ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದರೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಜೂನ್ 3ರಂದೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ (ಕೆಎಸ್‌ಸಿಎ) ಪತ್ರ ಬರೆದಿತ್ತು.
ಕೆಎಸ್‌ಸಿಎ ಕಾರ್ಯನಿರ್ವಾಹಕ ಅಧಿಕಾರಿ ಶುಭೇಂದು ಘೋಷ್ ಅವರು ಈ ಪತ್ರ ಬರೆದಿದ್ದರು.
ಪತ್ರದಲ್ಲಿ ಏನಿತ್ತು?:
‘ಟಾಟಾ ಐಪಿಎಲ್ –2025 ಅಂತಿಮ ಪಂದ್ಯದಲ್ಲಿ ಒಂದೊಮ್ಮೆ ಆರ್‌ಸಿಬಿ ತಂಡ ಟ್ರೋಪಿಯನ್ನು ಗೆದ್ದರೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದನೆ ಸಮಾರಂಭವನ್ನು ಆಯೋಜಿಸಲು ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ ಪ್ರೈವೇಟ್ ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಆರ್‌ಸಿಬಿ ಆಟಗಾರರನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸತ್ಕರಿಸಲಿದ್ದಾರೆ. ಕಾರ್ಯಕ್ರಮ ಆಯೋಜನೆಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಡಿಎನ್‌ಎ ಸಂಸ್ಥೆಗೆ ಅನುಮತಿ ನೀಡಬೇಕೆಂದು ಕೆಎಸ್‌ಸಿಎ ತಮ್ಮಲ್ಲಿ ಮನವಿ ಮಾಡುತ್ತಿದೆ’ ಎಂದು ಈ ಪತ್ರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.