ADVERTISEMENT

ಕಾಡಾನೆಗಳ ದಾಳಿಗೆ ಕಾಡುಕೋಣ ಬಲಿ

ನಾಗರಹೊಳೆ ವನ್ಯ ಜೀವಿ ವಿಭಾಗದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 14:36 IST
Last Updated 15 ಅಕ್ಟೋಬರ್ 2019, 14:36 IST
ಗೋಣಿಕೊಪ್ಪಲು ಬಳಿಯ ನಾಗರಹೊಳೆ ವನ್ಯ ಜೀವಿ ವಿಭಾಗದಲ್ಲಿ ಮೃತಪಟ್ಟ ಕಾಡುಕೋಣ
ಗೋಣಿಕೊಪ್ಪಲು ಬಳಿಯ ನಾಗರಹೊಳೆ ವನ್ಯ ಜೀವಿ ವಿಭಾಗದಲ್ಲಿ ಮೃತಪಟ್ಟ ಕಾಡುಕೋಣ   

ಗೋಣಿಕೊಪ್ಪಲು: ಅಂದಾಜು 15 ವರ್ಷ ಪ್ರಾಯದ ಕಾಡುಕೋಣ, ಕಾಡಾನೆಗಳ ದಾಳಿಗೆ ಬಲಿಯಾಗಿರುವ ಘಟನೆ ನಾಗರಹೊಳೆ ವನ್ಯಜೀವಿ ವಿಭಾಗದ ಮರಪಾಲ ಅರಣ್ಯದಂಚಿನಲ್ಲಿ ಮಂಗಳವಾರ ಗೋಚರಿಸಿದೆ.

ಅರಣ್ಯಾಧಿಕಾರಿಗಳು ತಿತಿಮತಿ ಬಳಿಯ ನೋಕ್ಯ ಮರಪಾಲ ಬಳಿಯ ಅರಣ್ಯದಂಚಿನಲ್ಲಿ ಬೀಟ್ ತಿರುಗುತ್ತಿದ್ದಾಗ ಮೃತ ಪಟ್ಟ ಕಾಡಾನೆ ಗೋಚರಿಸಿದೆ. ಕಾಡಕೋಣದ ಪಕ್ಕೆಲಬುಗಳಲ್ಲಿ ತೀವ್ರ ಪ್ರಮಾಣದ ಗಾಯವಾಗಿದ್ದು ಕಾಡಾನೆಗಳೊಂದೊಗಿನ ಕಾದಾಟದಲ್ಲಿ ಅಪಾಯ ಸಂಭವಿಸಿದೆ ಎಂದು ಅಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಾಡುಕೋಣ ಮೃತ ಪಟ್ಟಿರುವ ಸ್ಥಳದಲ್ಲಿ ಆನೆಗಳ ಹೆಜ್ಜೆ ಗುರುತು ಹಾಗೂ ಹೋರಾಟ ನಡೆಸಿದ ಸಂದರ್ಭದಲ್ಲಿ ಗಿಡಮರಗಳು ಮುರಿದು ಹೋಗಿರುವ ಚಿತ್ರ ಕಂಡು ಬಂದಿದೆ. ಸಾಮಾನ್ಯವಾಗಿ ಕಾಡುಕೋಣಗಳು ಆನೆಗಳೊಂದಿಗೆ ಕಾದಾಟಕ್ಕೆ ಇಳಿಯುವುದು ಕಡಿಮೆ. ಆದರೆ ಇದು ಅಪರೂಪದ ಘಟನೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದ ನಿರ್ದೇಶಕ ನಾರಾಯಣ ಸ್ವಾಮಿ, ಎಸಿಎಫ್ ಪ್ರಸನ್ನ ಕುಮಾರ್, ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಾನಂದ್ ಲಿಂಗಾಣಿ, ಡಿಆರ್ ಎಫ್ ಒ ಶಿವಲಿಂಗಯ್ಯ,ಫಾರೆಸ್ಟರ್ ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ಹುಣಸೂರು ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ಮುಜೂಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಡುಕೋಣವನ್ನು ಸ್ಥಳದಲ್ಲಿಯೇ ದಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.