ಬೆಂಗಳೂರು: ದೇವನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಬೋಯಿಂಗ್ ವಿಮಾನ ಕಂಪನಿಯ ಜಾಗತಿಕ ಎಂಜನಿಯರಿಂಗ್ ಟೆಕ್ನಾಲಜಿ ಇನೊವೇಷನ್ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇದೇ 19 ರಂದು ಉದ್ಘಾಟಿಸಲಿದ್ದಾರೆ.
ಬೋಯಿಂಗ್‌ನ ಕೇಂದ್ರ ಕಚೇರಿ ಅಮೆರಿಕದ ವರ್ಜೀನಿಯಾದಲ್ಲಿದ್ದು, ಅದನ್ನು ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ಕ್ಯಾಂಪಸ್ ಬೆಂಗಳೂರಿನದ್ದಾಗಿದೆ.
ಮೋದಿಯವರ ಭೇಟಿಯ ಕಾರಣ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ರದ್ದುಪಡಿಸಲಾಗಿದೆ. ಮೋದಿಯವರಿಗೆ ದೊಡ್ಡ ಪ್ರಮಾಣದಲ್ಲಿ ಸ್ವಾಗತ ನೀಡುವ ಸಂಬಂಧ ಸಭೆ ನಡೆಸಿ ಚರ್ಚಿಸಲಾಯಿತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.