ADVERTISEMENT

ರಾಜ್ಯ ಒಕ್ಕಲಿಗರ ಸಂಘಕ್ಕೆ ಕೆಂಚಪ್ಪಗೌಡ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 15:47 IST
Last Updated 15 ಡಿಸೆಂಬರ್ 2024, 15:47 IST
<div class="paragraphs"><p>ಬಿ.ಕೆಂಚಪ್ಪಗೌಡ</p></div>

ಬಿ.ಕೆಂಚಪ್ಪಗೌಡ

   

ಚಿತ್ರಕೃಪೆ: ಫೇಸ್‌ಬುಕ್‌

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಕೆಂಚಪ್ಪಗೌಡ ಅವರು ಚುನಾಯಿತರಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ADVERTISEMENT

ಸಂಘದ ಅಧ್ಯಕ್ಷ ಮತ್ತು ಇತರ ಹಲವು ಹುದ್ದೆಗಳಿಗೆ ಭಾನುವಾರ ನಡೆದ ಚುನಾವಣೆಯ ಫಲಿತಾಂಶವನ್ನು ಸಂಘವು ಪ್ರಕಟಿಸಿದೆ. ಉಪಾಧ್ಯಕ್ಷರಾಗಿ ಎಲ್‌.ಶ್ರೀನಿವಾಸ್‌ ಮತ್ತು ರೇಣುಕಾಪ್ರಸಾದ್‌ ಕೆ.ವಿ ಚುನಾಯಿತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಟಿ.ಕೋನಪ್ಪ ರೆಡ್ಡಿ ಅವರು ಪ್ರಧಾನ ಕಾರ್ಯದರ್ಶಿಯಾಗಿ, ಆರ್‌.ಹನುಮಂತರಾಯಪ್ಪ ಅವರು ಸಹಾಯಕ ಕಾರ್ಯದರ್ಶಿ ಮತ್ತು ಎನ್‌. ಬಾಲಕೃಷ್ಣ (ನಲ್ಲಿಗೆರೆ ಬಾಲು) ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.