ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದರ್ಶನ

ಪ್ರಜಾಮತ 2019

​ಪ್ರಜಾವಾಣಿ ವಾರ್ತೆ
Published 3 ಮೇ 2019, 12:48 IST
Last Updated 3 ಮೇ 2019, 12:48 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1977 ರಿಂದ ಈವರೆಗೆ ಒಂದು ಬಾರಿ (1996) ಜೆಡಿಎಸ್‌ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್‌ ಪಾರುಪತ್ಯವಿದೆ. ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದಿರುವ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಈ ಬಾರಿಯೂ ಅದೇ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿದಿದ್ದು, ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರನ್ನು ಇಲ್ಲಿಂದ ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿದೆ. ಸ್ಥಳೀಯ ಜೆಡಿಎಸ್‌ ಮುಖಂಡರು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಇಲ್ಲಿ ಸ್ಪರ್ಧಿಸಬೇಕು ಎಂದು ದುಂಬಾಲು ಬಿದ್ದಿದ್ದಾರೆ.


ಆಕಾಂಕ್ಷಿಗಳು
ಕಾಂಗ್ರೆಸ್‌– ಎಂ.ವೀರಪ್ಪ ಮೊಯಿಲಿ
ಜೆಡಿಎಸ್‌– ವಿ. ಗೋಪಾಲಗೌಡ, ಇ.ಕೃಷ್ಣಪ್ಪ
ಬಿಜೆಪಿ–ಬಿ.ಎನ್. ಬಚ್ಚೇಗೌಡ

ADVERTISEMENT


ಮತದಾರರ ಸಂಖ್ಯೆ ;17,90,408


ವಿಧಾನಸಭಾ ಕ್ಷೇತ್ರವಾರು ಬಲಾಬಲ

ಒಟ್ಟು–8
ಕಾಂಗ್ರೆಸ್‌ 5– ಚಿಕ್ಕಬಳ್ಳಾಪುರ , ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ,
ಜೆಡಿಎಸ್‌ 2– ದೇವನಹಳ್ಳಿ, ನೆಲಮಂಗಲ
ಬಿಜೆಪಿ 1– ಯಲಹಂಕ

ಹಿಂದಿನ ಚುನಾವಣೆಗಳ ಲೆಕ್ಕಾಚಾರ

2009
ವಿಜೇತರು: ಎಂ.ವೀರಪ್ಪ ಮೊಯಿಲಿ, ಗೆಲುವಿನ ಅಂತರ: 11,649
ಎಂ.ವೀರಪ್ಪ ಮೊಯಿಲಿ; ಕಾಂಗ್ರೆಸ್‌; 42.5%
ಸಿ.ಅಶ್ವತ್ಥನಾರಾಯಣ; ಬಿಜೆಪಿ; 32.6%
ಸಿ.ಆರ್.ಮನೋಹರ್; ಜೆಡಿಎಸ್‌; 17.1%
ಇತರೆ; 7.8%


2014
ವಿಜೇತರು: ಎಂ.ವೀರಪ್ಪ ಮೊಯಿಲಿ, ಗೆಲುವಿನ ಅಂತರ: 35,218
ಎಂ.ವೀರಪ್ಪ ಮೊಯಿಲಿ; ಕಾಂಗ್ರೆಸ್‌; 33.61%
ಬಿ.ಎನ್.ಬಚ್ಚೇಗೌಡ; ಬಿಜೆಪಿ; 32.86%
ಎಚ್.ಡಿ.ಕುಮಾರಸ್ವಾಮಿ; ಜೆಡಿಎಸ್‌; 27.40%
ಇತರೆ; 6.13%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.