ADVERTISEMENT

‘ಲೋಕಾಯುಕ್ತ ಪೊಲೀಸ್‌ ತನಿಖೆಯಲ್ಲಿ ಮಧ್ಯಪ್ರವೇಶ ಇಲ್ಲ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:35 IST
Last Updated 23 ಡಿಸೆಂಬರ್ 2020, 21:35 IST

ಬೆಂಗಳೂರು: ‘ಲೋಕಾಯುಕ್ತ ಪೊಲೀಸ್‌ ವಿಭಾಗ ನಡೆಸುವ ತನಿಖೆ ಯಲ್ಲಿ ಲೋಕಾಯುಕ್ತರು ಮಧ್ಯಪ್ರವೇ ಶಕ್ಕೆ ಅವಕಾಶ ಇಲ್ಲ’ ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

ಬೆಳ್ಳಂದೂರು ಡಿ–ನೋಟಿಫೈ ಪ್ರಕರ ಣದಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ವಿಳಂಬದ ಬಗ್ಗೆ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪ್ರಕಾರ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಲೋಕಾಯುಕ್ತರು ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ’ ಎಂದರು.

'ಬೆಳ್ಳಂದೂರು ಡಿ–ನೋಟಿಫೈ ಪ್ರಕರಣ ಕೂಡಾ ಕೋರ್ಟ್‌ನಿಂದ ತನಿಖೆಗೆ ಶಿಫಾರಸುಗೊಂಡಿದೆ. ಹೀಗಾಗಿ, ಕೋರ್ಟ್‌ನ ನಿಯಂತ್ರಣದಲ್ಲಿ ಇರುವಂಥ ಪ್ರಕರಣವಿದು. ತನಿಖೆ ನಡೆಸುವ ವಿಷಯದಲ್ಲಿ ಪೊಲೀಸ್ ವಿಭಾಗಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದೂ ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದಾರೆ ಎಂದು ಆರೋಪಿ ಸಲಾದ ಈ ಪ್ರಕರಣದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಸಂಬಂಧ ತನಿಖೆ ನಡೆಸುವಂತೆ 2015ರಲ್ಲಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದ್ದರೂ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿಲ್ಲ’ ಎಂದು ಹೈಕೋರ್ಟ್ ಮಂಗಳವಾರ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.