ADVERTISEMENT

ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ- ಮತಎಣಿಕೆ ಕಾರ್ಯ ಆರಂಭ, ಬಿಜೆಪಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 6:33 IST
Last Updated 31 ಮೇ 2019, 6:33 IST
ಶಹಾಪುರದಲ್ಲಿ ವಿಜಯೋತ್ಸವ
ಶಹಾಪುರದಲ್ಲಿ ವಿಜಯೋತ್ಸವ   

ಬೆಂಗಳೂರು: ರಾಜ್ಯದಪುರಸಭೆ ಹಾಗೂ ಪಟ್ಟಣ ಪಂಚಾಯಿತಿಚುನಾವಣೆಗಳ ಮತ ಎಣಿಕೆ ಆರಂಭವಾಗಿದ್ದು ಹಲವೆಡೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಎರಡನೆ ಸ್ಥಾನದಲ್ಲಿದೆ. ಜೆಡಿಎಸ್ ಮೂರನೆ ಸ್ಥಾನದಲ್ಲಿ ಮುಂದುವರಿದಿದೆ.

ಎರಡು ದಿನಗಳ ಹಿಂದೆ ಚುನಾವಣೆ ನಡೆದಿದ್ದು, ಫಲಿತಾಂಶಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದು, ರಾಜ್ಯದ ಎಲ್ಲಾ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮತಎಣಿಕೆ ಕೇಂದ್ರಗಳಲ್ಲಿ ಆಯಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದಾರೆ.

ಪ್ರಥಮ ಮಾಹಿತಿಗಳ ಪ್ರಕಾರ, ತುಮಕೂರು ಜಿಲ್ಲೆ ಕುಣಿಗಲ್‌‌ನಲ್ಲಿಮತಎಣಿಕೆ ಮುಂದುವರಿದಿದ್ದು,ಬಿಜೆಪಿ 1 ವಾರ್ಡ್ ಹಾಗೂಕಾಂಗ್ರೆಸ್ 2 ವಾರ್ಡ್‌‌ಗಳಲ್ಲಿ ಗೆಲುವು ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆಯಲ್ಲಿ ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಸುಳ್ಯ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. ಶಿಡ್ಲಘಟ್ಟ ನಗರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.ಬ್ಯಾಡಗಿ ಪುರಸಭೆಯಲ್ಲಿ ಬಿಜೆಪಿ 4 ಸ್ಥಾನಗಳು ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ADVERTISEMENT

ಮತ ಎಣಿಕೆ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಚಿಕ್ಕಮಗಳೂರು:ಜಿಲ್ಲೆಯ ಕಡೂರು ಪುರಸಭೆ, ಮೂಡಿಗೆರೆ, ಎನ್.ಆರ.ಪುರ, ಕೊಪ್ಪ ಹಾಗೂ ಶೃಂಗೇರಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು.

ಎನ್.ಆರ್.ಪುರ ಪಟ್ಟಣ ಪಂಚಾಯಿತಿ 1ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ಜುಬೇದಾ, 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ಮನ್ವರ್ ಪಾಷಾ, 3ನೇ ವಾರ್ಡ್ ನಲ್ಲಿ ಕಾಂಗ್ರೆಸ್‌ ನ ಉಮಾ ಗೆಲುವು ಸಾಧಿಸಿದ್ದಾರೆ.

ಹೊಸಪೇಟೆ: ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯ ಇಲ್ಲಿನ ಪಿ.ವಿ.ಎಸ್.ಬಿ.ಸಿ.ಶಾಲೆಯಲ್ಲಿ ಮುಂದುವರೆದಿದೆ.

ಫಲಿತಾಂಶ ತಿಳಿಯಲು ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಎದುರು ಜಮಾಯಿಸಿದ್ದಾರೆ.

ಒಟ್ಟು ಇಪ್ಪತ್ತು ವಾರ್ಡ್ಗಳಿಗೆ ಇದೇ 25 ರಂದು ಚುನಾವಣೆ ನಡೆದಿತ್ತು. ಒಟ್ಟು 45 ಜನ ಕಣದಲ್ಲಿದ್ದಾರೆ.

ಹೊಳಲ್ಕೆರೆ ಪ.ಪಂ.: ಬಿಜೆಪಿ ಮುನ್ನಡೆ
ಚಿತ್ರದುರ್ಗ:
ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ಎರಡು ದಿನಗಳ ಹಿಂದೆ ನಡೆದ ಮತದಾನದ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

16 ವಾರ್ಡ್ ಪೈಕಿ 6 ವಾರ್ಡ್ ಫಲಿತಾಂಶ ಹೊರಬಿದ್ದಿದೆ. 4ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಹಾಗೂ 1ರಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

ಹಿರಿಯೂರು ನಗರ ಸಭೆ ಹಾಗೂ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಮತ ಎಣಿಕೆ ನಡೆಯುತ್ತಿದೆ.

ಭಟ್ಕಳ ಪುರಸಭೆ ಪಕ್ಷೇತರರ ತೆಕ್ಕೆಗೆ
23 ಸ್ಥಾನಗಳಿರುವ ಭಟ್ಕಳ ಪುರಸಭೆಯಲ್ಲಿ ಪಕ್ಷೇತರರು 19 ಕಡೆ ಗೆಲುವು ಸಾಧಿಸಿದ್ದಾರೆ. 3 ಕಡೆ ಕಾಂಗ್ರೆಸ್ ಗೆದ್ದಿದ್ದರೆ ಬಿಜೆಪಿ ಒಂದು ಸ್ಥಾನ ಪಡೆದಿದೆ.

ಹೊನ್ನಾವರ ಪಟ್ಟಣ ಪಂಚಾಯ್ತಿ ಬಿಜೆಪಿ ತೆಕ್ಕೆಗೆ
20 ಸ್ಥಾನಗಳಿರುವ ಹೊನ್ನಾವರ ಪಟ್ಟಣ ಪಂಚಾಯ್ತಿಯಲ್ಲಿ 12 ಸ್ಥಾನ ಗೆದ್ದು ಬಿಜೆಪಿ ಅಧಿಕಾರ ಹಿಡಿದಿದೆ. 5 ಸ್ಥಾನದಲ್ಲಿ ಪಕ್ಷೇತರರು, 2 ಸ್ಥಾನದಲ್ಲಿ ಜೆಡಿಎಸ್ ಹಾಗೂ 1ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಸಿದ್ದಾಪುರ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲು
15 ಸದಸ್ಯ ಬಲದ ಸಿದ್ದಾಪುರ ಪಟ್ಟಣ ಪಂಚಾಯತಿಯಲ್ಲಿ 14 ಸ್ಥಾನ ಬಿಜೆಪಿ,ಕೇವಲ ಒಂದು ಕಡೆ ಕಾಂಗ್ರೆಸ್ ಗೆದ್ದಿದೆ.

ಶೃಂಗೇರಿ ಪ.ಪಂ: ಬಿಜೆಪಿ7, ಕಾಂಗ್ರೆಸ್‌3, ಪಕ್ಷೇತರ 1ರಲ್ಲಿ ಜಯ
ಚಿಕ್ಕಮಗಳೂರು:
ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ವಾರ್ಡವಾರು 1ರಲ್ಲಿ ಪಕ್ಷೇತರ ಅಭ್ಯರ್ಥಿ ರಫೀಕ್, 2ರಲ್ಲಿ ಬಿಜೆಪಿಯ ಅರುಣ , 3ರಲ್ಲಿ ಕಾಂಗ್ರೆಸ್‌ನ ರೂಪಾ, 4ರಲ್ಲಿ ಬಿಜೆಪಿಯ ಶ್ರೀವಿದ್ಯಾ, 5ರಲ್ಲಿ ಬಿಜೆಪಿಯ ವೇಣು ಗೋಪಾಲ್, 6ರಲ್ಲಿ ಬಿಜೆಪಿ ರತ್ನಾಕರ್‌, 7ರಲ್ಲಿ ಬಿಜೆಪಿಯ ಹರೀಶ್ ಶೆಟ್ಟಿ, 8ರಲ್ಲಿ ಬಿಜೆಪಿಯ ಪ್ರಕಾಶ್, 9ರಲ್ಲಿ ಬಿಜೆಪಿಯ ರಾಧಿಕಾ, 10ರಲ್ಲಿ ಕಾಂಗ್ರೆಸ್‌ನ ಆಶಾದಿನೇಶ್ ಹಾಗೂ 11ನೇ ವಾರ್ಡ್‌ನಲ್ಲಿಕಾಂಗ್ರೆಸ್‌ ಲತಾ ಗೆಲುವು ಸಾಧಿಸಿದ್ದಾರೆ.

ಕೊಪ‍್ಪ ಪಟ್ಟಣ ಪಂಚಾಯಿತಿ: ಬಿಜೆಪಿ 6, ಕಾಂಗ್ರೆಸ್‌ 4, ಪಕ್ಷೇತರ 1
ಚಿಕ್ಕಮಗಳೂರು:
ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ವಾರ್ಡ್‌ವಾರು 1ರಲ್ಲಿ ಬಿಜೆಪಿಯ ಹೇಮಾವತಿ, 2ರಲ್ಲಿ ಬಿಜೆಪಿಯ ಸುಜಾತಾ , 3ಕಾಂಗ್ರೆಸ್‌ನ ಸುಬ್ರಹ್ಮಣ್ಯ ಶೆಟ್ಟಿ , 4ರಲ್ಲಿ ಕಾಂಗ್ರೆಸ್‌ನ ರಶೀದ್, 5ರಲ್ಲಿ ಬಿಜೆಪಿಯ ಇದ್ದಿನಬ್ಬ, 6ರಲ್ಲಿ ಬಿಜೆಪಿ ಗಾಯತ್ರಿ, 7ರಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಶೆಟ್ಟಿ, 8ರಲ್ಲಿ ಕಾಂಗ್ರೆಸ್‌ನ ವಿಜಯಕುಮಾರ್, 9ರಲ್ಲಿ ಬಿಜೆಪಿಯ ಗಾಯತ್ರಿ ಶೆಟ್ಟಿ,10ರಲ್ಲಿ ಬಿಜೆಪಿಯ ರೇಖಾ ಹಾಗೂ 11ರಲ್ಲಿ ಕಾಂಗ್ರೆಸ್‌ನ ಮೈತ್ರಾ ಗೆಲುವು ಸಾಧಿಸಿದ್ದಾರೆ.

11 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್‌ 4 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನ ಪಡೆದಿದ್ದಾರೆ.

ನರಗುಂದ ಪುರಸಭೆ ಬಿಜೆಪಿ ತೆಕ್ಕೆಗೆ
ಗದಗ:
ನರಗುಂದ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದ್ದು, ಸತತ ನಾಲ್ಕನೆಯ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ 06 ಸ್ಥಾನಗಳಲ್ಲಿ ಗೆಲುವು ಕಂಡಿದೆ.ಇಲ್ಲಿ ಈ ಬಾರಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ. ಒಟ್ಟು ಐವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಐವರೂ ಸೋಲು ಕಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಗೆಗೆಲುವು
ತುಮಕೂರು:
ಮಹಾನಗರ ಪಾಲಿಕೆ 22 ನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಮೂರ್ತಿ 115 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಮಾಜಿ ಮೇಯರ್ ಎಚ್.ರವಿಕುಮಾರ್ ಅವರ ಕೊಲೆಯಾದ ಹಿನ್ನೆಲೆಯಲ್ಲಿ ಈ ವಾರ್ಡಿಗೆ ಉಪಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.