ADVERTISEMENT

ಆರ್‌ಟಿ–ಪಿಸಿಆರ್ ಕಿಟ್‌ ಬಳಕೆಯ ಮಾಹಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:51 IST
Last Updated 17 ಜನವರಿ 2022, 16:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೋವಿಡ್‌–19 ಪರೀಕ್ಷೆಗೆ ಆರ್‌ಟಿ–ಪಿಸಿಆರ್ ಮತ್ತು ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ಗಳನ್ನು ಖರೀದಿಸುತ್ತಿರುವ ಗ್ರಾಹಕರ ವಿವರಗಳನ್ನು ಸಂಗ್ರಹಿಸಲು ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.

‘ಕಿಟ್‌ಗಳನ್ನು ಗ್ರಾಹಕರೇ ನೇರವಾಗಿ ಖರೀದಿಸಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ, ಸೋಂಕು ದೃಢವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಹೀಗಾಗಿ, ಗ್ರಾಹಕರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ವಿತರಕರು ಮತ್ತು ಔಷಧ ಅಂಗಡಿ ವ್ಯಾಪಾರಿಗಳಿಂದ ಉಪ ಔಷಧ ನಿಯಂತ್ರಕರು ಪಡೆದು ಸಲ್ಲಿಸಬೇಕು’ ಎಂದು ಸುತ್ತೋಲೆ ಹೊರಡಿಸಲಾಗಿದೆ.

‘ವಿವರಗಳನ್ನು ಪ್ರತಿ ದಿನ ಸಂಜೆ 6 ಗಂಟೆ ಒಳಗೆ drkempaiahsuresh@gmail.com ಮತ್ತು dckarnataka@gmail.com ಮೇಲ್‌ಗೆ ಕಳುಹಿಸಬೇಕು’ ಎಂದುಔಷಧ ನಿಯಂತ್ರಕರು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.