ADVERTISEMENT

ವೃತ್ತಿಶಿಕ್ಷಣ: ಈ ವರ್ಷವೂ ಆನ್‌ಲೈನ್‌ನಲ್ಲಿ ಸಿಇಟಿ ಇಲ್ಲ?

CET Exam Vocational Courses

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:00 IST
Last Updated 15 ಡಿಸೆಂಬರ್ 2019, 20:00 IST
   

ಬೆಂಗಳೂರು: ಪಿಯು ನಂತರ ಹಲವು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಈ ವರ್ಷವೂ ಆನ್‌ಲೈನ್‌ನಲ್ಲಿ ನಡೆಯುವುದು ಬಹುತೇಕ ಅಸಾಧ್ಯ ಎಂದೇ ಹೇಳಲಾಗುತ್ತಿದೆ.

ಕಳೆದ ಬಾರಿ ಸಿಇಟಿ ಫಲಿತಾಂಶ ಪ್ರಕಟಿಸುವ ವೇಳೆ, 2020ರ ಸಿಇಟಿ ಆನ್‌ಲೈನ್‌ ಮಾದರಿಯಲ್ಲಿನಡೆಯಲಿದೆ ಎಂದು ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದರು. ಆದರೆ ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಬದಲಾವಣೆ ಹೊಂದುವ ಪ್ರಸ್ತಾವಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಬಾರಿಯೂ ಆಫ್‌ಲೈನ್‌ನಲ್ಲೇ ಸಿಇಟಿ ನಡೆಸುವುದಕ್ಕೆ ಸಿದ್ಧತೆ ಆರಂಭಿಸಿದೆ. ಈ ತಿಂಗಳ ಮೂರನೇ ವಾರದಲ್ಲಿ 2020ರ ಸಿಇಟಿ ಪರೀಕ್ಷೆಗಳ ಮಾಹಿತಿಯನ್ನು ಕೆಇಎ ಪ್ರಕಟಿಸುವ ನಿರೀಕ್ಷೆ ಇದೆ.

‘ಆನ್‌ಲೈನ್‌ ಮಾದರಿಯಲ್ಲಿ ಪರೀಕ್ಷೆ ನಡೆಸುವುದಾದರೆ ಅದಕ್ಕೆಬಹಳ ಸಿದ್ಧತೆ ಅಗತ್ಯವಿದೆ. ಸುಮಾರು
2 ಲಕ್ಷದಷ್ಟು ಕಂಪ್ಯೂಟರ್‌ಗಳು ಬೇಕು. (ಸದ್ಯ ಇಷ್ಟು ಕಂಪ್ಯೂಟರ್‌ಗಳು ಲಭ್ಯ ಇವೆ).ಈ ಹಂತದಲ್ಲಿ
ಅದನ್ನು ಪ್ರಕಟಿಸಿದರೆ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೆ ಒಳಗಾಗಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿಯ ಅಗತ್ಯವಿದೆ’ ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.