ADVERTISEMENT

ಪಕ್ಷಿಧಾಮದಲ್ಲಿ ಹೆಜ್ಜಾರ್ಲೆ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:40 IST
Last Updated 30 ಅಕ್ಟೋಬರ್ 2018, 19:40 IST

ಭಾರತೀನಗರ (ಮಂಡ್ಯ): ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಹೆಜ್ಜಾರ್ಲೆ (ಪೆಲಿಕಾನ್) ಪಕ್ಷಿ ಮಂಗಳವಾರ ಮೃತಪಟ್ಟಿದೆ.

ಸಾವಿಗೆ ಕಾರಣ ತಿಳಿದುಬಂದಿಲ್ಲ. ಕಳೆದ ವರ್ಷ ಜಂತುಹುಳು ಹಾಗೂ ಇನ್ನಿತರ ಕಾರಣಗಳಿಂದ 65 ಪೆಲಿಕಾನ್‌ಗಳು ಸಾವನ್ನಪ್ಪಿದ್ದವು. ಈ ವರ್ಷದ ಆರಂಭದಲ್ಲೇ ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತಪಟ್ಟ ಹೆಜ್ಜಾರ್ಲೆಯನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪಶುವೈದ್ಯಕೀಯ ಪ್ರಯೋಗಾಲಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ರವಾನಿಸಿದ್ದಾರೆ.

ಹೆಜ್ಜಾರ್ಲೆ ಸಾವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚಿ, ಹಕ್ಕಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.