ADVERTISEMENT

‘ಸಿ.ಎಂ ಬದಲಿಸಿದರೆ ಕೋವಿಡ್‌ಗಿಂತ ದೊಡ್ಡ ಅನಾಹುತ’

ಮಲೆನಾಡು ಮಠಾಧೀಶರ ಪರವಾಗಿ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 20:27 IST
Last Updated 12 ಜೂನ್ 2021, 20:27 IST
ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ
ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ   

ಶಿಕಾರಿಪುರ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತು ಯಾರೂ ಮಾತನಾಡ
ಬಾರದು. ನಾಯಕತ್ವ ಬದಲಾದರೆ ರಾಜ್ಯದಲ್ಲಿ ಕೋವಿಡ್ ಅಲೆಗಿಂತ ದೊಡ್ಡ ಅನಾಹುತವಾಗುತ್ತದೆ’ ಎಂದು ಆನಂದಪುರ ಮುರುಘಾ ರಾಜೇಂದ್ರಮಠದ ಪೀಠಾಧ್ಯಕ್ಷ, ಮಲೆನಾಡು ಮಠಾಧೀಶರ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ದಿ.ರೇವಣಸಿದ್ಧ ಸ್ವಾಮೀಜಿ ಗದ್ದುಗೆಗೆ ಶನಿವಾರ ಯಡಿಯೂರಪ್ಪ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ ವೇಳೆ ನಡೆದ ಮಲೆನಾಡು ಮಠಾಧೀಶರ ಪರಿಷತ್ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.

‘ಯಡಿಯೂರಪ್ಪ ಆಡಳಿತ ನಡೆಸುವಾಗ ಪ್ರವಾಹ, ಕೋವಿಡ್ ಸೇರಿ ಹಲವು ಅಡೆತಡೆಗಳು ಬಂದಿವೆ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ದೈವಿ ಪುರುಷರಾಗಿದ್ದು, ಹಲವು ಮಠಾಧೀಶರ ಆಶೀರ್ವಾದ ಅವರ ಮೇಲಿದೆ. ಶಿಕ್ಷಣ ಹಾಗೂ ದಾಸೋಹದಲ್ಲಿಮಠಗಳ ಸೇವೆ ಗುರುತಿಸಿ ಮೊದಲಿಗೆ ಅವರು, ಜಾತಿರಹಿತವಾಗಿ ರಾಜ್ಯದ ಹಲವು ಮಠಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.