ADVERTISEMENT

ಬಸವರಾಜ ಸಾದರರ ಕೃತಿಗೆ ‘ಕಾವ್ಯಾನಂದ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:24 IST
Last Updated 25 ನವೆಂಬರ್ 2019, 19:24 IST
ಬಸವರಾಜ ಸಾದರ
ಬಸವರಾಜ ಸಾದರ   

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ ವತಿಯಿಂದ ನೀಡಲಾಗುವ ಈ ಸಾಲಿನ ಕಾವ್ಯಾನಂದ ಪುರಸ್ಕಾರವು ಬಸವರಾಜ ಸಾದರ ಅವರ ‘ವರ್ತಮಾನಕ್ಕೂ ವಚನ’ ಕೃತಿಗೆ ದೊರೆತಿದೆ.

ಡಾ.ಸಿದ್ಧಯ್ಯ ಪುರಾಣಿಕರ ಕಾವ್ಯನಾಮವಾಗಿರುವ ‘ಕಾವ್ಯಾನಂದ’ ಹೆಸರಿನಲ್ಲಿ ನೀಡಲಾಗುವ ಪುರಸ್ಕಾರ ₹50 ಸಾವಿರನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಿಸೆಂಬರ್‌ 27ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ADVERTISEMENT

ಅತಿಥಿಗಳಾಗಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.