ADVERTISEMENT

ಕುಂದಾಪುರದ ಸ್ವಾತಿ ಪೈಗೆ ರಾಜ್ಯಕ್ಕೆ 4ನೇ ಸ್ಥಾನ

ಪಿ.ಯು ಪರೀಕ್ಷಾ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:02 IST
Last Updated 14 ಜುಲೈ 2020, 15:02 IST
ಪಿ.ಯು ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ ಸ್ವಾತಿ ಪೈ ಅವರು ತಂದೆ ಶಿವಾನಂದ ಪೈ ಹಾಗೂ ತಾಯಿ ಶಿಲ್ಪಾ ಎಸ್‌. ಪೈ ಅವರೊಂದಿಗೆ ಇದ್ದಾರೆ.
ಪಿ.ಯು ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ ಸ್ವಾತಿ ಪೈ ಅವರು ತಂದೆ ಶಿವಾನಂದ ಪೈ ಹಾಗೂ ತಾಯಿ ಶಿಲ್ಪಾ ಎಸ್‌. ಪೈ ಅವರೊಂದಿಗೆ ಇದ್ದಾರೆ.   

ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ವಾತಿ ಪೈ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಜತೆಗೆ ಅವರು, ಸಂಸ್ಕೃತ, ಸಂಖ್ಯಾಶಾಸ್ತ್ರ, ಅಕೌಂಟೆನ್ಸಿ ಹಾಗೂ ಬಿಸಿನೆಸ್‌ ಸ್ಟಡೀಸ್‌ಗಳಲ್ಲಿ ಶೇಕಡ 100 ಅಂಕಗಳನ್ನು ಪಡೆದಿದ್ದಾರೆ. ಇಂಗ್ಲಿಷ್‌ ಹಾಗೂ ಅರ್ಥಶಾಸ್ತ್ರದಲ್ಲಿ ಶೇ 97 ಅಂಕಗಳನ್ನು ಪಡೆದುಕೊಂಡಿದ್ದಾರೆ.

‘ಇಲ್ಲಿಯ ಬಟ್ಟೆ ಮಳಿಗೆ ಮಾಲೀಕ ಶಿವಾನಂದ ಪೈ ಹಾಗೂ ತಾಯಿ ಶಿಲ್ಪಾ ಎಸ್‌ . ಪೈ ಅವರ ಪ್ರೇರಣೆ ಸ್ವಾತಿಯ ಕಲಿಯುವಿಕೆಯ ಆಸಕ್ತಿಯನ್ನು ಹೆಚ್ಚಿಸಿದೆ. ಮನೆಪಾಠ (ಟ್ಯೂಷನ್‌)ಇರಲಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರು ನೀಡುತ್ತಿದ್ದ ಬೋಧನೆ ಹಾಗೂ ಸ್ವಂತ ಪರಿಶ್ರಮ ಅಂಕಗಳಿಕೆಯ ಹಿಂದಿರುವ ಶಕ್ತಿ. ಭವಿಷ್ಯದಲ್ಲಿ ಲೆಕ್ಕಪರಿಶೋಧಕಳಾಗಬೇಕು’ ಎನ್ನುವ ಗುರಿಯನ್ನು ಹೊಂದಿದ್ದಾರೆ. ಪದವಿ ಶಿಕ್ಷಣದ ಬಳಿಕ ಚಾರ್ಟರ್ಡ್‌ ಅಕೌಂಟೆಂಟ್‌ (ಸಿಎ)ಪದವಿಗೆ ಅಗತ್ಯವಿರುವ ಪೂರಕ ಪರೀಕ್ಷೆಯೊಂದಿಗೆ ಗುರಿ ಮುಟ್ಟುವ ಭರವಸೆಯಲ್ಲಿ ಇದ್ದಾರೆ.

ADVERTISEMENT

1 ರಿಂದ 12 ನೇ ತರಗತಿಯವರೆಗೆ ವೆಂಕಟರಮಣ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಸ್ವಾತಿಗೆ ಕಾದಂಬರಿ ಓದುವುದು, ಇಂಗ್ಲಿಷ್‌ ಭಾಷಣ ಹಾಗೂ ಪ್ರಬಂಧ ಮಂಡನೆಯ ಆಸಕ್ತಿಗಳಿವೆ. ಉತ್ತಮ ನಿರೂಪಕಿಯೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.