ಕೆಂಗೇರಿ: ‘ಸಂಪೂರ್ಣ ಅಧ್ಯಯನ ಮಾಡದೆ ಬಜೆಟ್ ಕುರಿತು ಹೇಳಿಕೆ ನೀಡಿರುವ ಆರ್. ಅಶೋಕ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯೋಗ್ಯರಲ್ಲ’ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗರಿಗೆ ಅಧ್ಯಯನದ ಕೊರತೆಯಿದೆ. 197 ಪುಟಗಳ ಬಜೆಟ್ ಪ್ರತಿಯನ್ನು ಸಂಪೂರ್ಣವಾಗಿ ಪರಾಮರ್ಶಿಸದೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರನ್ನು ಮೇಲೆತ್ತುವ ಗುರಿಯೊಂದಿಗೆ ಬಜೆಟ್ ಮಂಡಿಸಲಾಗಿದೆ. ಅಧ್ಯಯನದ ಕೊರತೆಯಿಂದ ವಿಪಕ್ಷ ನಾಯಕ ಹಲಾಲ್ ಬಜೆಟ್ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿಗರಿಗೆ ಜನರ ಭಾವನೆಯನ್ನು ಕೆರಳಿಸುವುದೇ ಕಾಯಕವಾಗಿದೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
‘ಬಜೆಟ್‌ನಲ್ಲಿ ನ್ಯೂನತೆಗಳಿದ್ದರೆ ವಿಪಕ್ಷ ನಾಯಕ ಸ್ಥಾನದಲ್ಲಿರುವವರು ಅದನ್ನು ಸದನ ಮುಂದೆ ಇಟ್ಟು ಚರ್ಚಿಸಬೇಕು. ಯಾರೋ ಪಕ್ಕದಲ್ಲಿದ್ದವರು ಬೋಗಸ್ ಬಜೆಟ್ ಎಂದರೆ ಅದನ್ನೇ ಪುನರುಚ್ಚರಿಸುವ ಕೆಲಸ ಮಾಡಬಾರದು’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.