ADVERTISEMENT

ಬಿಸಿಯೂಟ ಸಿಬ್ಬಂದಿ ಗೌರವಧನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:45 IST
Last Updated 20 ಜೂನ್ 2025, 15:45 IST
<div class="paragraphs"><p> ಬಿಸಿಯೂಟ</p></div>

ಬಿಸಿಯೂಟ

   

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಡುಗೆ ತಯಾರಕರು ಮತ್ತು ಸಹಾಯಕರ ಗೌರವಧನವನ್ನು ತಿಂಗಳಿಗೆ ₹1,000 ಹೆಚ್ಚಳ ಮಾಡಿದ್ದು, ಕ್ಷೀರಭಾಗ್ಯ ಲೆಕ್ಕಶೀರ್ಷಿಕೆ ಅಡಿ ಈ ಮೊತ್ತವನ್ನು ಭರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಳ ಮಾಡುವುದಾಗಿ 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಪ್ರಸ್ತುತ ಅಡುಗೆ ತಯಾರಕರು ₹3,700 ಹಾಗೂ ಸಹಾಯಕರು ₹3,600 ಸಂಭಾವನೆ ಪಡೆಯುತ್ತಿದ್ದು, ಕ್ರಮವಾಗಿ ₹4,700 ಹಾಗೂ ₹4,600ಕ್ಕೆ ಹೆಚ್ಚಳವಾಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.