ADVERTISEMENT

ಗೋಮಾತೆ ಸೇರಿ ಕಾಂಗ್ರೆಸ್‌ಗೆ ಮೂರು ಶಾಪ: ನಳಿನ್‍ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 19:44 IST
Last Updated 10 ಜನವರಿ 2021, 19:44 IST
ನಳಿನ್ ‌ಕುಮಾರ್ ಕಟೀಲ್‌
ನಳಿನ್ ‌ಕುಮಾರ್ ಕಟೀಲ್‌   

ಹೊನ್ನಾಳಿ: ‘ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿ ಶಾಪ, ಅಂಬೇಡ್ಕರ್ ಶಾಪ, ಗೋಮಾತೆ ಶಾಪಗಳು ಕಾಡುತ್ತಿವೆ. ಈ ಪಕ್ಷಕ್ಕೆ ಮುಂದೆ ಭವಿಷ್ಯವಿಲ್ಲ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಆದರೆ ಪಕ್ಷ ಆ ಕೆಲಸ ಮಾಡಲಿಲ್ಲ, ಅವರು ಹೇಳಿದಂತೆ ರಾಮರಾಜ್ಯವನ್ನೂ ಮಾಡಲಿಲ್ಲ. ಹೀಗಾಗಿ, ಅದು ಗಾಂಧಿಯವರ ಶಾಪಕ್ಕೆ ಗುರಿಯಾಗಿದೆ’ ಎಂದರು.

‘ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ಎರಡು ಚುನಾವಣೆಗಳಲ್ಲಿ ಸೋಲಿಸಿತು. ಹೀಗಾಗಿ ಅಂಬೇಡ್ಕರ್ ಶಾಪ ಎದುರಿಸುತ್ತಿದೆ. ಮೂರನೆಯದಾಗಿ ಕಾಂಗ್ರೆಸ್ ಆರಂಭದಲ್ಲಿ ಆಕಳು–ಕರುವನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡಿತ್ತು. ಗೋಮಾತೆ ಹೆಸರಲ್ಲಿ ಅಧಿಕಾರಕ್ಕೆ ಬಂದು, ನಂತರ ಗೋಮಾತೆಯನ್ನೇ ಮರೆಯಿತು. ಹೀಗಾಗಿ ಅದರ ಶಾಪ ಕಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.