ADVERTISEMENT

ಎಂಬಿಎ, ಎಂಸಿಎ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 5:18 IST
Last Updated 18 ಮೇ 2025, 5:18 IST
   

ಬೆಂಗಳೂರು: ಎಂ.ಬಿ.ಎ, ಎಂ.ಸಿ.ಎ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ 22
ರಂದು ನಡೆಯುವ ಪಿಜಿ–ಸಿಇಟಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.

ಅಭ್ಯರ್ಥಿಗಳು ಮೇ 19ರವರೆಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ಅವಧಿ ವಿಸ್ತರಣೆ ಎಂ.ಬಿ.ಎ, ಎಂ.ಸಿ.ಎಗೆ ಮಾತ್ರ ಅನ್ವಯವಾಗುತ್ತದೆ. ಎಂ.ಟೆಕ್‌, ಎಂ.ಇ ಕೋರ್ಸ್‌ಗಳಿಗೆ ಅರ್ಜಿಸಲ್ಲಿಸಲು ಕೊನೆ ದಿನಾಂಕ ಮುಗಿದಿದ್ದು, ಕಂಪ್ಯೂಟರ್‌ ಸೈನ್ಸ್‌ ಹೊರತುಪಡಿಸಿ ಉಳಿದ ವಿಷಯಗಳಿಗೆ ಮೇ 31ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ADVERTISEMENT

ಎಂ.ಇ ಮತ್ತು ಎಂ.ಟೆಕ್‌ನ ಕಂಪ್ಯೂಟರ್‌ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಮಾತ್ರ ಜೂನ್ 2ರಂದು ಈ ಬಾರಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.