ADVERTISEMENT

ನ್ಯಾಯಾಧೀಶರ ವಿರುದ್ಧವೇ ಖಾಸಗಿ ದೂರು: ಕ್ರಿಮಿನಲ್ ಅರ್ಜಿ ದಾಖಲು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:26 IST
Last Updated 22 ಜುಲೈ 2020, 9:26 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬಳ್ಳಾರಿ ಜಿಲ್ಲೆಯ ನ್ಯಾಯಾಧೀಶರ ವಿರುದ್ಧವೇ ಖಾಸಗಿ ದೂರು ದಾಖಲಿಸಿದ್ದ ವ್ಯಕ್ತಿಯ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್ ಅರ್ಜಿ ದಾಖಲಿಸಿಕೊಂಡಿದೆ.

ಬಳ್ಳಾರಿ ಜಿಲ್ಲೆಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜೆ.ಎಸ್. ವಿಜಯಕುಮಾರ್ ವಿರುದ್ಧಸಿ.ಎಂ. ಮಂಜುನಾಥ ಎಂಬುವರು ದೂರು ದಾಖಲಿಸಿದ್ದರು.

ದೂರು ಸಲ್ಲಿಸುವ ಮುನ್ನ ಮಂಜುನಾಥ್ ಅವರು ಮುಖ್ಯ ನ್ಯಾಯಮೂರ್ತಿ ಅವರಿಗೆ ಅಹವಾಲು ಸಲ್ಲಿಸಿದ್ದರು. ‘ನ್ಯಾಯಾಧೀಶರಾದ ವಿಜಯಕುಮಾರ್ ಅವರು ನನ್ನನ್ನು 14 ದಿನ ಜೈಲಿಗೆ ಕಳುಹಿಸಿದ್ದಾರೆ’ ಎಂದು ಅದರಲ್ಲಿ ತಿಳಿಸಿದ್ದರು. ಅಲ್ಲದೇ ಜೈಲಿಗೆ ಕಳುಹಿಸಿದ್ದರ ವಿರುದ್ಧ ಪ್ರತಿಭಟನಾ ಅರ್ಜಿಯನ್ನೂ ದಾಖಲಿಸಿದ್ದರು.

ADVERTISEMENT

ಅಹವಾಲು ಆಧರಿಸಿ ಮುಖ್ಯ ನ್ಯಾಯಮೂರ್ತಿ ಅವರ ಕಾರ್ಯದರ್ಶಿ ಅವರು ಮಂಜುನಾಥ್‌ಗೆ ಹಿಂಬರಹ ಕಳುಹಿಸಿದ್ದರು. ‘ನ್ಯಾಯಾಂಗದಲ್ಲಿ ಪರಿಹಾರ ಇದೆ’ ಎಂದು ತಿಳಿಸಿದ್ದರು. ಹಿಂಬರಹವನ್ನು ತಪ್ಪಾಗಿ ಅರ್ಥೈಸಿಕೊಂಡ ಮಂಜುನಾಥ್, ನ್ಯಾಯಾಧೀಶರ ವಿರುದ್ಧವೇ ವಿಚಾರಣೆಗೆ ಮುಖ್ಯನ್ಯಾಯಮೂರ್ತಿ ಅನುಮತಿ ನೀಡಿದ್ದಾರೆ ಎಂದು ಭಾವಿಸಿಕೊಂಡರು. ಬಳಿಕ ಖಾಸಗಿ ದೂರು ದಾಖಲಿಸಿದ್ದರು.

‘ನ್ಯಾಯಾಧೀಶರ ಸಂಪೂರ್ಣ ರಕ್ಷಣೆಯ ಅವಕಾಶ ಕಾನೂನಿನಲ್ಲಿ ಇದೆ. ಹೀಗಾಗಿ, ಖಾಸಗಿ ದೂರು ದಾಖಲಿಸುವುದಕ್ಕೆ ಉತ್ತೇಜನ ನೀಡುವುದಿಲ್ಲ. ಸಿಆರ್‌ಪಿಸಿ ಕಾಯ್ದೆಯ ಸೆಕ್ಷನ್ 482 ಪ್ರಕಾರ ಮಂಜುನಾಥ್ ವಿರುದ್ಧ ಕ್ರಿಮಿನಲ್ ಅರ್ಜಿ ದಾಖಲಿಸಿ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನಿರ್ದೇಶನ ನೀಡಿದರು.ವಿಚಾರಣೆಯನ್ನುಜುಲೈ 27ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.