ADVERTISEMENT

ನಾನು ಅಡ್ಡಗೋಡೆ ಮೇಲೆ ಕೂತಿದ್ದೀನಿ: ಎಂಟಿಬಿ ನಾಗರಾಜ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 4:48 IST
Last Updated 13 ಜುಲೈ 2019, 4:48 IST
   

ಬೆಂಗಳೂರು: ‘ನೋಡೋಣ ಮುಂದೆ ನಮ್ಮ ನಾಯಕರು, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಏನು ತೀರ್ಮಾನ ತಗೊಳ್ತಾರೆ ಆಂತ. ನಾನಂತೂ ಅಡ್ಡಗೋಡೆ ಮೇಲೆ ಕೂತಿದ್ದೀನಿ. ರಾಜೀನಾಮೆ ಬಗ್ಗೆ ಖಡಕ್ ನಿರ್ಧಾರವೂ ಇಲ್ಲ, ವಾಪಸ್ ತಗೊಬಾರದು ಅಂತ್ಲೂ ಇಲ್ಲ’ ಎಂದುಶುಕ್ರವಾರ (ಜುಲೈ 12) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ತಮ್ಮ ನಿಲುವು ತಿಳಿಸಿದ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಯಲ್ಲಿ ಇದ್ದ ಹಲವರು ಅತೃಪ್ತಿಯಿಂದ ದೂರದ ಮುಂಬೈಗೆ ಹೋಗಿದ್ದಾರೆ. ಅವರು ಮೊದಲೇ ತಮ್ಮ ಅತೃಪ್ತಿಯನ್ನು ಹೇಳಿಕೊಂಡಿದ್ದರು. ಆಗ ಇವರು ಯಾಕೆ ಸರಿಮಾಡಲಿಲ್ಲ.‘ಮಾತನಾಡಿ ಬಗೆಹರಿಸಿ’ ಅಂತ ಸಿದ್ದರಾಮಯ್ಯ ಅವರಿಗೆ ನಾನೂ ಹೇಳಿದ್ದೆ. ನಾನು ಮತ್ತು ಸುಧಾಕರ ಇಲ್ಲೇ ಇದ್ದೀವಿ. ಎಲ್ಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಬಗ್ಗೆ ಏನೂ ಬೇಸವಿಲ್ಲ. ಅವರು ನನಗೆ ಯಾವತ್ತಿದ್ರೂ ನಾಯಕರು’ ಎಂದು ಸ್ಪಷ್ಟಪಡಿಸಿದ್ದರು.

‘ಮೈತ್ರಿ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಬೇಸರವಿದೆ. ಆಡಳಿತ ವಿಧಾನದಲ್ಲಿ ಬದಲಾವಣೆ ಆಗಬೇಕು. ಮೈತ್ರಿ ಸರ್ಕಾರದ ಸಮಾನತೆಯ ಧರ್ಮ ಪಾಲಿಸಲಿಲ್ಲ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಿ ಅಂತ ನಾನು ಹೇಳಲ್ಲ’ ಎಂದು ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.