ADVERTISEMENT

ಕಾರಂತರು ಕಟ್ಟಿದ್ದ ರಂಗಾಯಣ ಲಾಂಛನ ಇನ್ನಿಲ್ಲ

1989ರಲ್ಲಿ ‘ಕಾವಾ’ ಡೀನ್‌ ಶೋಲಾಪುರ್ಕರ್ ವಿನ್ಯಾಸಗೊಳಿಸಿದ್ದ ಲೋಗೊ

ನೇಸರ ಕಾಡನಕುಪ್ಪೆ
Published 3 ಅಕ್ಟೋಬರ್ 2018, 10:14 IST
Last Updated 3 ಅಕ್ಟೋಬರ್ 2018, 10:14 IST
ಮೈಸೂರಿನ ರಂಗಾಯಣದ ಕಟ್ಟಡದಲ್ಲಿದ್ದ ರಂಗಾಯಣದ ಲಾಂಛನ ಹಾಗೂ ಕೊಳವೆಗಳಿಂದ ನಿರ್ಮಿಸಿದ್ದ ಆಕೃತಿ (ಸಂಗ್ರಹ ಚಿತ್ರ)
ಮೈಸೂರಿನ ರಂಗಾಯಣದ ಕಟ್ಟಡದಲ್ಲಿದ್ದ ರಂಗಾಯಣದ ಲಾಂಛನ ಹಾಗೂ ಕೊಳವೆಗಳಿಂದ ನಿರ್ಮಿಸಿದ್ದ ಆಕೃತಿ (ಸಂಗ್ರಹ ಚಿತ್ರ)   

ಮೈಸೂರು: ನಗರದ ರಂಗಾಯಣದ ಮುಖ್ಯ ಕಟ್ಟಡದಲ್ಲಿರುವ ಲಾಂಛನ, ರಂಗಾಯಣ ಹೆಸರಿರುವ ಸುವರ್ಣಾಕ್ಷರಗಳು ಹಾಗೂ ಲೋಹದ ಆಕೃತಿಯನ್ನು ತೆರವುಗೊಳಿಸಲಾಗಿದೆ. ಈಗ ಲಾಂಛನವಿಲ್ಲದೆ ಬೋಳಾಗಿದೆ.

ಲಾಂಛನವನ್ನು ರಂಗಾಯಣದ ಸಂಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ ಅವರು 1989ರಲ್ಲಿ ನಿರ್ಮಿಸಿದ್ದರು. ಇದಕ್ಕೆ ವಿನ್ಯಾಸ ಮಾಡಿಕೊಟ್ಟಿದ್ದು ಜಯಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ) ಡೀನ್‌ ಆಗಿದ್ದ ಶೋಲಾಪುರ್ಕರ್‌. ಗಂಡಭೇರುಂಡಕ್ಕೆ ನಾಟಕ ಕ್ಷೇತ್ರದ ಲೇಪವನ್ನು ನೀಡಿ ಲೋಗೊ ರಚಿಸಲಾಗಿತ್ತು.

ಲಾಂಛನ ರಂಗಾಯಣದ ಇತರ ಭಾಗಗಳಲ್ಲೂ ಇವೆ. ಆದರೆ, ಶೋಲಾಪುರ್ಕರ್‌ ಅವರು ವಿನ್ಯಾಸಗೊಳಿಸಿದ್ದ ಕೊಳವೆಗಳಿಂದ ನಿರ್ಮಿಸಿದ್ದ ಆಕೃತಿಯಂತೆ ಬೇರಾವ ಕಡೆಯೂ ಇಲ್ಲ. ಹಾಗಾಗಿ, ಇದು ರಂಗಾಯಣಕ್ಕೆ ಆಗಿರುವ ನಷ್ಟ ಎನ್ನುವುದು ರಂಗಪ್ರಿಯರ ಅಳಲು.

ADVERTISEMENT

ಹೊಸ ವಿನ್ಯಾಸಕ್ಕಾಗಿ ಬದಲಾವಣೆ

‘ಬಿ.ವಿ.ಕಾರಂತರಿಗೆ ಅವಮಾನಿಸುವುದು ಉದ್ದೇಶವಲ್ಲ. ಇದನ್ನು ಮರು ನಿರ್ಮಾಣ ಮಾಡಲಾಗುತ್ತದೆ’ ಎಂದು ರಂಗಾಯಣದ ನಿರ್ದೇಶಕಿ ಭಾಗೀರತಿ ಬಾಯಿ ಕದಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಂಛನ, ಕೊಳವೆ ಆಕೃತಿಯು ಹಲವೆಡೆ ತುಕ್ಕು ಹಿಡಿದಿತ್ತು. ಹಾಗಾಗಿ, ಅದನ್ನು ಹೊಸದಾಗಿ ನಿರ್ಮಿಸುತ್ತಿದ್ದೇವೆ. ಕಲಾವಿದ ದ್ವಾರಕಿ ಅವರು ಹೊಸ ಯೋಜನೆಯನ್ನು ಮುಂದಿಟ್ಟಿದ್ದಾರೆ. ರಂಗಾಯಣದ ವೈಭವ ಉಳಿಯುವಂತೆ, ವಿಸ್ತರಿಸುವಂತೆ ಹೊಸ ಲಾಂಛನವನ್ನು ಸ್ಥಾಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.