ADVERTISEMENT

ಸಚಿವ ಆಗೋದರಲ್ಲಿ ಅರ್ಥವಿಲ್ಲ: ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 17:44 IST
Last Updated 9 ಜೂನ್ 2019, 17:44 IST
ಸಿಂದಗಿಯಲ್ಲಿ ಭಾನುವಾರ ಸಂಜೆ ಬಿಜೆಪಿ ಮಂಡಲ ವತಿಯಿಂದ ನೂತನ ಸಂಸದ ರಮೇಶ ಜಿಗಜಿಣಗಿ ಅವರನ್ನು ಅಭಿನಂದಿಸಲಾಯಿತು
ಸಿಂದಗಿಯಲ್ಲಿ ಭಾನುವಾರ ಸಂಜೆ ಬಿಜೆಪಿ ಮಂಡಲ ವತಿಯಿಂದ ನೂತನ ಸಂಸದ ರಮೇಶ ಜಿಗಜಿಣಗಿ ಅವರನ್ನು ಅಭಿನಂದಿಸಲಾಯಿತು   

ಸಿಂದಗಿ: ‘ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಪಾಲು ಕೇಳಲು ಅದೇನು ಮನೆ ಆಸ್ತೀನಾ? ಸಚಿವನಾಗೋದರಲ್ಲಿ ಏನೂ ಅರ್ಥವಿಲ್ಲ. ಅದನ್ನು ತಲೆಯಲ್ಲಿ ಇಟ್ಟುಕೊಂಡಿಲ್ಲ. ಜನರ ಸೇವೆ ಮಾಡುವುದಷ್ಟೇ ನನ್ನ ಕೆಲಸ’ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಭಾನುವಾರ ಸಂಜೆ ಸಿಂದಗಿಯಲ್ಲಿ ಬಿಜೆಪಿ ಮಂಡಲ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮಿಸಬೇಕಿದೆ. ಈಗಾಗಲೇ ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀಶೇಡಬಾಳ ರೈಲು ಮಾರ್ಗವನ್ನು ಸಿಂದಗಿ ಮಾರ್ಗವಾಗಿ ವಾಡಿಯವರೆಗೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವೆ’ ಎಂದು ಹೇಳಿದರು.

ADVERTISEMENT

‘ನನ್ನ 45 ವರ್ಷದ ರಾಜಕೀಯದ ತತ್ವ ಇಷ್ಟೇ, ಎಲ್ಲರನ್ನೂ ಸಮದೃಷ್ಟಿಯಿಂದ ನೋಡಬೇಕು. ಇದು ನನ್ನ ರಾಜಕೀಯ ಗುರುಗಳಾದ ಜೆ.ಎಚ್.ಪಟೇಲ, ರಾಮಕೃಷ್ಣ ಹೆಗಡೆ ಅವರಿಂದ ಕಲಿತ ರಾಜಕಾರಣ ಇದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.