ADVERTISEMENT

ಕ್ಯಾನ್ಸರ್‌ ಚಿಕಿತ್ಸೆಗೆ ಹೊಸ ತಲೆಮಾರಿನ ತಂತ್ರಜ್ಞಾನ!

ಸಿಎಆರ್‌–ಟಿ, ಇಮ್ಯುನೋ ಥೆರಪಿ, ಜೀನ್ ಥೆರಪಿ, ಜೀನ್ ಎಡಿಟಿಂಗ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 16:35 IST
Last Updated 18 ನವೆಂಬರ್ 2021, 16:35 IST
ಗ್ರೆಗ್‌ ಬಿ ಥಾಮ್ಸನ್‌
ಗ್ರೆಗ್‌ ಬಿ ಥಾಮ್ಸನ್‌   

ಬೆಂಗಳೂರು: ಕ್ಯಾನ್ಸರ್‌ ‘ಭಯಾನಕ’, ಅದಕ್ಕೆ ಚಿಕಿತ್ಸೆಯೇ ದುರ್ಲಭ ಎಂಬ ಸ್ಥಿತಿ ಈಗ ಮರೆಯಾಗುತ್ತಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನವು ಹಲವು ಬಗೆಯ ಕ್ಯಾನ್ಸರ್‌ ಚಿಕಿತ್ಸೆಗಳಿಗೆ ವರವಾಗಿ ಪರಿಣಮಿಸಿದೆ.

‘ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಅಮೆರಿಕದ ‘ಮೆಮೊರಿಯಲ್‌ ಸ್ಲೊವಾನ್ ಕೆಟ್ಟರಿಂಗ್ ಕ್ಯಾನ್ಸರ್‌ ಸೆಂಟರ್‌’ನ (ಎಂಎಸ್‌ಕೆಸಿಸಿ)ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ರೇಗ್‌ ಥಾಮ್ಸನ್‌ ವರ್ಚ್ಯುವಲ್ ಮೂಲಕ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆಯ ವಿಧಾನಗಳನ್ನು ವಿವರಿಸಿದರು. ಅವುಗಳು ಹೀಗಿವೆ–

*ಜಗತ್ತಿನ ಯಾವುದೇ ವ್ಯಕ್ತಿ ಕ್ಯಾನ್ಸರ್‌ಗೆ ತುತ್ತಾದರೆ ಅದನ್ನು ಖಚಿತಪಡಿಸಿಕೊಳ್ಳಲು ಎರಡನೇ ಅಭಿಪ್ರಾಯ ಪಡೆಯುವುದು ಅಗತ್ಯ. ಅದಕ್ಕಾಗಿ ಮತ್ತೊಮ್ಮೆ ಬಯಾಪ್ಸಿ ಮಾಡಿಸಬೇಕಿಲ್ಲ. ಮೊದಲ ಪರೀಕ್ಷೆಯ ಡಿಜಿಟಲ್‌ ಇಮೇಜಿಂಗ್‌ ಸಾಕು.ಬೆಂಗಳೂರಿನ ವ್ಯಕ್ತಿ ನ್ಯೂಯಾರ್ಕ್‌ನ ಸ್ಲೊವಾನ್ ಕೆಟ್ಟರಿಂಗ್ ಕ್ಯಾನ್ಸರ್‌ ಸೆಂಟರ್‌ಗೆ ಇದನ್ನು ಕಳುಹಿಸಿ ಅಭಿಪ್ರಾಯ ಪಡೆಯಬಹುದು. ಟೆಲಿಮೆಡಿಸಿನ್‌ ಮಾದರಿಯಲ್ಲೇ ತಜ್ಞ ವೈದ್ಯರಿಂದ ಅಭಿಪ್ರಾಯ ಪಡೆಯಬಹುದು.

ADVERTISEMENT

* ಸುಮಾರು 450 ಬಗೆಯ ಕ್ಯಾನ್ಸರ್‌ಗಳಿವೆ. ದೇಹದ ಯಾವುದೇ ಅಂಗಾಂಶಕ್ಕೂ ಕ್ಯಾನ್ಸರ್‌ ಬರಬಹುದು. ಕೋಶಗಳ ಅಣುಗಳಲ್ಲಿ ಆಗುವ ರೂಪಾಂತರ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇವುಗಳಲ್ಲಿ ಬಹುತೇಕ ಕ್ಯಾನ್ಸರ್‌ಗಳಿಗೆ ವಿಕಿರಣ ಚಿಕಿತ್ಸೆ ಅಥವಾ ಕಿಮೋ ಥೆರಪಿ ಅಗತ್ಯವಿಲ್ಲ. ಆರೋಗ್ಯಕರ ಕೋಶಗಳಿಗೆ ಹಾನಿ ಮಾಡದೇ ಕ್ಯಾನ್ಸರ್‌ ಕೋಶಗಳನ್ನೇ ನಿರ್ದಿಷ್ಟವಾಗಿ ಕೊಲ್ಲುವ ಥೆರಪಿ ಲಭ್ಯವಿದೆ.

*‘ಟಿ ಸೆಲ್‌’ ಥೆರಪಿ ಇದನ್ನು ಕೆಮೆರಿಕ್‌ ಆ್ಯಂಟಿಜನ್‌ ರಿಸೆಪ್ಟಾರ್‌ ಟಿ (ಸಿಎಆರ್‌–ಟಿ) ಎಂದು ಕರೆಯಲಾಗುತ್ತದೆ. ಇದು ಕೋಶ ಆಧಾರಿತ ಚಿಕಿತ್ಸಾ ವಿಧಾನ. ಇದನ್ನು ನೋವೆಲ್‌ ಇಮ್ಯುನೊಲಾಜಿಕ್‌ ಥೆರಪಿ ಎನ್ನಲಾಗುತ್ತದೆ. ವಿವಿಧ ಬಗೆಯ ರೋಗಗಳಿಂದ ರಕ್ಷಿಸುವ ಪ್ರತಿರೋಧಕ ಗುಣವನ್ನು ಟಿ ಕೋಶಗಳು ಹೊಂದಿವೆ. ರೋಗಿಯ ರಕ್ತದಿಂದ ಟಿ ಕೋಶಗಳು ಸಂಗ್ರಹಿಸಿಕೊಂಡು, ಬಳಿಕ ಅದನ್ನು ಜೆನೆಟಿಕಲ್‌ ಎಂಜಿನಿಯರಿಂಗ್‌ ಮೂಲಕ ಕೋಶಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಹೀಗೆ ರೂಪಾಂತರಗೊಂಡ ಟಿ ಕೋಶ ವಿಶಿಷ್ಟ ಶಕ್ತಿ ಪಡೆದಿರುತ್ತದೆ. ಅಂದರೆ, ಕ್ಯಾನ್ಸರ್‌ ಕಣಗಳನ್ನು ಮಾತ್ರ ಪತ್ತೆ ಹಚ್ಚಿ, ದಾಳಿ ಮಾಡಿ ನಾಶಪಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.