ADVERTISEMENT

₹1 ಲಕ್ಷ ಪರಿಹಾರ ನೀಡಿ: ಕೆಪಿಎಸ್‌ಸಿಗೆ ಮಾಹಿತಿ ಆಯೋಗ

ಅಭ್ಯರ್ಥಿಯ ಉತ್ತರ ಪತ್ರಿಕೆ ಪ್ರತಿ ನೀಡದ ಕೆಪಿಎಸ್‌ಸಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:31 IST
Last Updated 6 ಅಕ್ಟೋಬರ್ 2020, 19:31 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: 2015ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ‌ ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯದೃಢೀಕೃತ ಪ್ರತಿ ನೀಡದ ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಮಾಹಿತಿ ಅಧಿಕಾರಿಗೆ ₹25 ಸಾವಿರ ದಂಡ ವಿಧಿಸಿರುವ ಕರ್ನಾಟಕ ಮಾಹಿತಿ ಆಯೋಗ, ಅರ್ಜಿದಾರರಿಗೆ ₹1 ಲಕ್ಷ ಪರಿಹಾರ ನೀಡಲು ಆದೇಶಿಸಿದೆ.

ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದಬಿ.ಕೆ.ಸುಧನ್ವ ಬಂಡೋಲ್ಕರ್ ಎಂಬವರು2020ರ ಜನವರಿ 14ರಂದು ಅರ್ಜಿ ಸಲ್ಲಿಸಿ ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪತ್ರಿಕೆ ನೀಡಲು ಕೆಪಿಎಸ್‌ಸಿ ನಿರಾಕರಿಸಿದ ಕಾರಣ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಕೆ.ಪಿ. ಮಂಜುನಾಥ್, ಕೆಪಿಎಸ್‌ಸಿ ಮಾಹಿತಿ ಅಧಿಕಾರಿ ಶಶಿಕಲಾ ಅವರಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದರು. ಮಾಹಿತಿ ನೀಡದಿರುವ ಕಾರಣಕ್ಕೆ ₹25 ಸಾವಿರ ದಂಡ ವಿಧಿಸಬಾರದೇಕೆ ಎಂದು ಎಚ್ಚರಿಸಿದ್ದರು.

ADVERTISEMENT

ನಂತರ ವಿಚಾರಣೆಗೂ ಹಾಜರಾಗದೆ ನೋಟಿಸ್‌ಗೆ ವಿವರಣೆಯನ್ನೂ ಸಲ್ಲಿಸದ ಶಶಿಕಲಾ ಅವರಿಗೆ
₹ 25 ಸಾವಿರ ದಂಡ ವಿಧಿಸಲಾಗಿದೆ. ಈ ಮೊತ್ತವನ್ನು ಅವರ ವೇತನದಲ್ಲಿ ತಿಂಗಳಿಗೆ ₹5 ಸಾವಿರದಂತೆ 5 ತಿಂಗಳು ಕಡಿತ ಮಾಡಿಕೊಳ್ಳುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಕೆ.ಪಿ.ಮಂಜುನಾಥ್ ಆದೇಶ ನೀಡಿದ್ದಾರೆ.

‘ಉತ್ತರ ಪತ್ರಿಕೆ ನೀಡದ ಕಾರಣ ಅರ್ಜಿದಾರರಿಗೆ ಆಗಿರುವ ನಷ್ಟಕ್ಕೆ ₹1 ಲಕ್ಷ ಪರಿಹಾರವನ್ನು ಕೆಪಿಎಸ್‌ಸಿ ಪಾವತಿಸಬೇಕು.ವೇತನ ಕಡಿತ ಮತ್ತು ಪರಿಹಾರ ಪಾವತಿ ಮಾಡಿರುವ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.