ADVERTISEMENT

ಕಾಫಿ ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರು

ಮಳೆ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:11 IST
Last Updated 2 ಮಾರ್ಚ್ 2019, 14:11 IST
ನಾಪೋಕ್ಲು ಸಮೀಪ ಬೇತು ಗ್ರಾಮದಲ್ಲಿ ಕಾಫಿ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಿರುವುದು
ನಾಪೋಕ್ಲು ಸಮೀಪ ಬೇತು ಗ್ರಾಮದಲ್ಲಿ ಕಾಫಿ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಿರುವುದು   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮೊದಲ ಮಳೆ ಸುರಿದು ಮೂರು ವಾರ ಕಳೆದಿದ್ದು ರೈತರು ಬ್ಯಾಕಿಂಗ್ ಮಳೆ ನಿರೀಕ್ಷೆಯಲ್ಲಿದ್ದಾರೆ. ವಿವಿಧೆಡೆ ಸಕಾಲದಲ್ಲಿ ಕಾಫಿ ತೋಟಗಳಲ್ಲಿ ಹೂಗಳು ಅರಳಿದ್ದು ಮಿಡಿಕಚ್ಚಲು ಮಳೆ ಅಗತ್ಯವಿದೆ.

ಮಳೆ ನಿರೀಕ್ಷೆಯಲ್ಲಿ ಬೆಳೆಗಾರರು ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ. ಕೆಲವರು ಹೊಳೆಮ ಕೆರೆಗಳಿಂದ ಕಾಫಿ ತೋಟಗಳಿಗೆ ನೀರು ಹಾಯಿಸಲು ಸಿದ್ಧತೆ ನಡೆಸಿದ್ದು, ಹಲವೆಡೆ ಸ್ಪಿಂಕ್ಲರ್ ಬಳಕೆಯೂ ನಡೆದಿದೆ.

ಬೇತು, ಕೈಕಾಡು, ಪಾರಾಣೆ, ಹೊದ್ದೂರು, ನೆಲಜಿ ಸೇರಿ ವಿವಿಧೆಡೆ ಸಕಾಲದಲ್ಲಿ ಹೂಮಳೆಯಾಗಿದೆ. ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಮೊದಲ ಮಳೆಯ ನಿರೀಕ್ಷೆಯಿದೆ.

ADVERTISEMENT

ಕಾಫಿ ಹೂಗಳು ಅರಳಲು ಇದು ಸಕಾಲ. ಬಿಸಿಲ ಕಾವು ಏರುತ್ತಿದ್ದು ಎರಡು ದಿನಗಳಿಂದ ಮೋಡ ಕಂಡಿರುವುದು ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.

ಪ್ರತಿವರ್ಷ ಕಾಫಿ ಬೆಳೆಗೆ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ಹೂಮಳೆ ಅವಶ್ಯಕ. ಉತ್ತಮ ಮಳೆಯಾದಲ್ಲಿ ಫಸಲು ನಿಶ್ಚಿತ. ಅಂತೆಯೇ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿರುತ್ತಾರೆ.

ನಿರೀಕ್ಷಿತ ಮಳೆಯಾಗದಿದ್ದಲ್ಲಿ ಸ್ಪಿಂಕ್ಲರ್ ಸೇರಿ ಪರ್ಯಾಯ ಬಳಕೆ ಅನಿವಾರ್ಯ. ಇದು ಪ್ರತಿವರ್ಷದ ಪ್ರಕ್ರಿಯೆ. ಸಣ್ಣ ಮತ್ತು ಮಧ್ಯಮ ಬೆಳೆಗಾರರು ಮೊದಲ ಹೂಮಳೆಯಿಂದ ಈ ವರ್ಷದ ಮಟ್ಟಿಗೆ ಸಂತಸಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.