಷಾವಲಿ ಗೆಲುವು

* 19ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆ. ಶಾಂತಾ ಗೆಲುವು

ಹುನಗುಂದ: ಭದ್ರತಾ ಕೊಠಡಿ ತೆರೆದು ಮತ ಎಣಿಕೆ ಆರಂಭ

ಅಮೀನಗಡ ಕಮತಗಿ ಪಟ್ಟಣ ಪಂಚಾಯ್ತಿಗಳ 31 ಜತೆಗೆ ಸೂಳೇಭಾವಿ ಗ್ರಾಮ ಪಂಚಾಯಿತಿಯ 1ಸ್ಥಾನಕ್ಕೆ ಚುನಾವಣೆ ನಡೆದಿದೆ. ಹುನಗುಂದ ನಗರದ ವಿದ್ಯಾನಗರದ ಸರ್ಕಾರಿ ಪ್ರೌಢಶಾಲೆಯ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯನ್ನು ತೆರೆಯಲಾಯಿತು.

ನಾಯಕನಹಟ್ಟಿ ಪ.ಪಂ.: ಮತ ಎಣಿಕೆ ಆರಂಭ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಚಳ್ಳಕೆರೆಯ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಭದ್ರತಾ ಕೊಠಡಿ ತೆರೆಯಲಾಯಿತು.

ಹೊಸಪೇಟೆಯಲ್ಲಿ ಮತ ಎಣಿಕೆ ಕೇಂದ್ರದ ಹೊರಗೆ ಸೇರಿರುವ ಕಾರ್ಯಕರ್ತರು

ಹೊಸಪೇಟೆಯಲ್ಲಿ ಮತ ಎಣಿಕೆ ಕೇಂದ್ರದ ಹೊರಗೆ ಸೇರಿರುವ ಕಾರ್ಯಕರ್ತರು

ಹೊಸಪೇಟೆ ನಗರಸಭೆಯ ಮತ ಎಣಿಕೆ ಆರಂಭ

ಹೊಸಪೇಟೆ (ವಿಜಯನಗರ): ನಗರಸಭೆ ಮತ ಎಣಿಕೆ‌ ಕಾರ್ಯ ನಗರದ‌ ಎಲ್ ಎಫ್‌ಎಸ್ ಶಾಲೆಯಲ್ಲಿ ಗುರುವಾರ ಆರಂಭವಾಗಿದೆ. ಸ್ಟ್ರಾಂಗ್ ರೂಂ‌ ತೆಗೆದು ಸೀಲ್ ಮಾಡಲಾಗಿದ್ದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತೆಗೆದು ಮತ ಎಣಿಕೆ ನಡೆಸಲಾಗುತ್ತಿದೆ.

ಫಲಿತಾಂಶ ತಿಳಿಯಲು ಆಯಾ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.