ADVERTISEMENT

ಅರ್ಜುನ್ ಸರ್ಜಾಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:19 IST
Last Updated 4 ನವೆಂಬರ್ 2018, 19:19 IST

ಬೆಂಗಳೂರು:ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ‘ಮೀ–ಟೂ’ ಪ್ರಕರಣ ಸಂಬಂಧ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸರ್ಜಾ ಅವರಿಗೆ ಕಬ್ಬನ್‌ಪಾರ್ಕ್‌ ಪೊಲೀಸರು ನೋಟಿಸ್‌ ನೀಡಿದ್ದಾರೆ.

‘ನೀವು (ಅರ್ಜುನ್ ಸರ್ಜಾ) ಲೈಂಗಿಕ ದೌರ್ಜನ್ಯ ಎಸಗಿದ್ದೀರಿ ಎಂದು ಆರೋಪಿಸಿ ಶ್ರುತಿ ಹರಿಹರನ್ ದೂರು ನೀಡಿದ್ದಾರೆ. ಆ ಸಂಬಂಧ ನಿಮ್ಮ ಹೇಳಿಕೆ ಪಡೆಯಬೇಕಿದೆ. ಠಾಣೆಗೆ ಬಂದು ವಿಚಾರಣೆಗೆ ಸಹಕರಿಸಿ. ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್‌ನಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.

‘ಪ್ರಕರಣ ಸಂಬಂಧ ಈಗಾಗಲೇ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ದೂರುದಾರರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲಿಸಿಕೊಳ್ಳಲಾಗಿದೆ. ಈಗ ಆರೋಪಿ ಹೇಳಿಕೆ ಬೇಕಿರುವುದರಿಂದ ವಿಚಾರಣೆಗೆ ಕರೆದಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.