
ಬೆಂಗಳೂರು: ಎಂಎಸ್‌ಸಿ ನರ್ಸಿಂಗ್, ಎಂಪಿಟಿ, ಎಂಎಸ್‌ಸಿ, ಎಎಚ್‌ಎಸ್, ಪಿಸಿ ಬಿಎಸ್‌ಸಿ ನರ್ಸಿಂಗ್ (ಲ್ಯಾಟರಲ್ ಎಂಟ್ರಿ) ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆಗಳನ್ನು ದಾಖಲಿಸಲು ಅ.30ರ ಮಧ್ಯಾಹ್ನ 3ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ.
ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಅ.30ರ ರಾತ್ರಿ 8ರ ನಂತರ ಹಾಗೂ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ಅ.31ರ ಬೆಳಿಗ್ಗೆ 11ರ ನಂತರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಶುಲ್ಕ ಪಾವತಿ ಹಾಗೂ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಲು ನ.1 ರಿಂದ ನ.5ರ ಸಂಜೆ 4ರವರೆಗೆ ಅವಕಾಶವಿರುತ್ತದೆ. ಹಿಂದಿನ ಸುತ್ತಿನಲ್ಲಿ ಶುಲ್ಕ ಪಾವತಿಸಿದ್ದರೆ ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಸೀಟು ಹಂಚಿಕೆಯಾದವರು ನ.5ರ ಸಂಜೆ 6ರೊಳಗೆ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.