ADVERTISEMENT

ಕ್ಷೇತ್ರ ದರ್ಶನ-ಕೊಪ್ಪಳ ಲೋಕಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 17:19 IST
Last Updated 30 ಏಪ್ರಿಲ್ 2019, 17:19 IST
ಕೊಪ್ಪಳ ಲೋಕಸಭಾ ನಕ್ಷೆ
ಕೊಪ್ಪಳ ಲೋಕಸಭಾ ನಕ್ಷೆ   

ಕೊಪ್ಪಳ ಲೋಕಸಭಾ ಕ್ಷೇತ್ರ ಅತ್ಯಂತ ವಿಶಿಷ್ಟವಾದದು. 1952 ಸ್ವತಂತ್ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿ ಸ್ವಾಮಿ ಅಳವಂಡಿ ಅವರನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಅಲೆಗೆ ವಿರುದ್ಧವಾಗಿ ಮತ ಚಲಾಯಿಸಿ ಪ್ರಜ್ಞಾವಂತಿಕೆ ಮೆರೆದ ಕ್ಷೇತ್ರ.

2008ರಲ್ಲಿ ಮತಕ್ಷೇತ್ರ ಮರುವಿಂಗಡಣೆಯಲ್ಲಿ ಹೊಸಪೇಟೆ ಮತ್ತು ಮುಂಡರಗಿಯನ್ನು ಕೈಬಿಟ್ಟು ಸಿರಗುಪ್ಪ, ಮಸ್ಕಿ, ಸೇರ್ಪಡೆಗೊಳಿಸಲಾಯಿತು. ಆರಂಭದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮಧ್ಯೆ ಇದ್ದ ಸ್ಪರ್ಧೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಇದ್ದು, ಜೆಡಿಎಸ್‌ಗೆ ನೆಲೆ ಇಲ್ಲ.

ಸಂಸದ ಬಿಜೆಪಿಯ ಸಂಗಣ್ಣ ಕರಡಿ ಮತ್ತೆ ಸ್ಪರ್ಧಿಸುವ ತಯಾರಿಯಲ್ಲಿದ್ದು, ಕ್ಷೇತ್ರದಲ್ಲಿ ವಿರೋಧ ಇಲ್ಲದಿದ್ದರೂ ಅಭ್ಯರ್ಥಿ ಬದಲಾವಣೆಗೆ ವರಿಷ್ಠರು ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಆಕಾಂಕ್ಷಿಗಳು

ಬಿಜೆಪಿ- ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ್, ವಿರುಪಾಕ್ಷಪ್ಪ ಸಿಂಗನಾಳ

ಕಾಂಗ್ರೆಸ್- ಬಸವರಾಜ ರಾಯರಡ್ಡಿ, ರಾಜಶೇಖರ ಹಿಟ್ನಾಳ, ಕೆ.ವಿರುಪಾಕ್ಷಪ್ಪ, ಶಿವರಾಮನಗೌಡ, ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ

ಜೆಡಿಎಸ್- ಹುರಿಯಾಳುಗಳು ಇಲ್ಲ

ಮತದಾರರ ಸಂಖ್ಯೆ- 15,02,285 (2014ರ ಚುನಾವಣೆಯಲ್ಲಿ)

ವಿಧಾನಸಭಾ ಕ್ಷೇತ್ರವಾರು ಬಲಾಬಲ

ಕೊಪ್ಪಳ ಲೋಕಸಭಾ ಕ್ಷೇತ್ರದ ವಿಧಾನಸಭಾ ಮತಕ್ಷೇತ್ರಗಳು- 8

ಕೊಪ್ಪಳ, ಕನಕಗಿರಿ, ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಸಿಂಧನೂರ, ಶಿರಗುಪ್ಪ, ಮಸ್ಕಿ

ಬಿಜೆಪಿ(4): ಕನಕಗಿರಿ, ಗಂಗಾವತಿ, ಶಿರಗುಪ್ಪ, ಯಲಬುರ್ಗಾ

ಕಾಂಗ್ರೆಸ್ (3):ಕೊಪ್ಪಳ, ಕುಷ್ಟಗಿ, ಮಸ್ಕಿ

ಜೆಡಿಎಸ್ (1): ಸಿಂಧನೂರ

2009 ರ ವಿಜೇತರು

ಶಿವರಾಮನಗೌಡ 2,91,693--ವಿಜೇತ

ಬಸವರಾಜ ರಾಯರಡ್ಡಿ 2,09,904

ಇಕ್ಬಾಲ್ ಅನ್ಸಾರಿ 1,80,380

2014

ವಿಜೇತರು- ಸಂಗಣ್ಣ ಕರಡಿ, ಗೆಲುವಿನ ಅಂತರ- ಶೇ 48.3 ಪಡೆದ ಮತ 4,86,383, ಗೆಲುವಿನ ಅಂತರ 32,414

ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ.ಬಸವರಾಜ ಹಿಟ್ನಾಳ ಸೋಲು ಶೇ 45.1

ಜೆಡಿಎಸ್ಅಭ್ಯರ್ಥಿ ಕಣದಲ್ಲಿ ಇರಲಿಲ್ಲ

ಒಟ್ಟು ಮತದಾರರು 17,16,760 (2019ರ ಚುನಾವಣೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.