ADVERTISEMENT

ಲೋಕಸಭೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ಗುರಿ: ಸಿಎಂ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2018, 8:19 IST
Last Updated 6 ನವೆಂಬರ್ 2018, 8:19 IST
   

ಬೆಂಗಳೂರು:ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು ಅನ್ನೋದು ನಮ್ಮ ಗುರಿ. ಈ ನಿಟ್ಟಿನಲ್ಲಿ ಜನರ ವಿಶ್ವಾಸಗಳಿಸಲು ಉತ್ತಮ ಕಾರ್ಯಕ್ರಮಗಳ ಮೂಲಕ ಜನರ ಹತ್ತಿರ ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಮದು ಕುಮಾರಸ್ವಾಮಿ ತಿಳಿಸಿದರು.

ಚುನಾವಣೆ ಫಲಿತಾಂಶದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಚುನಾವಣೆಯಲ್ಲಿ ಸೋಲು–ಗೆಲುವು ಸಹಜ. ಹೆಚ್ಚು ಗೆದ್ದಿದ್ದೇವೆ ಅಂತ ತಲೆತಿರುಗಿ ಹೋಗಲ್ಲ, ನಮ್ಮ ಜವಾಬ್ದಾರಿಯನ್ನು ಇನ್ನೂ ಸಮಪರ್ಕವಾಗಿ ನಿರ್ವಹಿಸಲು ಸಂದೇಶ ಕೊಟ್ಟಿದ್ದಾರೆ.

ಸಮಸ್ತ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವುದು ನಮ್ಮ ಕನಸು. ನಾಡಿನ ಜನರಿಗೆ ಶುಭಾಶಯ ಸಲ್ಲಿಸಿ, ದೇವರಿಗೆ ನನ್ನ ಪ್ರಾರ್ಥನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ನಡೆದ ಮೂರು ಲೋಕಸಭೆ, ಎರಡು ವಿಧಾನಸಭೆ ಉಪಚುನಾವಣೆಯ ಫಲಿತಾಂಶಗಳು ಅಂತಿಮವಾಗಿ ಘೋಷಣೆಯಾಗಿವೆ. ಮೂರು ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್, ಮಂಡ್ಯದಲ್ಲಿ ಜೆಡಿಎಸ್‌ ಗೆದ್ದಿದೆ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

ಎರಡೂ ಕ್ಷೇತ್ರಗಳಲ್ಲಿ ದಾಖಲೆಯ ಅಂತರದ ಗೆಲುವು ಸಾಧಿಸಿದ್ದೇವೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜೆಡಿಎಸ್‌ಗೆ ಬೆಂಬಲ ನೀಡಿದರು. ಕೊನೆಯ ಹಂತದಲ್ಲಿ ಸಿದ್ಧತೆ ಇಲ್ಲದೆ ಜೆಡಿಎಸ್‌ನ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಶಿವಮೊಗ್ಗ ಮತದಾರರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ. ಅಲ್ಲಿ ನಮಗೆ ನೈತಿಕ ಜಯ ದೊರೆತಿದೆ.

ನಮ್ಮ ಅಭ್ಯರ್ಥಿ ವಿದೇಶದಲ್ಲಿದ್ರು. ಅವರನ್ನು ತರಾತುರಿಯಲ್ಲಿ ವಾಪಸ್ ಬರಲು ಹೇಳಿ ಅವರನ್ನು ನಾಯಕರ ಸೂಚನೆ ಮೇರೆಗೆ ಮಧು ಬಂಗಾರಪ್ಪ ಅಭ್ಯರ್ಥಿಯಾದರು. ಸೋತ ಅಂತರ ಗಮನಿಸಿದಾಗ, ನಾವು ಮೊದಲೇ ಸಿದ್ಧತೆ ಮಾಡಿಕೊಂಡಿದ್ರೆ ಗೆಲುವು ಅಸಾಧ್ಯವಾಗ್ತಾ ಇರಲಿಲ್ಲ ಎಂದರು. ಜಮಖಂಡಿ, ರಾಮನಗರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಐದೂ ಕ್ಷೇತ್ರಗಳ ಜನರಿಗೆ ಎರಡೂ ಪಕ್ಷಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಎಲ್ಲರಿಗೂ ಚಿರಋಣಿಯಾಗಿರತ್ತೇವೆ.

ಚುನಾವಣೆಯಲ್ಲಿ ಐದೂ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ನಾಯಕರು ಶ್ರಮಿಸಿದ್ದಾರೆ. ಆ ಪಕ್ಷದ ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ನಮ್ಮ ಜೆಡಿಎಸ್‌ನವರೂ ದುಡಿದಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು.

ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಡಿಎಸ್ ಗೆಲುವು, ಶಿವಮೊಗ್ಗದ ಕಡಿಮೆ ಅಂತರದ ಸೋಲು ನಮಗೆ ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಪದೇಪದೇ ಹೇಳ್ತಿದ್ರು. ಜನರು ಒಪ್ಪಿಗೆ ಕೊಟ್ಟಿಲ್ಲ ಅಧಿಕಾರಕ್ಕಾಗಿ ಹೊಂದಾಣಿಕೆ ಅಂತ ಸಣ್ಣತನದ ಹೇಳಿಕೆ ಕೊಡ್ತಿದ್ರು. ಅದಕ್ಕೆ ಜನರು ಈ ಉಪಚುನಾವಣೆಗಳ ಮೂಲಕ ಉತ್ತರ ಕೊಟ್ಟಿದ್ದಾರೆ.

ಸರ್ಕಾರ ರಚನೆಯಾದ ಐದು ತಿಂಗಳಲ್ಲಿ ಹಲವು ಜನಪರ ಕಾರ್ಯಕ್ರಮ ಜಾರಿ ಮಾಡಿದ್ದೇವೆ, ಆದೇಶ ಹೊರಟಿದ್ರೂ ಕಾಲಾವಕಾಶದ ಕೊರತೆಯಿಂದ ಜನರನ್ನು ತಲುಪಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸಿದ್ದೀವೆ. ಇದೆಲ್ಲದಕ್ಕೂ ಈ ಫಲಿತಾಂಶದ ಮೂಲಕ ಜನರು ಆಶೀರ್ವಾದ ಮಾಡಿದ್ದಾರೆ.ರೈತರ ಸಾಲಮನ್ನಾ, ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಾಲ ಇದೇ ತಿಂಗಳಿನಿಂದ ಆರಂಭವಾಗುತ್ತೆ. ಸರ್ಕಾರದ ತೀರ್ಮಾನಗಳು ಅಂತಿಮಹಂತಕ್ಕೆ ಬಂದಿವೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಗಳು ನಿಲ್ಲಬೇಕು ಅಂತ ಇದೆ. ಕ್ಷೇತ್ರಗಳ ಹಂಚಿಕೆ ಬಗ್ಗೆ ಎರಡೂ ಪಕ್ಷಗಳ ನಾಯಕರು ಚರ್ಚಿಸಿ ತೀರ್ಮಾನಿಸಬೇಕು. ಎರಡು ಲೋಕಸಭೆ ಸ್ಥಾನ ಗೆದ್ದಿದ್ದೇವೆ ಅಂತ ಮೈಮರೆಯಬಾರದು ಎಂದರು.

ಶಿರಾ ಮತ್ತು ಪಿರಿಯಾ‍ಪಟ್ಟಣ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ. ಅಪರೇಷನ್‌ ಕಮಲ ಮಾಡುವ ಪ್ರಯತ್ನದಲ್ಲಿ ಬಿಜೆಪಿಯವರು ಇದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಆ್ಯಕ್ಸಿಸ್ ಬ್ಯಾಂಕ್ ಘಟನೆ ಬಗ್ಗೆ ರೈತರಿಗೆ ಆತಂಕ ಬೇಡ ಅಂತ ಹೇಳಿದ್ದೇನೆ. ಬ್ಯಾಂಕ್‌ನವರು ನೋಟಿಸ್ ವಾಪಸ್ ತಗೊಳ್ತೀವಿ ಅಂತ ಹೇಳಿದ್ದಾರೆ. ಮೌನೀಶ್ ಮುದ್ಗಲ್ ನೇತೃತ್ವದಲ್ಲಿ ಇಬ್ಬರು ಅಧಿಕಾರಿಗಳ ಸಮಿತಿ ಕೆಲಸ ಮಾಡ್ತಿದೆ. ರಾಷ್ಟ್ರೀಕೃತ– ಸಹಕಾರಿ ಬ್ಯಾಂಕ್‌ಗಳ ಸಾಲಮನ್ನಾಕ್ಕೆ ಸರ್ಕಾರ ಕೆಲಸ ಮಾಡ್ತಿದೆ.

ಟ್ರ್ಯಾಕ್ಟರ್‌ ಸಾಲ, ಬೆಳೆಸಾಲ ಹೊರತುಪಡಿಸಿ. ಸಾಲ ತಗೊಂಡು ಕಟ್ಟದೆ, ನಿಮ್ಮಿಂದ ಪಡೆದುಕೊಂಡ ಚೆಕ್, ಬ್ಯಾಂಕ್‌ಗೆ ಹಾಕಿ ಚೆಕ್ ಡಿಸ್ ಹಾನರ್ ಆದಾಗ ಕೇಸ್‌ಗಳು ಇವೆ. ಚೆಕ್ ಬೌನ್ಸ್‌ ಆದ್ರೂ ಕ್ರಿಮಿನಲ್ ಕೇಸ್ ಹಾಕೋಕೆ ಬರಲ್ಲ. ಸಿವಿಲ್ ಡಿಸ್‌ಪ್ಯೂಟ್ ಇದು. ಬ್ಯಾಂಕ್‌ನವರು ಈ ರೀತಿ ನಡೆದುಕೊಳ್ಳೋದು ತಕ್ಷಣ ನಿಲ್ಲಿಸಬೇಕು. ಯಾವುದೆ ಬ್ಯಾಂಕ್‌ನವರು ಈ ರೀತಿ ಉದ್ಧಟತನದಿಂದ ನಡೆದುಕೊಳ್ಳುವುದರ ವಿರುದ್ಧ ಸರ್ಕಾರದ ಕ್ರಮಕ್ಕೆ ಅವಕಾಶವಿದೆ ಈ ಬಗ್ಗೆ ಎಲ್ಲ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.