
ಉಮಾ ಅನಂತ್, ಸಂತೋಷ ಜಿ.ಚಿನಗುಡಿ
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಸುಧಾ’ ವಾರಪತ್ರಿಕೆ ಮುಖ್ಯ ಉಪ ಸಂಪಾದಕಿ ಉಮಾ ಅನಂತ್ ಅವರು ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ‘ಪ್ರಜಾವಾಣಿ’ಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಜಿ.ಚಿನಗುಡಿ ಅವರು ‘ಮೈಸೂರು ದಿಗಂತ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಪತ್ರಕರ್ತೆ ಸರಿತಾ ರೈ ಅವರು ಅಕಾಡೆಮಿಯ ವಾರ್ಷಿಕ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ಫಲಕ ಮತ್ತು ₹1 ಲಕ್ಷ ನಗದು ಒಳಗೊಂಡಿದೆ.
ವಾರ್ಷಿಕ ಪ್ರಶಸ್ತಿ: ಡಿ.ಕುಮಾರಸ್ವಾಮಿ, ಬನಶಂಕರ ಆರಾಧ್ಯ, ಹೇಮಾ ವೆಂಕಟ್, ಮಂಜುನಾಥ್ ವೈ.ಎಲ್., ಅನಂತ ನಾಡಿಗ್, ಗುರುರಾಜ್ ವಾಮನರಾವ್ ಜಮಖಂಡಿ, ಎಂ.ಎಂ.ಪಾಟೀಲ್, ಎಲ್.ವಿವೇಕಾನಂದ, ಆರ್.ಪಿ.ಭರತ್‌ರಾಜ್ ಸಿಂಗ್, ಪ್ರೊ.ಪೂರ್ಣಾನಂದ, ಮೊಹಮ್ಮದ್ ಅಸದ್, ತುಂಗರೇಣುಕ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ.
ಸೋಮಶೇಖರ್ ಪಡುಕೆರೆ, ಗುಲ್ನಾರ್ ಮಿರ್ಝಾ, ಗಣೇಶ ಹೆಗಡೆ ಇಟಗಿ, ಆರತಿ ಎಚ್.ಎನ್., ಕೆ.ಲಕ್ಷ್ಮಣ, ಮಂಜುನಾಥ ಮಹಾಲಿಂಗಪೂರ, ಮಂಜುನಾಥ ಟಿ., ಮಲ್ಲಿಕಾಚರಣ ವಾಡಿ, ಪ್ರತಿಮಾ ನಂದಕುಮಾರ್, ಅಮಿತ್ ಉಪಾಧ್ಯೆ, ಪ್ರಭುಸ್ವಾಮಿ ನಟೇಕರ್, ಸಿದ್ದೇಗೌಡ ಎನ್., ಸಂಜೀವ ಕಾಂಬ್ಳೆ, ನೀಲಕಂಠ ಕೆ.ಆರ್.
ವಾರ್ಷಿಕ ಪ್ರಶಸ್ತಿಯು ₹50 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
ದತ್ತಿ ಪ್ರಶಸ್ತಿಗಳು: ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ದತ್ತಿ–ಎ.ನಾರಾಯಣ, ಅರಗಿಣಿ ದತ್ತಿ–ಚೇತನ್ ನಾಡಿಗೇರ, ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ–ಸಿದ್ದೇಶ್ ತ್ಯಾಗಟೂರು, ಸಿ.ವಿ.ರಾಜಗೋಪಾಲ್ ದತ್ತಿ–ಪ್ರಹ್ಲಾದ್ ಕುಳಲಿ, ಕೆಯುಡಬ್ಲ್ಯುಜೆ ದತ್ತಿ–ಕೆ.ಆನಂದ ಶೆಟ್ಟಿ.
ಆಂದೋಲನ ದತ್ತಿ–ಕೊಪ್ಪಳದ ಸುವರ್ಣ ಗಿರಿ ಪತ್ರಿಕೆ, ಅಭಿಮಾನಿ ದತ್ತಿ– ಶಿವು ಹುಣಸೂರು, ಅಭಿಮನ್ಯು ದತ್ತಿ–ಚಂದ್ರಶೇಖರ ಬೆನ್ನೂರು, ಪ್ರಜಾ ಸಂದೇಶದತ್ತಿ–ನಾಗರಾಜು ವೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.