ADVERTISEMENT

ತನಿಖೆ ಹಂತದಲ್ಲೇ ಎಪಿಪಿಗಳಿಗೆ ಬಡ್ತಿ; ತಕರಾರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 19:03 IST
Last Updated 7 ನವೆಂಬರ್ 2020, 19:03 IST

ಬೆಂಗಳೂರು: ‘ಅಕ್ರಮ ನೇಮಕಾತಿ ಸಂಬಂಧ ಲೋಕಾಯುಕ್ತರ ತನಿಖೆ ನಡೆ ಯುತ್ತಿರುವಾಗಲೇ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ (ಎಪಿಪಿ) ತರಾ ತುರಿಯಲ್ಲಿ ಬಡ್ತಿ ನೀಡಲು ಗೃಹ ಇಲಾಖೆ ಮುಂದಾಗಿದೆ’ ಎಂದು ತುಮಕೂರಿನ ವಕೀಲ ಪಿ.ಸಿ. ಈಶ್ವರಪ್ಪ ದೂರಿದ್ದಾರೆ.

ಈ ಬಗ್ಗೆ ಗೃಹಸಚಿವರಿಗೆ ಪತ್ರ ಬರೆ ದಿರುವ ಅವರು, ‘2014ನೇ ಸಾಲಿನ ಎಪಿಪಿ ನೇಮಕಾತಿಯಲ್ಲಿ ಅಕ್ರಮ ನಡೆ ದಿದ್ದು, ಈ ಸಂಬಂಧ 64 ಮಂದಿ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಗಳ ಜೊತೆ ಶಾಮೀಲಾಗಿರುವ ತನಿಖಾಧಿಕಾರಿ, ಕೆಲ ವಕೀಲರ ಹೆಸ ರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪ್ರತ್ಯೇಕ ತನಿಖೆ ಆರಂಭಿಸಿದೆ. ಈ ಮಧ್ಯೆಯೇ ಎಪಿಪಿಗಳಿಗೆ ಬಡ್ತಿ ನೀಡುತ್ತಿರುವುದು ಸರಿಯಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ.

‘ನೇಮಕಾತಿ ಅಧಿಸೂಚನೆ ರದ್ದತಿಗೆ ಕೋರಿ ಹೋರಾಟಗಾರ ಎಸ್‌.ಆರ್. ಹಿರೇಮಠ ಕೂಡಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾನೂ ಲೋಕಾ ಯುಕ್ತರಿಗೆ ದೂರು ನೀಡಿದ್ದು, ಅದರ ತನಿಖೆಯೂ ಶುರುವಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಬಡ್ತಿ ನೀಡಬಾರದು’ ಎಂದೂ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.