ಬೆಂಗಳೂರು: ಅಧಿವೇಶನದಲ್ಲಿ ಪಾಲ್ಗೊಳ್ಳುವಮೊದಲು ತಂದೆ ದೇವೇಗೌಡರ ಮನೆಗೆ ಧಾವಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುದೀರ್ಘ ಚರ್ಚೆಯಲ್ಲಿ ತಲ್ಲೀನರಾಗಿದ್ದಾರೆ. ಇಂದು ಸದನ ನಡೆಸುವ ಮತ್ತು ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆಕಾರ್ಯತಂತ್ರ ಹೆಣೆಯುತ್ತಿದ್ದಾರೆ.
‘ರಾಜೀನಾಮೆಯ ಪ್ರಸ್ತಾಪ ಮಾಡುವುದು ಬೇಡ. ಏನು ಬೇಕಾದರೂ ಆಗಬಹುದು. ಧೈರ್ಯಗೆಡದೆ ಪರಿಸ್ಥಿತಿ ಎದುರಿಸು’ ಎಂದು ದೇವೇಗೌಡರಿಂದ ಪುತ್ರನಿಗೆ ಹಿತೋಪದೇಶ. ಎರಡು ತಾಸು ಸಮಾಲೋಚನೆಯ ನಂತರ ವಿಧಾನಸೌಧದ ಕಡೆಗೆ ಹೊರಟರು ಕುಮಾರಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.