ADVERTISEMENT

ಮಳೆ: ಇಂದಿನಿಂದ ‘ಆರೆಂಜ್‌ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 20:00 IST
Last Updated 9 ಆಗಸ್ಟ್ 2019, 20:00 IST
ಧಾರವಾಡದ ಅಳ್ನಾವರ ತಾಲ್ಲೂಕಿನ ಹೂಲಿಕೆರೆ ಉಕ್ಕಿಹರಿಯುತ್ತಿದ್ದು ಅಕ್ಕಪಕ್ಕದ ಗುಡ್ಡವನ್ನು ಕೊರೆದು ನೀರು ಸಾಗುತ್ತಿದೆ
ಧಾರವಾಡದ ಅಳ್ನಾವರ ತಾಲ್ಲೂಕಿನ ಹೂಲಿಕೆರೆ ಉಕ್ಕಿಹರಿಯುತ್ತಿದ್ದು ಅಕ್ಕಪಕ್ಕದ ಗುಡ್ಡವನ್ನು ಕೊರೆದು ನೀರು ಸಾಗುತ್ತಿದೆ   

ಬೆಂಗಳೂರು: ‘ಆಗಸ್ಟ್‌ 10ರಿಂದ 12ರವರೆಗೆ ರಾಜ್ಯದಾದ್ಯಂತ 20 ಸೆಂ.ಮೀಗಿಂತ ಹೆಚ್ಚು ಮಳೆಯಾಗಲಿದೆ. ಹೀಗಾಗಿ ‘ಆರೆಂಜ್ ಅಲರ್ಟ್‌’ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಗಾವಿ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಶನಿವಾರ ಮಳೆ ಪ್ರಮಾಣ ಕಡಿಮೆ ಆಗಲಿದೆ. ಕರಾವಳಿ ಭಾಗದಲ್ಲಿ ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನಿಂದ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.1ಮೀಟರ್‌ನಷ್ಟು ಎತ್ತರದ ಅಲೆಗಳೂ ಏಳುತ್ತಿವೆ’ ಎಂದರು.

ಮಂಗಳೂರು, ಕಾರವಾರಗಳಲ್ಲಿಆಗಸ್ಟ್‌ 10 ಮತ್ತು 11ರಂದು ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ‌. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ’ ಎಂದವರು ತಿಳಿಸಿದರು.

ADVERTISEMENT

ಶುಕ್ರವಾರ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 40 ಸೆಂ.ಮೀ.ಮಳೆಯಾಗಿದೆ. ಯಲ್ಲಾಪುರ 30, ಹುಂಚದಕಟ್ಟೆ 29, ವಿರಾಜಪೇಟೆ, ಕಳಸ 27, ಸರಗೂರು 23, ಮೂಡಿಗೆರೆ 22, ಶೃಂಗೇರಿ 21, ಕೊಪ್ಪ 20, ಮಡಿಕೇರಿ 18, ಸಾಗರ 11, ಧರ್ಮಸ್ಥಳ 9, ಹಾರಂಗಿ 7ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.