ADVERTISEMENT

₹ 3 ಕೋಟಿ ಆಮಿಷ ಆರೋಪ| ಆನ್‌ಲೈನ್‌ ಹೇಳಿಕೆಗೆ ಸಿದ್ಧ: ‘ಒಡನಾಡಿ’ ಪರಶುರಾಮ್

ಚಿತ್ರದುರ್ಗ ಡಿವೈಎಸ್ಪಿ ನೋಟಿಸ್‌ಗೆ ಪತ್ರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 17:23 IST
Last Updated 29 ನವೆಂಬರ್ 2022, 17:23 IST
ಎಂ.ಎಲ್‌.ಪರಶುರಾಮ್‌
ಎಂ.ಎಲ್‌.ಪರಶುರಾಮ್‌   

ಮೈಸೂರು: ‘ಮುರುಘಾ ಶರಣರ ಪ್ರಕರಣದಿಂದ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಕುರಿತ ನನ್ನಹೇಳಿಕೆಗೆಸಾಕ್ಷ್ಯಧಾರ ನೀಡಲು ಇದೇ 29ರಂದು ಚಿತ್ರದುರ್ಗಕ್ಕೆ ಬರುವಂತೆ ತಿಳಿಸಲಾಗಿದ್ದು, ಬೆನ್ನುನೋವಿನ ಕಾರಣ ದೂರ ಪ್ರಯಾಣ ಮಾಡಲು ಆಗಿಲ್ಲ. ಹೀಗಾಗಿ, ಗೂಗಲ್‌ ಮೀಟ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಹೇಳಿಕೆ ಪರಿಗಣಿಸಬೇಕು’ ಎಂದುಒಡನಾಡಿಸಂಸ್ಥೆ ನಿರ್ದೇಶಕ ಎಂ.ಎಲ್‌.ಪರಶು‍ರಾಮ್‌ ಅವರು ಚಿತ್ರದುರ್ಗ ಪೊಲೀಸರಿಗೆಮಂಗಳವಾರ ಪತ್ರಬರೆದಿದ್ದಾರೆ.

‘ಚಿತ್ರದುರ್ಗದಸಂತ್ರಸ್ತಬಾಲಕಿಯರಕುರಿತು ವಿಚಾರಣೆಗೆಹಾಜರಾಗುವಂತೆನ.30ರಂದು ಮಕ್ಕಳ ಕಲ್ಯಾಣ ಸಮಿತಿ ಪತ್ರ ಬರೆದಿದೆ. ಎರಡೂ ವಿಚಾರಗಳೂ ಮುಖ್ಯವಾಗಿವೆ. ಈಗಾಗಲೇ ಫೋನ್ ಮೂಲಕ ನನ್ನ ಅನಾರೋಗ್ಯವನ್ನು ಗಮನಕ್ಕೆ ತಂದಿದ್ದೇನೆ. ಮತ್ತೊಂದು ದಿನಾಂಕ ನಿಗದಿಗೊಳಿಸಬೇಕು. ಇಲ್ಲವೇ,ಆನ್‌ಲೈನ್‌ ಮೂಲಕ ಹೇಳಿಕೆ ಪಡೆಯಬೇಕು’ ಎಂದು ಕೋರಿದ್ದಾರೆ.

‘ಚಿತ್ರದುರ್ಗ ಪೊಲೀಸರು ಮೈಸೂರಿಗೇ ಬಂದು ಹೇಳಿಕೆ ಪಡೆಯಬಹುದು. ಅಂತೆಯೇ ಈ ಪ್ರಕರಣಗಳಲ್ಲಿ ಜೀವ ಬೆದರಿಕೆ ಇರುವುದರಿಂದ ವಿಶೇಷ ಅವಕಾಶ ಕಲ್ಪಿಸಿದರೆ, ಸಿಆರ್‌ಪಿಸಿ ಕಲಂ 164 ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆಗಳನ್ನು ನೀಡಲು ಸಿದ್ಧನಿದ್ದೇನೆ. ಸೂಕ್ತ ಸ್ಥಳ ನಿಗದಿಗೊಳಿಸಿ ಹಾಗೂ ರಕ್ಷಣೆ ಒದಗಿಸಬೇಕು’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.